HOME » NEWS » Sports » CRICKET IPL 2021 ROYAL CHALLENGERS BANGALORE OPENER DEVDUTT PADIKKAL TESTS POSITIVE FOR CORONAVIRUS ZP

IPL 2021: RCB ಆಟಗಾರನಿಗೆ ಕೊರೋನಾ: ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಡೌಟ್..!

ಟೂರ್ನಿಯ ಮೊದಲ ಪಂದ್ಯ ಏಪ್ರಿಲ್ 9 ರಂದು ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್​ನ್ನು ಎದುರಿಸಲಿದೆ. ಇದೀಗ ಆರ್​ಸಿಬಿ ಆರಂಭಿಕ ಆಟಗಾರ ಕೊರೋನಾ ಸೋಂಕಿಗೆ ಒಳಗಾಗಿರುವುದು ವಿರಾಟ್ ಕೊಹ್ಲಿ ಪಡೆಯ ಚಿಂತೆಯನ್ನು ಹೆಚ್ಚಿಸಿದೆ.

news18-kannada
Updated:April 4, 2021, 3:35 PM IST
IPL 2021: RCB ಆಟಗಾರನಿಗೆ ಕೊರೋನಾ: ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಡೌಟ್..!
rcb
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲು ಕೇವಲ ಐದು ದಿನಗಳು ಮಾತ್ರ ಉಳಿದಿವೆ. ಆದರೀಗ ಕೊರೋನಾ ಕರಿಛಾಯೆ ಐಪಿಎಲ್​ ಮೇಲೂ ಆವರಿಸಿದ್ದು, ಆರ್​ಸಿಬಿ ಆಟಗಾರ ಕೂಡ ಕೊರೋನಾಗೆ ತುತ್ತಾಗಿದ್ದಾರೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ದೆಹಲಿ ಕ್ಯಾಪಿಟಲ್ಸ್ ನಂತರ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ ಪಡಿಕ್ಕಲ್ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ದೇವದತ್ ಪಡಿಕ್ಕಲ್​ ಅವರ ಕೋವಿಡ್​ ಟೆಸ್ಟ್ ಪಾಸಿಟಿವ್ ಕಂಡು ಬಂದಿದ್ದು, ಹೀಗಾಗಿ ಅವರನ್ನು ತಂಡದ ಉಳಿದ ಆಟಗಾರರಿಂದ ಪ್ರತ್ಯೇಕಿಸಲಾಗಿದೆ.

ಇತ್ತ ಟೂರ್ನಿಯ ಮೊದಲ ಪಂದ್ಯ ಏಪ್ರಿಲ್ 9 ರಂದು ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್​ನ್ನು ಎದುರಿಸಲಿದೆ. ಇದೀಗ ಆರ್​ಸಿಬಿ ಆರಂಭಿಕ ಆಟಗಾರ ಕೊರೋನಾ ಸೋಂಕಿಗೆ ಒಳಗಾಗಿರುವುದು ವಿರಾಟ್ ಕೊಹ್ಲಿ ಪಡೆಯ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಪಡಿಕ್ಕಲ್​ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಿಂದ ಪಡಿಕ್ಕಲ್​ ಹೊರಗುಳಿಯುವ ಸಾಧ್ಯತೆಯಿದೆ.

ಅಲ್ಲದೆ ಸೋಂಕಿನಿಂದ ಗುಣಮುಖರಾಗಿ ತಂಡವನ್ನು ಕೂಡಿಕೊಳ್ಳಲು 10 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಆರ್​ಸಿಬಿಯ ಮೊದಲ ಎರಡು ಪಂದ್ಯಗಳಿಗೆ ದೇವದತ್ ಪಡಿಕ್ಕಲ್ ಅಲಭ್ಯರಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರ ಅಕ್ಷರ್ ಪಟೇಲ್ ಕೂಡ ಕೊರೋನಾ ಪಾಸಿಟಿವ್​ ಆಗಿದ್ದಾರೆ. ಏಪ್ರಿಲ್ 10 ರಂದು ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ಮುಖಾಮುಖಿಯಾಗಲಿದೆ. ಇದೀಗ ಮುಂಬೈನಲ್ಲಿರುವ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.

ಅಕ್ಷರ್ ಪಟೇಲ್ ಅವರ ಕೊರೋನಾ ಪಾಸಿಟಿವ್ ವರದಿ ಬಳಿಕ ಇತರೆ ಆಟಗಾರರಲ್ಲೂ ಸೋಂಕಿನ ಭಯ ಮೂಡಿದೆ. ಏಕೆಂದರೆ ಇಡೀ ತಂಡವು ಒಂದೇ ಹೋಟೆಲ್‌ನಲ್ಲಿ ಉಳಿದಿತ್ತು. ಹೀಗಾಗಿ ತಂಡದ ಉಳಿದ ಕ್ರಿಕೆಟಿಗರು ಸಹ ಸೋಂಕಿಗೆ ಒಳಗಾಗಬಹುದು ಎಂಬ ಆತಂಕದಲ್ಲಿದ್ದಾರೆ. ಬಿಸಿಸಿಐ ಎಸ್‌ಒಪಿ ಪ್ರಕಾರ, ಕೋವಿಡ್ -19 ಪರೀಕ್ಷೆಯು ಪಾಸಿಟಿವ್ ಆಗಿದ್ದರೆ ಆ ಆಟಗಾರನನ್ನು 10 ದಿನಗಳವರೆಗೆ ತನ್ನನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ಒಟ್ಟಿನಲ್ಲಿ ಭರ್ಜರಿ ಫಾರ್ಮ್​ನಲ್ಲಿ ದೇವದತ್ ಪಡಿಕ್ಕಲ್ ತಂಡದಿಂದ ಹೊರಗುಳಿದರೆ ಆರ್​ಸಿಬಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದಾಗ್ಯೂ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಮರ್ಥ್ಯ ಹೊಂದಿರುವ ಮೊಹಮ್ಮದ್ ಅಜರುದ್ದೀನ್, ಫಿನ್ ಅಲೆನ್ ಇದ್ದಾರೆ. ಹೀಗಾಗಿ ಕೊಹ್ಲಿ ಜೊತೆ ಯುವ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಆರಂಭಿಕರಾಗಿ ಕಣಕ್ಕಿಳಿಬಹುದು.
Published by: zahir
First published: April 4, 2021, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories