news18-kannada Updated:February 23, 2021, 10:13 PM IST
ಸಾಂದರ್ಭಿಕ ಚಿತ್ರ
ಐಪಿಎಲ್ 2021ರ ಹರಾಜು ಪ್ರಕ್ರಿಯೆ ಮುಗಿದಿದ್ದು, ಎಲ್ಲಾ ತಂಡಗಳೂ ಕೂಡ ಘೋಷಣೆಯಾಗಿದೆ. ಈ ಹರಾಜಿನಲ್ಲಿ 8 ತಂಡಗಳು ಒಟ್ಟು 57 ಆಟಗಾರರನ್ನು ಖರೀದಿಸಿದೆ. ಇದರಲ್ಲಿ 4 ಕನ್ನಡಿಗರೂ ಕೂಡ ಒಳಗೊಂಡಿದ್ದಾರೆ. ಇನ್ನೂ ಒಟ್ಟಾರೆ ಐಪಿಎಲ್ ತಂಡಗಳಲ್ಲಿ ಒಟ್ಟು 11 ಕನ್ನಡಿಗರಿದ್ದಾರೆ. ಹಾಗಿದ್ರೆ ಈ ಬಾರಿ ಹರಾಜಿನಲ್ಲಿ ಬಿಕರಿಯಾದ ಕರ್ನಾಟಕದ ಆಟಗಾರರು ಯಾರು ಎಂದು ನೋಡೋಣ.
* ಕೃಷ್ಣಪ್ಪ ಗೌತಮ್: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಕರ್ನಾಟಕದ ಆಲ್ರೌಂಡರ್ ಕೃಷ್ಣಪ್ಪ ಗೌತಮ್ರನ್ನು 9.25 ಕೋಟಿ ರೂ. ನೀಡಿ ಖರೀದಿಸಿದೆ.
* ಕೆಸಿ ಕಾರ್ಯಪ್ಪ: ಕರ್ನಾಟಕದ ಸ್ಪಿನ್ನರ್ ಕೆಸಿ ಕಾರ್ಯಪ್ಪರನ್ನು ರಾಜಸ್ಥಾನ್ ರಾಯಲ್ಸ್ 20 ಲಕ್ಷ ರೂ. ನೀಡಿ ಖರೀದಿಸಿದೆ.
* ಜಗದೀಶ್ ಸುಚಿತ್: ಕಳೆದ ಸೀಸನ್ನಲ್ಲಿ ಪಂಜಾಬ್ ಪರ ಆಡಿದ್ದ ಸುಚಿತ್ ಈ ಬಾರಿ 30 ಲಕ್ಷಕ್ಕೆ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ.
* ಕರುಣ್ ನಾಯರ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 50 ಲಕ್ಷ ರೂ. ನೀಡಿ ಕರುಣ್ ನಾಯರ್ನ್ನು ಖರೀದಿಸಿದೆ.
ಈ ನಾಲ್ವರನ್ನು ಒಳಗೊಂಡಂತೆ ಕರ್ನಾಟಕದ ಒಟ್ಟು 11 ಆಟಗಾರರು ಈ ಬಾರಿಯ ಐಪಿಎಲ್ ತಂಡಗಳಲ್ಲಿದ್ದಾರೆ. ರಾಜ್ಯವಾರು ಆಟಗಾರರ ಅಂಕಿ ಅಂಶಗಳನ್ನು ಗಮನಿಸಿದರೆ ಹರ್ಯಾಣದ 5 ಆಟಗಾರರಿದ್ದಾರೆ. ಹಾಗೆಯೇ ಕೇರಳ 8 ಆಟಗಾರರು ಐಪಿಎಲ್ ಆಡಲಿದ್ದಾರೆ.
ಇನ್ನು ತಮಿಳುನಾಡಿನ 13 ಹಾಗೂ ಉತ್ತರಪ್ರದೇಶದ 11 ಆಟಗಾರರು ಐಪಿಎಲ್ ತಂಡಗಳಲ್ಲಿದ್ದಾರೆ. ದೆಹಲಿ ರಾಜ್ಯವನ್ನು ಪ್ರತಿನಿಧಿಸುವ 9 ಆಟಗಾರರು, ರಾಜಸ್ಥಾನ್ನ 7 ಆಟಗಾರರು ಹಾಗೂ ಮುಂಬೈಯನ್ನು ಪ್ರತಿನಿಧಿಸುವ 12 ಆಟಗಾರರು ಐಪಿಎಲ್ ತಂಡಗಳಲ್ಲಿದ್ದಾರೆ.
ಹಾಗೆಯೇ ಜಾರ್ಖಂಡ್ ಮೂಲದ 6, ಪಶ್ಚಿಮ ಬಂಗಾಳದ 5 ಹಾಗೂ ಬರೋಡಾ 4 ಆಟಗಾರರು ಐಪಿಎಲ್ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಗುಜರಾತ್ನ 4, ಮಹರಾಷ್ಟ್ರದ 3 ಹಾಗೂ ಸೌರಾಷ್ಟ್ರವನ್ನು ಪ್ರತಿನಿಧಿಸುವ 4 ಆಟಗಾರರು ಐಪಿಎಲ್ ಆಡಲಿದ್ದಾರೆ. ಅದೇ ರೀತಿ ಮಧ್ಯಪ್ರದೇಶದ 3 ಆಟಗಾರರು, ಆಂಧ್ರಪ್ರದೇಶ 4 ಕ್ರಿಕೆಟಿಗರು ಹಾಗೂ ಕರ್ನಾಟಕದ 11 ಆಟಗಾರರು ಐಪಿಎಲ್ನ ವಿವಿಧ ತಂಡಗಳಲ್ಲಿದ್ದಾರೆ.
Published by:
zahir
First published:
February 23, 2021, 10:13 PM IST