IPL 2021: ದೇಶೀಯ ಟೂರ್ನಿಯಲ್ಲಿ RCB ಹುಡುಗರು ಫುಲ್ ಮಿಂಚಿಂಗ್..!

rcb

rcb

ಒಡಿಸ್ಸಾ ವಿರುದ್ಧ ಪಂದ್ಯದಲ್ಲಿ 140 ಎಸೆತಗಳಲ್ಲಿ 152 ರನ್ ಬಾರಿಸಿದ್ದ ಪಡಿಕ್ಕಲ್, ಇದೀಗ ಕೇರಳ ವಿರುದ್ದ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ. 138 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 126 ರನ್​ಗಳ ಆಕರ್ಷಕ ಶತಕದೊಂದಿಗೆ ಕರ್ನಾಟಕ್ಕೆ 9 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

  • Share this:

    ಅತ್ತ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವ ಟಿ20 ಸರಣಿಯಲ್ಲಿ RCB ಆಟಗಾರರ ನೀರಸ ಪ್ರದರ್ಶನ ಮುಂದುವರೆದರೆ, ಇತ್ತ ದೇಶೀಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹುಡುಗರ ಅಬ್ಬರ ಜೋರಾಗಿದೆ. ಒಂದೆಡೆ ಆರ್​ಸಿಬಿ ಆರಂಭಿಕ ಕರ್ನಾಟಕದ ದೇವದತ್ ಪಡಿಕ್ಕಲ್ (Devdutt Padikkal) ಮಿಂಚಿನ ಸಂಚಲನ ಸೃಷ್ಟಿಸಿದರೆ, ಮತ್ತೊಂದೆಡೆ ಆರ್​ಸಿಬಿ ಹೊಸ ಆಟಗಾರರಾದ ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್ ಹಾಗೂ ಸಚಿನ್ ಬೇಬಿ ಅಬ್ಬರಿಸುತ್ತಿದ್ದಾರೆ.


    ಹೌದು, ಶುಕ್ರವಾರ ವಿಜಯ ಹಝಾರೆ ಟೂರ್ನಿಯಲ್ಲಿ ನಡೆದ ಪಂದ್ಯಗಳಲ್ಲಿ ಆರ್​ಸಿಬಿ ಆಟಗಾರರದ್ದೇ ಕಾರುಬಾರು. ಅದರಲ್ಲೂ ಕರ್ನಾಟಕ-ಕೇರಳ ನಡುವಣ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೊಹ್ಲಿ ಪಡೆಯ ಹುಡುಗರು ಎಂಬುದು ವಿಶೇಷ.


    ಇನ್ನು ಮಧ್ಯಪ್ರದೇಶ-ಆಂಧ್ರ ನಡುವಣ ಪಂದ್ಯದಲ್ಲಿ ಆರ್​ಸಿಬಿ ಹೊಸ ಆಟಗಾರ ರಜತ್ ಪಾಟಿದಾರ್ ಅಕ್ಷರಶಃ ಅಬ್ಬರಿಸಿದ್ದರು. ಮಧ್ಯಪ್ರದೇಶದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಆಂಧ್ರ ಬೌಲರುಗಳ ಬೆಂಡೆತ್ತಿದರು.


    ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್​ಗಳ ಸುರಿಮಳೆಗೈದ ಪಾಟಿದಾರ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಕೇವಲ 61 ಎಸೆತಗಳಲ್ಲಿ 101 ರನ್ ಬಾರಿಸಿದ ರಜತ್, ತಮ್ಮ ಇನಿಂಗ್ಸ್​ನಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 8 ಸೂಪರ್ ಬೌಂಡರಿಗಳನ್ನು ಸಿಡಿಸಿದ್ದರು. ಈ ಮೂಲಕ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಮಿಡಲ್ ಆರ್ಡರ್​ನಲ್ಲಿ ಪ್ರಬಲ ಬ್ಯಾಟ್ಸ್​ಮನ್ ಆಗಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.


    ಇನ್ನೊಂದೆಡೆ ಕರ್ನಾಟಕ-ಕೇರಳ ನಡುವಣ ಪಂದ್ಯದಲ್ಲಿ ನಾಯಕ ಸಚಿನ್ ಬೇಬಿ 63 ಎಸೆತಗಳಲ್ಲಿ 54 ರನ್ ಬಾರಿಸಿದ್ದಾರೆ. ಕಳೆದ ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಮಿಂಚಿದ್ದ ಸಚಿನ್ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ. ಇನ್ನು ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಸ್ಪೋಟಕ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದೀನ್ ಕರ್ನಾಟಕದ ವಿರುದ್ಧ ಅಬ್ಬರಿಸಿದ್ದಾರೆ.


    ಕೇವಲ 38 ಎಸೆತಗಳನ್ನು ಎದುರಿಸಿದ್ದ ಅಜರ್ ಅಜೇಯ 59 ರನ್​ ಚಚ್ಚಿದ್ದಾರೆ. ಈ ಸ್ಪೋಟಕ ಇನಿಂಗ್ಸ್​ನಲ್ಲಿ ಅಜರ್ ಬ್ಯಾಟ್​ನಿಂದ 3 ಸಿಕ್ಸರ್ ಹಾಗೂ 2 ಬೌಂಡರಿಗಳು ಮೂಡಿಬಂದಿದ್ದವು. ಇನ್ನು ಕೇರಳ ನೀಡಿದ 277 ರನ್​ಗಳನ್ನು ಚೇಸ್ ಮಾಡಿದ ಕರ್ನಾಟಕ್ಕೆ ಮತ್ತೊಮ್ಮೆ ಭರ್ಜರಿ ಆರಂಭ ಒದಗಿಸುವಲ್ಲಿ ದೇವದತ್ ಪಡಿಕ್ಕಲ್ ಯಶಸ್ವಿಯಾಗಿದ್ದಾರೆ.


    ಒಡಿಸ್ಸಾ ವಿರುದ್ಧ ಪಂದ್ಯದಲ್ಲಿ 140 ಎಸೆತಗಳಲ್ಲಿ 152 ರನ್ ಬಾರಿಸಿದ್ದ ಪಡಿಕ್ಕಲ್, ಇದೀಗ ಕೇರಳ ವಿರುದ್ದ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ. 138 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 126 ರನ್​ಗಳ ಆಕರ್ಷಕ ಶತಕದೊಂದಿಗೆ ಕರ್ನಾಟಕ್ಕೆ 9 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
    ತಮ್ಮ ಇನಿಂಗ್ಸ್​ನಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿರುವ ಪಡಿಕ್ಕಲ್ ತಾನು ಭರ್ಜರಿ ಫಾರ್ಮ್​ನಲ್ಲಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.


    ಅತ್ತ ಒಂದೇ ದಿನ ಆರ್​ಸಿಬಿ ತಂಡದ ನಾಲ್ವರು ಅಬ್ಬರಿಸುವ ಮೂಲಕ ಎದುರಾಳಿ ತಂಡಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತ ಯುವ ಆಟಗಾರರ ಅಬ್ಬರದಿಂದ ಆರ್​ಸಿಬಿ ಫ್ರಾಂಚೈಸಿ ಕೂಡ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಆರ್​ಸಿಬಿ ಅಭಿಮಾನಿಗಳು ಸಹ ಈ ಸಲ ಕಪ್ ನಮ್ದೇ ಎನ್ನುವ ವಿಶ್ವಾಸದಲ್ಲಿದ್ದಾರೆ.

    Published by:zahir
    First published: