RR vs DC: ಉಭಯ ತಂಡಗಳಲ್ಲೂ 1 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 22 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 11 ಜಯ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಸಮಬಲ ಹೊಂದಿರುವುದು ವಿಶೇಷ.

DC vs RR

DC vs RR

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ 2021ರ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿದರೆ, ರಾಜಸ್ಥಾನ್ ರಾಯಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 4 ರನ್​ಗಳ ವಿರೋಚಿತ ಸೋಲನುಭವಿಸಿತು. ಉಭಯ ತಂಡಗಳು ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದವು. ಹೀಗಾಗಿ ಇಂದಿನ ಪಂದ್ಯದಲ್ಲೂ ಎರಡೂ ತಂಡಗಳಿಂದ ತೀವ್ರ ಪೈಪೋಟಿ ನಿರೀಕ್ಷಿಸಬಹುದು. ಅದರಲ್ಲೂ ಮೊಲದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿ ಮಿಂಚಿದರೆ, ಇತ್ತ ಡೆಲ್ಲಿ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಶತಕದ ಜೊತೆಯಾಟದ ಮೂಲಕ ಅರ್ಧಶತಕಗಳನ್ನು ಬಾರಿಸಿದ್ದರು.

  ಹೀಗಾಗಿ ಇಂದಿನ ಪಂದ್ಯದಲ್ಲೂ ಈ ಮೂವರಿಂದ ಭರ್ಜರಿ ಇನಿಂಗ್ಸ್​ ಎದುರು ನೋಡಬಹುದು. ಇದಾಗ್ಯೂ ಉಭಯ ತಂಡಗಳಲ್ಲಿ ಒಂದೊಂದು ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಮೊದಲ ಪಂದ್ಯದಿಂದ ಹೊರುಗಳಿದಿದ್ದ ಡೆಲ್ಲಿ ವೇಗಿ ಕಗಿಸೊ ರಬಾಡ ಇಂದು ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಟಾಮ್ ಕರನ್ ಸ್ಥಾನ ಕಳೆದುಕೊಳ್ಳಬಹುದು.

  ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಮತ್ತೋರ್ವ ಆಟಗಾರನನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆಯಿದೆ. ಅದರಂತೆ ಇಂದು ಡೇವಿಡ್ ಮಿಲ್ಲರ್ ಸ್ಥಾನ ಪಡೆಯಬಹುದು. ಕಳೆದ ಸೀಸನ್​ನಿಂದ ಆರ್​ಆರ್ ತಂಡದಲ್ಲಿದ್ದರೂ ಮಿಲ್ಲರ್​ಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಹೀಗಾಗಿ ಎಡಗೈ ದಾಂಡಿಗ ಸ್ಟೋಕ್ಸ್ ಸ್ಥಾನದಲ್ಲಿ ಮತ್ತೋರ್ವ ಎಡಗೈ ಬ್ಯಾಟ್ಸ್​ಮನ್ ಆಗಿ ಮಿಲ್ಲರ್ ಅವರನ್ನು ರಾಜಸ್ಥಾನ್ ಕಣಕ್ಕಿಳಿಸಬಹುದು.

  ಇಂದಿನ ಪಂದ್ಯಕ್ಕಾಗಿ ಸಂಭವನೀಯ ತಂಡ ಹೀಗಿರಲಿದೆ:
  ಡೆಲ್ಲಿ ಕ್ಯಾಪಿಟಲ್ಸ್​ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:- ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಮಾರ್ಕಸ್ ಸ್ಟೋನಿಸ್, ಶಿಮ್ರಾನ್ ಹೆಟ್ಮೆಯರ್, ಕ್ರಿಸ್ ವೋಕ್ಸ್, ಆರ್ ಅಶ್ವಿನ್, ಕಗಿಸೊ ರಬಾಡ, ಅಮಿತ್ ಮಿಶ್ರಾ, ಅವೇಶ್ ಖಾನ್.

  ರಾಜಸ್ಥಾನ್ ರಾಯಲ್ಸ್‌ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:- ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶಿವಮ್ ದುಬೆ, ಶ್ರೇಯಾಸ್ ಗೋಪಾಲ್, ಕ್ರಿಸ್ ಮೋರಿಸ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕರಿಯಾ
  Published by:zahir
  First published: