IPL‌ 2021: ಈ ಸಲ KKR ಕಪ್ ಗೆದ್ರೆ ಏನ್ಮಾಡ್ತಾರೆ ಗೊತ್ತಾ ಶಾರುಖ್ ಖಾನ್‌?

ಇಯಾನ್ ಮೋರ್ಗನ್ ಮುಂದಾಳತ್ವದ ತಂಡದಲ್ಲಿ ಒಟ್ಟು 23 ಆಟಗಾರರಿದ್ದು, ಕಮಿನ್ಸ್ ಹೊರತಾಗಿ ರಾಹುಲ್ ತ್ರಿಪಾಠಿ ಮತ್ತು ಪ್ರವೀಣ್ ತಾಂಬೆ, ಮಿಸ್ಟರಿ ಸ್ಪಿನ್ನರ್ ಖ್ಯಾತಿಯ ಕನ್ನಡಿಗ ವರುಣ್ ಚಕ್ರವರ್ತಿ ಈ ಬಾರಿ ಕೆಕೆಆರ್‌ಗೆ ಸೇರ್ಪಡೆಯಾಗಿ ತಂಡಗಳನ್ನು ಇನ್ನಷ್ಟು ಸಮರ್ಥವಾಗಿ ಎದುರಿಸುವ ಭರವಸೆ ನೀಡಿದ್ದಾರೆ.

ShahRukh Khan

ShahRukh Khan

 • Share this:
  ಬಾಲಿವುಡ್ ಕಿಂಗ್ ಖಾನ್, ಬಾಲಿವುಡ್ ಬಾದ್‌ಶಾ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ ನಟನೆ, ನಿರ್ಮಾಪಕರಾಗಿಯೂ ತಮ್ಮ ಛಾಪನ್ನು ಮೂಡಿಸಿದವರು. ಇದೀಗ ಕ್ರಿಕೆಟ್ ಜಗತ್ತಿನಲ್ಲೂ ತಮ್ಮ ಉತ್ಸಾಹ ತೋರುತ್ತಿರುವ ಶಾರುಖ್ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರು ಹೌದು. ತಂಡದ ಪ್ರತಿಯೊಂದು ಚಟುವಟಿಕೆಗಳಲ್ಲಿ ಬಹಳ ಸಂತಸದಿಂದ ಪಾಲ್ಗೊಳ್ಳುವ ಶಾರುಖ್ ಖಾನ್ ಐಪಿಎಲ್ 2021 ಪ್ರಚಾರದ ನಿಮಿತ್ತ ಇತ್ತೀಚೆಗೆ #AskSRK ಎಂಬ ಹ್ಯಾಶ್‌ಟ್ಯಾಗ್ ಅಡಿ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗೆ ಒಂದು ವೇದಿಕೆ ಒದಗಿಸಿದ್ದರು.

  ಈ ವೇಳೆ ಕೆಕೆಆರ್ ಅಭಿಮಾನಿಯೊಬ್ಬರು ಈ ಬಾರಿಯೂ ಕೆಕೆಆರ್ ಟ್ರೋಫಿ ಗೆಲ್ಲುತ್ತದೆಯೇ? ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಶಾರುಖ್, ‘ಈ ಬಾರಿಯೂ ಕೆಕೆಆರ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ಹಾಗೇನಾದರೂ ಆದಲ್ಲಿ ಆ ಟ್ರೋಫಿಯಿಂದ ಮಾತ್ರ ಕಾಫಿ ಕುಡಿಯಲು ಪ್ರಾರಂಭಿಸುತ್ತೇನೆ’ ಎಂದಿದ್ದಾರೆ.

  ಇನ್ನು ಕೆಕೆಆರ್ ಕೀಪರ್ ಆದ ಐಯಾನ್ ಮಾರ್ಗನ್, ಈ ಬಾರಿ ನಮ್ಮ ತಂಡಕ್ಕೆ ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ತಮ್ಮ ತಂಡ ಸೇರಿದ್ದು, ನಮ್ಮ ಬೌಲಿಂಗ್ ತಂಡದ ಜೊತೆ ಇಡೀ ತಂಡದ ಬಲವನ್ನು ಹೆಚ್ಚಿಸಿದೆ. ಇಡೀ ಟೂರ್ನಮೆಂಟ್‌ನಲ್ಲಿ ಇದೊಂದು ದಾಖಲೆಯಾಗಿ ಉಳಿಯಲಿದೆ ಎಂದು ಹೇಳಿದರು.

  ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಟೂರ್ನಿ ಸೇರಿದಂತೆ ದೇಶದಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಮುಂದೂಡಲಾಗಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 29ರಂದು ಮುಂಬೈನಲ್ಲಿ ಶುರುವಾಗಬೇಕಿತ್ತು. ಆದರೆ ಬಿಸಿಸಿಐ ಸಭೆಯ ನಂತರ ಎಲ್ಲರ ಒಮ್ಮತದಂತೆ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

  ಇಯಾನ್ ಮೋರ್ಗನ್ ಮುಂದಾಳತ್ವದ ತಂಡದಲ್ಲಿ ಒಟ್ಟು 23 ಆಟಗಾರರಿದ್ದು, ಕಮಿನ್ಸ್ ಹೊರತಾಗಿ ರಾಹುಲ್ ತ್ರಿಪಾಠಿ ಮತ್ತು ಪ್ರವೀಣ್ ತಾಂಬೆ, ಮಿಸ್ಟರಿ ಸ್ಪಿನ್ನರ್ ಖ್ಯಾತಿಯ ಕನ್ನಡಿಗ ವರುಣ್ ಚಕ್ರವರ್ತಿ ಈ ಬಾರಿ ಕೆಕೆಆರ್‌ಗೆ ಸೇರ್ಪಡೆಯಾಗಿ ತಂಡಗಳನ್ನು ಇನ್ನಷ್ಟು ಸಮರ್ಥವಾಗಿ ಎದುರಿಸುವ ಭರವಸೆ ನೀಡಿದ್ದಾರೆ.

  ಕೆಕೆಆರ್ ಅಂತಿಮ ತಂಡ ಹೀಗಿದೆ:
  ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ, ಸುನಿಲ್ ನರೇನ್, ಕಮಲೇಶ್ ನಗರಕೋಟಿ, ಕುಲದೀಪ್ ಯಾದವ್, ಶಿವಂ ಮಾವಿ, ಶುಭಮನ್ ಗಿಲ್, ಪ್ರಸಿದ್ಧ ಕೃಷ್ಣ, ಲಾಕಿ ಫರ್ಗ್ಯೂಸನ್, ಸಿದ್ದೇಶ್ ಲಾಡ್, ನಿತೀಶ್ ರಾಣಾ, ರಿಂಕು ಸಿಂಗ್, ಐಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್, ರಾಹುಲ್ ತ್ರಿಪಾಠಿ, ಟಾಮ್ ಬ್ಯಾನ್ಟನ್, ನಿಖಿಲ್ ನಾಯಕ್, ವರುಣ್ ಚಕ್ರವರ್ತಿ, ಮಣಿಮಾರನ್ ಸಿದ್ಧಾರ್ಥ್, ಕ್ರಿಸ್ ಗ್ರೀನ್.

  ಕೆಕೆಆರ್ ಈ ಬಾರಿ ಹರಾಜಿನಲ್ಲಿಖರೀದಿಸಿದ ಆಟಗಾರರ ವಿವರ:
  ಪ್ಯಾಟ್ ಕಮಿನ್ಸ್: 15.5 ಕೋಟಿ ರೂ., ಐಯಾನ್ ಮಾರ್ಗನ್ 5.25 ಕೋಟಿ ರೂ., ವರುಣ್ ಚಕ್ರವರ್ತಿ 4 ಕೋಟಿ ರೂ., ಟಾಮ್ ಬ್ಯಾನ್ಟನ್ 1 ಕೋಟಿ ರೂ., ರಾಹುಲ್ ತ್ರಿಪಾಠಿ 60 ಲಕ್ಷ ರೂ., ನಿಖಿಲ್ ನಾಯಕ್ 20 ಲಕ್ಷ ರೂ., ಮಣಿಮಾರನ್ ಸಿದ್ಧಾರ್ಥ್ 20 ಲಕ್ಷ ರೂ., ಕ್ರಿಸ್ ಗ್ರೀನ್ 20 ಲಕ್ಷ ರೂ., ಪ್ರವೀಣ್ ತಾಂಬೆ 20 ಲಕ್ಷ ರೂ.
  First published: