Shikhar Dhawan| ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್ ಮರಳಿರುವುದರಿಂದ ತಂಡದ ಸಾಮರ್ಥ್ಯ ಹೆಚ್ಚಾಗಿದೆ: ಶಿಖರ್ ಧವನ್

ಶ್ರೇಯಸ್ ತಂಡಕ್ಕೆ ಮರಳಿರುವುದು ನೂರಾನೆ ಬಲ ನೀಡಿದ್ದು, ನಾವು ಹಿಂದಿನ ಫಾರ್ಮ್‌ಗೆ ಮರಳುತ್ತೇವೆ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಶಿಖರ್ ಆತ್ಮವಿಶ್ವಾಸದಿಂದ ತಿಳಿಸಿದ್ದಾರೆ.

ಶಿಖರ್ ಧವನ್-ಶ್ರೇಯಸ್ ಅಯ್ಯರ್.

ಶಿಖರ್ ಧವನ್-ಶ್ರೇಯಸ್ ಅಯ್ಯರ್.

 • Share this:

  ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಕಡೆಗೆ ಚಿತ್ತ ನೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಮರಳುವಿಕೆಯು ಹೆಚ್ಚಿನ ಸಾಮರ್ಥ್ಯ ನೀಡಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಹಿರಿಯ ಬ್ಯಾಟ್ಸ್‌ಮನ್ ಶಿಖರ್ ಧವನ್ ತಿಳಿಸಿದ್ದು, ಕ್ರಿಕೆಟ್ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಕೋವಿಡ್ ಕೇಸ್‌ಗಳು ಆಟಗಾರರಲ್ಲಿ ಪತ್ತೆಯಾಗಿದ್ದ ರಿಂದ 2021ರ ಐಪಿಎಲ್ ಅನ್ನು ಮೇ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಪಂದ್ಯಾವಳಿಯ ಎರಡನೇ ಹಂತವು ಸಪ್ಟೆಂಬರ್ 19 ರಿಂದ ಯುಎಇಯಲ್ಲಿ ಆರಂಭವಾಗಲಿದೆ.


  ಪಂದ್ಯದ ಮೊದಲ ಹಂತದಲ್ಲಿ ತಂಡವು ನೆಲೆಯನ್ನು ಕಂಡುಕೊಂಡಿತ್ತು ಹಾಗೂ ಆ ದಿಸೆಯಲ್ಲಿ ಪ್ರದರ್ಶನ ಕಾಣುತ್ತಿತ್ತು. ಆದರೆ ಪಂದ್ಯಾವಳಿಯ ಹಠಾತ್ ಸ್ಥಗಿತದಿಂದ ಪುನಃ ತಂಡವನ್ನು ಬಲಪಡಿಸಬೇಕಾಗಿದೆ ಎಂದು ಧವನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಂಡದ ಮೇಲೆ ಜವಬ್ದಾರಿಗಳು ಸಾಕಷ್ಟಿದ್ದು ಮರಳಿ ಹಿಂದಿನ ಫಾರ್ಮ್‌ಗೆ ನಾವು ತಲುಪಬೇಕಾಗಿದೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡಬೇಕಾಗಿದೆ ಎಂದು ತಿಳಿಸಿದ್ದಾರೆ.


  ತಂಡದಲ್ಲಿರುವ ಧನಾತ್ಮಕ ಅಂಶವೆಂದರೆ ಶ್ರೇಯಸ್ ಅಯ್ಯರ್ ಮರಳಿರುವುದಾಗಿದೆ. ಇದರಿಂದ ನಮ್ಮ ತಂಡ ಇನ್ನಷ್ಟು ಬಲಶಾಲಿ ಹಾಗೂ ಶಕ್ತಿಶಾಲಿಯಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


  ಮಾರ್ಚ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಭುಜದ ನೋವಿನಿಂದ ಬಳಲುತ್ತಿದ್ದ ಶ್ರೇಯಸ್ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಆಡಲಾಗಿರಲಿಲ್ಲ. ತಂಡದ ಹಿರಿಯ ಹಾಗೂ ಅನುಭವಿ ಬ್ಯಾಟ್ಸ್‌ಮನ್ ಆಗಿರುವ 35ರ ಹರೆಯದ ಶಿಖರ್ ಧವನ್ IPL 2021 ಸೀಸನ್‌ನ ಎಂಟು ಪಂದ್ಯಗಳಲ್ಲಿ 380 ರನ್‌ಗಳನ್ನು ಕಲೆಹಾಕಿ ಅತ್ಯಧಿಕ ರನ್ ಪಡೆದವರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ತಂಡವು ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವಾಗಿ ಆಡಲಿದ್ದು ಸಂಪೂರ್ಣ ಗಮನ ಕೇಂದ್ರೀಕರಿಸಿದೆ ಎಂದು ಶಿಖರ್ ತಿಳಿಸಿದ್ದಾರೆ.


  ಐಪಿಎಲ್ ತಂಡದಲ್ಲಿ ಮರಳಿ ಬಂದಿರುವುದಕ್ಕೆ ಹೆಚ್ಚು ಸಂತಸವಾಗಿದ್ದು ತಂಡದಲ್ಲಿ ಪ್ರತಿಯೊಬ್ಬ ಆಟಗಾರರು ಉತ್ತಮವಾಗಿ ಅಭ್ಯಾಸ ನಡೆಸುತ್ತಿದ್ದು ಐಪಿಎಲ್‌ ಸೀಸನ್‌ನಲ್ಲಿ ಪ್ರದರ್ಶನ ತೋರಲು ನಾನು ಉತ್ಸುಕನಾಗಿದ್ದೇನೆ. ಮುಂಬರುವ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಬೇಕೆಂಬುದು ನನ್ನ ಇರಾದೆಯಾಗಿದೆ ಎಂಬುದು ಧವನ್ ಅಭಿಪ್ರಾಯವಾಗಿದೆ. ಹೆಚ್ಚಿನ ನಿರೀಕ್ಷೆಯೊಂದಿಗೆ ನಾವು ಐಪಿಎಲ್ ಪ್ರಾರಂಭಿಸಿದ್ದು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಸನ್ ರೈಸರ್ಸ್ ಹೈದರಾಬಾದ್‌ನೊಂದಿಗೆ ಮೊದಲ ಪಂದ್ಯ ಆಡಬೇಕಾಗಿರುವುದರಿಂದ ಕಠಿಣ ಪರಿಶ್ರಮಕ್ಕೆ ನಾವು ಒಳಗಾಗಬೇಕಾಗಿದೆ. ಹಾಗಾಗಿ ಉತ್ತರ ತರಬೇತಿ ಹೊಂದಬೇಕಾಗಿದೆ ಎಂಬುದು ಶಿಖರ್ ಮಾತಾಗಿದೆ.


  ಇದನ್ನೂ ಓದಿ: Ajay Jadeja| ಟಿ20 ವಿಶ್ವಕಪ್‌ಗೆ ಧೋನಿ ಮೆಂಟರ್‌: ಬಿಸಿಸಿಐ ತೀರ್ಮಾನವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೇ..?

  ಶ್ರೇಯಸ್ ತಂಡಕ್ಕೆ ಮರಳಿರುವುದು ನೂರಾನೆ ಬಲ ನೀಡಿದ್ದು, ನಾವು ಹಿಂದಿನ ಫಾರ್ಮ್‌ಗೆ ಮರಳುತ್ತೇವೆ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಶಿಖರ್ ಆತ್ಮವಿಶ್ವಾಸದಿಂದ ತಿಳಿಸಿದ್ದಾರೆ. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಡೆಲ್ಲಿ ಕ್ಯಾಪಿಟಲ್ಸ್, ಸಪ್ಟೆಂಬರ್ 22 ರಂದು ಸನ್‌ ರೈಸರ್ಸ್ ತಂಡವನ್ನು ಎದುರಿಸಲಿದ್ದು ಪಂದ್ಯ ರೋಚಕವಾಗಿರಲಿದೆ.

  Published by:MAshok Kumar
  First published: