IPL 2021| ಕೋವಿಶೀಲ್ಡ್ ಲಸಿಕೆ ಪಡೆದ ಅಭಿಮಾನಿಗಳಿಗೆ ಮಾತ್ರ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಅವಕಾಶ
ಯುಎಇ ಸರ್ಕಾರವು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುವುದು ಎಂದು ಉಲ್ಲೇಖಿಸಿದೆ. ಅದರಲ್ಲೂ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯ ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ಇದ್ದು, ಕೋವ್ಯಾಕ್ಸಿನ್ ಪಡೆದವರನ್ನು ಅನುಮತಿಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ
ಭಾರತದ ಮಿಲಿಯನ್ ಡಾಲರ್ ಟೂರ್ನಿ ಎಂದೇ ಖ್ಯಾತವಾದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2021) ದ್ವಿತಿಯಾರ್ಧ ಸೆಪ್ಟೆಂಬರ್ 19 ರಿಂದ ಯುಎಇ ಯಲ್ಲಿ ಆರಂಭವಾಗುತ್ತಿದೆ. ಕಳೆದ ವರ್ಷದ ಟೂರ್ನಿಯನ್ನೂ ಸಹ ಯುಎಇ ಅಂಗಳದಲ್ಲೇ ಆಯೋಜಿಸಲಾಗಿತ್ತು. ಆದರೆ, ಮಾರಕ ಕೊರೋನಾ ವೈರಸ್ (Corona Virus) ಕಾರಣಕ್ಕೆ ಪ್ರೇಕ್ಷರಿಗೆ ಸ್ಟೇಡಿಯಂನಲ್ಲಿ ಕುಳಿತು ಕ್ರಿಕೆಟ್ (Cricket) ನೋಡಲು ಅವಕಾಶ ನೀಡಲಾಗಿರಲಿಲ್ಲ. ಆದರೆ, ಎರಡು ವರ್ಷಗಳ ಬಳಿಕ ಜನಸಾಮಾನ್ಯರು ಸ್ಟೇಡಿಯಂನಲ್ಲಿ ಕೂತು ಐಪಿಎಲ್ (IPL2021) ಪಂದ್ಯಗಳನ್ನ ವೀಕ್ಷಿಸುವ ಅವಕಾಶ ಸಿಗುತ್ತಿದೆ. ಯುಎಇ ಕ್ರಿಕೆಟ್ ಮಂಡಳಿಯು (Emirates Cricket Board) ಕೆಲ ನಿರ್ಬಂಧಗಳೊಂದಿಗೆ ಸ್ಟೇಡಿಯಂ ಗಳಲ್ಲಿ ಜನರು ಪಂದ್ಯ ವೀಕ್ಷಿಸಲು ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ (ಸೆ. 16) ಟಿಕೆಟ್ ಮಾರಾಟ (Ticket sale) ಆರಂಭವಾಗಿದೆ. ಆದರೆ, ಭಾರತದ ಕ್ರಿಕೆಟ್ ಅಭಿಮಾನಿಗಳಿಗೂ ಸ್ಟೇಡಿಯಂ ಪ್ರವೇಶಿ ಸಿಲು ಅನುಮತಿ ಇದೆಯೇ ಎಂಬ ಪ್ರಶ್ನಿಗೆ ಕೊನೆಗೂ ಉತ್ತರ ಸಿಕ್ಕದ್ದು, ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಯುಎಇಗೆ ಆಗಮಿಸಿ ಕ್ರಿಕೆಟ್ ವೀಕ್ಷಿಸಲು ಅನುಮತಿ ನೀಡಲಾಗಿದೆ.
"ಹೌದು, ಈ ಬಾರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಯುಎಇ ಸ್ಟೇಡಿಯಂಗೆ ಅನುಮತಿಸಲಾಗುವುದು. ಏಕೆಂದರೆ ಬಿಸಿಸಿಐ ಮತ್ತು ಯುಎಇ ಸರ್ಕಾರವು ಪ್ರೇಕ್ಷಕರು ಕ್ರೀಡಾಂಗಣವನ್ನು ಪ್ರವೇಶಿಸಲು ಹಸಿರು ನಿಶಾನೆ ತೋರಿಸಿವೆ. "ಕೋವಿಡ್ ಭೀತಿಯನ್ನು ದೂರ ಮಾಡಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ" ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ಸರ್ಕಾರವು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುವುದು ಎಂದು ಉಲ್ಲೇಖಿಸಿದೆ. ಅದರಲ್ಲೂ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯ ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ಇದ್ದು, ಕೋವ್ಯಾಕ್ಸಿನ್ ಪಡೆದವರನ್ನು ಅನುಮತಿ ಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. "ಯುಎಇ ಕೂಡ ಕೋವಿಡ್ -19 ಪ್ರಕರಣ ಗಳ ಇಳಿಕೆಗೆ ಸಾಕ್ಷಿಯಾಗಿದೆ. ಹಾಗಾಗಿ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡೋಣ. ಆದರೆ ಇದೀಗ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ" ಎಂದು ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿಯೊಂದಿಗೆ ಐಪಿಎಲ್ 2021 ರ ಎರಡನೇ ಹಂತವು ಪುನರಾರಂಭಗೊಳ್ಳಲಿದೆ. ಒಟ್ಟಾರೆ, ಅರ್ಹತಾ ಪಂದ್ಯಗಳು ಸೇರಿದಂತೆ 31 ಪಂದ್ಯಗಳು 27 ದಿನಗಳ ಕಾಲ ನಡೆಯಲಿದೆ. ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ದುಬೈ (Dubai), ಅಬುಧಾಬಿ (Abu Dhabi) ಮತ್ತು ಶಾರ್ಜಾ (Sharjah) ನಗರಗಳಲ್ಲಿರುವ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಸೆ. 19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ಪಂದ್ಯಗಳು ನಡೆದು ಟೂರ್ನಿ ಸಮಾಪ್ತಿಗೊಳ್ಳಲಿದೆ. ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದು ಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ