IPL 2021: RCB ಕೈಬಿಟ್ಟ ಭಾರತೀಯ ಆಟಗಾರನ ಖರೀದಿಗೆ ಮುಂದಾದ CSK: ಯಾರು ಗೊತ್ತಾ?

ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮತ್ತೊಬ್ಬ ಆಟಗಾರನನ್ನು ಕೊಂಡುಕೊಳ್ಳಲು ಹೊಂಚು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಅದು ಆರ್​ಸಿಬಿ ತಂಡ ಕೈಬಿಟ್ಟ ಆಟಗಾರ ಎಂಬುದು ವಿಶೇಷ.

RCB CSK

RCB CSK

 • Share this:
  ಬೆಂಗಳೂರು (ಜ. 23): ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲಿ ಮೂರು ಬಾರಿಯ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ (ಸಿಎಸ್‌ಕೆ)ಗೆ ಕಳೆದ ಆವೃತ್ತಿ ಅತ್ಯಂತ ಕಳಪೆಯಾಗಿತ್ತು. ಧೋನಿ ತಂಡ ಹಿಂದೆಂದೂ ಆಡದ ರೀತಿಯಲ್ಲಿ ಕೆಟ್ಟ ಪ್ರದರ್ಶನ ನೀಡಿತ್ತು. ಮೊಟ್ಟ ಮೊದಲ ಬಾರಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿ ಟೂರ್ನಿಗೆ ಗುಡ್​ ಬೈ ಹೇಳಿತು. ಸದ್ಯ ಐಪಿಎಲ್ 2021 ರಲ್ಲಿ ಕಮ್​ಬ್ಯಾಕ್ ಮಾಡಿ 4ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಬಗ್ಗೆ ಚೆನ್ನೈ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ಕೂಡ ನಡೆಸುತ್ತಿದೆ.

  ಈಗಾಗಲೇ 2021ರ ಐಪಿಎಲ್‌ ಹರಾಜು ಪ್ರಕ್ರಿಯೆಗೂ ಮುನ್ನ ಸಿಎಸ್​ಕೆ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡಲಿರುವ ಆಟಗಾರರನ್ನು ಹೆಸರಿಸಿಯಾಗಿದೆ. ಶೇನ್ ವಾಟ್ಸನ್, ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿ ಒಟ್ಟು ಆರು ಆಟಗಾರರನ್ನ ಕೈಬಿಟ್ಟರೆ, ನಾಯಕ ಎಂಎಸ್ ಧೋನಿ ಸೇರಿ ಇಮ್ರಾನ್ ತಾಹಿರ್, ಸ್ಯಾಮ್ ಕುರ್ರನ್, ರವೀಂದ್ರ ಜಡೇಜಾ, ಫಾಫ್ ಡು ಪ್ಲೆಸಿಸ್ ಇಂಥ ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಂಡಿದೆ.

  Mohammed Siraj: ಭಾರತಕ್ಕೆ ಬಂದ ಬೆನ್ನಲ್ಲೇ ದೊಡ್ಡ ಕಾರು ಖರೀದಿ ಮಾಡಿದ ಮೊಹಮ್ಮದ್ ಸಿರಾಜ್

  ಈ ನಡುವೆ ರಾಜಸ್ಥಾನ ರಾಯಲ್ಸ್​ ಪರ 2020ರ ಐಪಿಎಲ್ ಆವೃತ್ತಿಯಲ್ಲಿ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪರನ್ನು ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಷ್​ ಡೀಲ್​ ಮೂಲಕ ಖರೀದಿಸಿದೆ. ಕೆಕೆಆರ್​ ತಂಡ ಕೈಬಿಟ್ಟ ಮೇಲೆ 2019ರ ಹರಾಜಿನಲ್ಲಿ ರಾಬಿನ್​ ಉತ್ತಪ್ಪರನ್ನು 3 ಕೋಟಿ ರೂಗೆ ರಾಜಸ್ಥಾನ್​ ರಾಯಲ್ಸ್ ತಂಡ ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಉತ್ತಪ್ಪ ಹೇಳಿಕೊಳ್ಳುವ ಪ್ರದರ್ಶನ ತೋರಿರಲಿಲ್ಲ.

  ಇದರ ಬೆನ್ನಲ್ಲೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮತ್ತೊಬ್ಬ ಆಟಗಾರನನ್ನು ಕೊಂಡುಕೊಳ್ಳಲು ಹೊಂಚು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಅದು ಆರ್​ಸಿಬಿ ತಂಡ ಕೈಬಿಟ್ಟ ಆಟಗಾರ ಎಂಬುದು ವಿಶೇಷ. ಹೌದು, ಕಳೆದ ಎರಡು ಆವೃತ್ತಿಗಳಲ್ಲೂ ದುಬಾರಿ ಬೌಲರ್ ಎನಿಸಿರುವ ಉಮೇಶ್‌ ಯಾದವ್‌ 4 ಕೋಟಿ ರುಪಾಯಿಗೆ ಬಿಡ್‌ ಆಗಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ಮೂಡಿ ಬರದ ಹಿನ್ನಲೆ ಆರ್​ಸಿಬಿ ಈ ಬಾರಿ ಇವರನ್ನು ಬಿಟ್ಟಿದೆ.

  ಸದ್ಯ ಉಮೇಶ್ ಯಾದವ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡ ಖರೀದಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕ ಎಂಬಂತೆ ಉಮೇಶ್ ಯಾದವ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಆರ್​ಸಿಬಿ ಖಾತೆಯನ್ನು ಅನ್​ಫಾಲೋ ಮಾಡಿ ಸಿಎಸ್​ಕೆ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗೆಗಿನ ಚರ್ಚೆ ಜೋರಾಗಿದೆ.

  ಇನ್ನೂ ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಸುರೇಶ್​ ರೈನಾ ಅವರನ್ನು ಚೆನ್ನೈ ತಂಡ ಉಳಿಸಿಕೊಂಡಿದ್ದು 2021ರ ಸೀಸನ್​ನಲ್ಲಿ ಸಿಎಸ್​ಕೆ ಪರ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಅಲ್ಲದೆ ಈ ಸೀಸನ್​ಗೆ 11 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಐಪಿಎಲ್​​​​ನಿಂದಲೇ 100 ಕೋಟಿ ಸಂಪಾದನೆ ಮಾಡಿದ 4ನೇ ಆಟಗಾರ ರೈನಾ ಎನಿಸಿದ್ದಾರೆ.

  IPL 2021 Auction : ಈ ದಿನದಂದು ನಡೆಯಲಿದೆ ಬಹುನಿರೀಕ್ಷಿತ ಐಪಿಎಲ್ 2021ರ ಹರಾಜು ಪ್ರಕ್ರಿಯೆ

  ಚೆನ್ನೈ ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಇಮ್ರಾನ್ ತಾಹಿರ್, ಲುಂಗಿ ಎನ್ಗಿಡಿ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ದೀಪಕ್ ಚಹರ್, ಎನ್ ಜಗದೀಶನ್, ಮಿಚೆಲ್ ಸಾಂಟ್ನರ್, ಕೆ.ಎಂ. ಆಸಿಫ್, ಶಾರ್ದುಲ್ ಠಾಕೂರ್, ಆರ್‌ ಸಾಯ್ ಕಿಶೋರ್, ಫಾಫ್ ಡು'ಪ್ಲೆಸಿಸ್‌, ಡ್ವೇಯ್ನ್ ಬ್ರಾವೋ, ಜಾಶ್ ಹೇಝಲ್‌ವುಡ್‌, ಸ್ಯಾಮ್‌ ಕರ್ರನ್, ಕರಣ್ ಶರ್ಮಾ.

  ಬಿಡುಗಡೆಯಾದ ಆಟಗಾರರು: ಹರ್ಭಜನ್ ಸಿಂಗ್, ಕೇದಾರ್‌ ಜಾಧವ್, ಪಿಯೂಶ್‌ ಚಾವ್ಲಾ, ಶೇನ್ ವಾಟ್ಸನ್ (ನಿವೃತ್ತಿ), ಮುರಳಿ ವಿಜಯ್, ಮೋನು ಕುಮಾರ್‌ ಸಿಂಗ್.
  Published by:Vinay Bhat
  First published: