ಏಪ್ರಿಲ್-ಮೇನಲ್ಲಿ ಆರಂಭವಾಗಿದ್ದ ಐಪಿಎಲ್-14ನೇ (IPL-14) ಆವೃತ್ತಿಯ ಟೂರ್ನಿಯಲ್ಲಿ 29 ಪಂದ್ಯಗಳನ್ನು ಆಡಿಸಲಾಗಿತ್ತು. ಆದರೆ, ಕೊರೋನಾ ಮೂರನೇ (CoronaVirus 3rd wave) ಅಲೆಯ ಕಾರಣಕ್ಕೆ ಅನಿವಾರ್ಯವಾಗಿ ಈ ಮಹತ್ವದ ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಯುಎಇ ಯಲ್ಲಿ (UAE) ಸೆಪ್ಟೆಂಬರ್ 19 (Sep.19) ಭಾನುವಾರದಿಂದ ಐಪಿಎಲ್-14 ಮತ್ತೆ ಆರಂಭವಾಗುತ್ತಿದೆ. ಐಪಿಎಲ್ನಲ್ಲಿ ಇನ್ನೂ ಅರ್ಧ ದೂರ ಕ್ರಮಿಸಬೇಕಾಗಿದ್ದು, ಪ್ಲೇ ಆಫ್ ತಲುಪಲು ಎಲ್ಲಾ ತಂಡಗಳೂ ಕಸರತ್ತು ನಡೆಸುತ್ತಿವೆ. ಆದರೆ, ಮೇ ತಿಂಗಳಲ್ಲಿ ಅಂಕಪಟ್ಟಿಯಲ್ಲಿ ಯಾವ್ಯಾವ ಐಪಿಎಲ್ ತಂಡ ಯಾವ್ಯಾವ ಸ್ಥಾನ ಪಡೆದಿತ್ತು? ಎಂಬುದು ಗಮನಾರ್ಹವಾಗಿದೆ.
ಕಳೆದ ಬೇಸಿಗೆಯಲ್ಲಿ ಐಪಿಎಲ್ ಅಮಾನತುಗೊಳ್ಳುವ ಮೊದಲು, ದೆಹಲಿ ಕ್ಯಾಪಿಟಲ್ಸ್ ಅಸಾಧಾರಣ ಪ್ರದರ್ಶನ ನೀಡಿತ್ತು. ಈ ಮೂಲಕ ಐಪಿಎಲ್ 2021 ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಚೆನ್ನೈ ಸೂಪರ್ ಕಿಂಗ್ಸ್, IPL 2020 ರ ಸಾಲಿನಲ್ಲಿ ನೀಡಿದ್ದ ಅತ್ಯಂತ ಕಳಪೆ ಮತ್ತು ನೀರಸ ಪ್ರದರ್ಶನದ ನಂತರ ಮತ್ತೆ ಚೇತರಿಸಿಕೊಂಡಿತ್ತು. ಅಲ್ಲದೆ, ಇಡೀ ತಂಡ ಮತ್ತೆ ಫಾರ್ಮ್ಗೆ ಮರಳುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತ್ತು.
ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೇಲಿನ ಅಭಿಮಾನಿಗಳ ನಿರೀಕ್ಷೆಗಳನ್ನು ಮೀರಿ ಆಟವಾಡುತ್ತಿದೆ. ಗ್ಲೆನ್ ಮ್ಯಾಕ್ಸ್ವೆಲ್ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಎಬಿ ಡಿವಿಲಿಯರ್ಸ್ ಸಹ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಆರ್ಸಿಬಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಲ್ಲದೆ, ನೆಟ್ ರನ್ ರೇಟ್ (NRR) ನಲ್ಲಿ CSK ಗಿಂತ ಸ್ವಲ್ಪ ಹಿಂದಕ್ಕಿದ್ದಾರಷ್ಟೆ.
ಮುಂಬೈ ಇಂಡಿಯನ್ಸ್, ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ನಿಧಾನಗತಿಯ ಆರಂಭವನ್ನು ಪಡೆದುಕೊಂಡಿದೆ. ಆದರೂ, ಮುಂದಿನ ದಿನಗಳಲ್ಲಿ ಈ ತಂಡ ಸ್ಪೋಟಕ ಆಟ ಪ್ರದರ್ಶಿಸಿದರೂ ಅಚ್ಚರಿ ಇಲ್ಲ. ಇನ್ನೂ ಪಂಜಾಬ್ ಕಿಂಗ್ಸ್ (6 ನೇ ಸ್ಥಾನ) ಮತ್ತು ರಾಜಸ್ಥಾನ ರಾಯಲ್ಸ್ ಸತತ ಸೋಲು-ಗೆಲುವುಗಳ ಮಿಶ್ರಫಲ ಅನುಭವಿಸುತ್ತಿದ್ದು, 6ನೇ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ.
ಆದರೆ, ಉತ್ತಮ ಆಟಗಾರರನ್ನು ಹೊಂದಿದ್ದಾಗ್ಯೂ ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸತತ ಸೋಲಿನಿಂದ ಕಂಗೆಟ್ಟಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಆದಾಗ್ಯೂ, ಅನಿರೀಕ್ಷಿತ ವಿರಾಮವು ಐಪಿಎಲ್ 2021 ರ ಡೈನಾಮಿಕ್ಸ್ ಅನ್ನು ಸ್ವಲ್ಪ ಬದಲಿಸಿದೆ. ಅನೇಕ ಬಲಿಷ್ಠ ತಂಡಗಳಲ್ಲಿ ಹಲವು ಪ್ರಮುಖ ಆಟಗಾರರು ಗೈರಾಗಿದ್ದು, ಇದು ಪಂದ್ಯಗಳ ಫಲಿತಾಂಶದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೆ, ಯುಎಇ ವಾತಾವರಣ ಮತ್ತು ಅಂಗಳ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದ್ದು, ದ್ವಿತಿಯಾರ್ಧದಲ್ಲಿ ಎಲ್ಲಾ ಲೆಕ್ಕಾಚಾರವೂ ಉಲ್ಟಾ ಹೊಡೆಯುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: SL vs SA T20 Cricket| ತವರಿನಲ್ಲೇ ಶ್ರೀಲಂಕಾಗೆ ಮುಖಭಂಗ; ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ದಕ್ಷಿಣ ಆಫ್ರಿಕಾ
ಐಪಿಎಲ್ ಪುನರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಎಲ್ಲಾ ತಂಡಗಳು ಇದೀಗ ಗೆಲುವಿನ ಬಗ್ಗೆಯೇ ಯೋಜನೆ ನಡೆಸುತ್ತಿವೆ. ತಂಡದ ಕಾಂಬಿನೇಷನ್ ಬಗ್ಗೆ ಹೆಚ್ಚು ಗಮನ ನೀಡುತ್ತಿವೆ. ಆದರೆ, ಈ ಲೆಕ್ಕಾಚಾರಗಳು ಎಷ್ಟರ ಮಟ್ಟಿಗೆ ಫಲ ನೀಡಲಿವೆ? ಯಾವ ತಂಡ ಪುಟಿದೆದ್ದು ಪ್ಲೇ ಆಫ್ನಲ್ಲಿ ಸ್ಥಾನ ಪಡೆಯಲಿದೆ? ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ