RCB captain? ಮುಂದಿನ ಆರ್​ಸಿಬಿ ಕ್ಯಾಪ್ಟನ್ ಯಾರಾಗಬಹುದು? ಸಂಭಾವ್ಯರು ಇವರು

Players who can replace Virat Kohli as captain in RCB- ವಿರಾಟ್ ಕೊಹ್ಲಿ ಅವರು ಈ ಐಪಿಎಲ್ ಸೀಸನ್​ನಲ್ಲೇ ಆರ್​ಸಿಬಿ ತಂಡದ ನಾಯಕಸ್ಥಾನದಿಂದ ಇಳಿಯಬೇಕಾಗಬಹುದು. ಹಾಗಾದರೆ, ಯಾರಿಗೆ ಒಲಿಯಲಿದೆ ಆರ್​ಸಿಬಿ ಕ್ಯಾಪ್ಟನ್ಸಿ?

ಆರ್​ಸಿಬಿ ತಂಡ

ಆರ್​ಸಿಬಿ ತಂಡ

 • Cricketnext
 • Last Updated :
 • Share this:
  ಬೆಂಗಳೂರು, ಸೆ. 22: ಅಂತರರಾಷ್ಟ್ರೀಯ ಟಿ20 ತಂಡದ ನಾಯಕಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿ ಅವರು ಈ ಐಪಿಎಲ್ ಬಳಿಕ ಆರ್​ಸಿಬಿ ತಂಡದ ಕ್ಯಾಪ್ಟನ್ಸಿಗೂ ಗುಡ್ ಬೈ (Virat Kohli stepping down as RCB captain) ಹೇಳುವುದಾಗಿ ತಿಳಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಕೆಲ ಪಂದ್ಯಗಳ ಬಳಿಕ ವಿರಾಟ್ ಕೊಹ್ಲಿ ಅವರು ಈ ಐಪಿಎಲ್​ನಲ್ಲೇ ನಾಯಕಸ್ಥಾನದಿಂದ ಹೊರಬೀಳುವ ಸಂಭವ ಇದೆ ಎನ್ನಲಾಗಿದೆ. ಮೊನ್ನೆ ನಡೆದ ಕೆಕೆಆರ್ (KKR) ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಹೀನಾಯ ಸೋಲು ಉಂಡ ಬೆನ್ನಲ್ಲೇ ಕೊಹ್ಲಿ ಅವರು ನಾಯಕರಾಗಿ ಮುಂದುವರಿಯುವ ಬಗ್ಗೆ ಅನುಮಾನ ಶುರುವಾಗಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆದಲ್ಲಿ ಆರ್​ಸಿಬಿ ನಾಯಕತ್ವ ಯಾವ ಆಟಗಾರನ ಭುಜಕ್ಕೆ ಬೀಳುತ್ತದೆ ಎಂಬುದು ಪ್ರಶ್ನೆ. ಈ ಐಪಿಎಲ್​ನಲ್ಲಿ ಕೊಹ್ಲಿಯೇ ನಾಯಕರಾಗಿ ಮುಂದುವರಿದರೂ ಮುಂದಿನ ಐಪಿಎಲ್​ಗೆ ಆರ್​ಸಿಬಿ ಹೊಸ ನಾಯಕನ ಅರಸುವುದು ಅನಿವಾರ್ಯ. ಆ ನಿಟ್ಟಿನಲ್ಲಿ ತಂಡದಲ್ಲಿ ಈಗಾಗಲೇ ಹೊಸ ನಾಯಕನ ಶೋಧ ನಡೆದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾಧ್ಯಾಸಾಧ್ಯತೆಯತ್ತ (A look at Probable captains for RCB) ಒಂದು ನೋಟ ಇಲ್ಲಿದೆ.

  1) ಗ್ಲೆನ್ ಮ್ಯಾಕ್ಸ್​ವೆಲ್: ಆಸ್ಟ್ರೇಲಿಯಾದ ಈ ಆಟಗಾರ ಯಾವುದೇ ಐಪಿಎಲ್ ಟೂರ್ನಿಯಾದರೂ ಸಾಕಷ್ಟು ನಿರೀಕ್ಷೆ ಮೂಡಿಸುವ ಆಲ್​ರೌಂಡರ್ ಎನಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ ತಂಡ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನ ಬರೋಬ್ಬರಿ 14.25 ಕೋಟಿ ರೂ ಕೊಟ್ಟು ಖರೀದಿಸಿದೆ. ಹಿಂದಿನ ಐಪಿಎಲ್​ನಲ್ಲಿ ಫಾರ್ಮ್​ನಲ್ಲಿಲ್ಲದಿದ್ದರೂ ಆರ್​ಸಿಬಿ ಅಷ್ಟು ದುಬಾರಿ ಹಣ ತೆತ್ತು ಮ್ಯಾಕ್ಸ್​ವೆಲ್ ಅವರನ್ನ ತಂದಿದ್ದು ಕೆಲವರಿಗೆ ಅಚ್ಚರಿ ತಂದಿರಲಿಕ್ಕೂ ಸಾಕು. ಆದರೆ, ಭಾರತದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇವರನ್ನ ನಾಯಕ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.

  2) ಎಬಿ ಡೀವಿಲಿಯರ್ಸ್: ವಿರಾಟ್ ಕೊಹ್ಲಿ ಜೊತೆ ಎಬಿ ಡೀವಿಲಿಯರ್ಸ್ ಅವರು ಆರ್​ಸಿಬಿ ಬ್ರ್ಯಾಂಡ್ ಜೊತೆ ಗಟ್ಟಿಯಾಗಿ ತಳುಕುಹಾಕಿಕೊಂಡಿದ್ದಾರೆ. ಎಬಿಡಿ ಎಂದರೆ ಆರ್​ಸಿಬಿಯ ಇತರ ಆಟಗಾರರಿಗೆ ಎಂಥದ್ದೋ ಗೌರವ. ಅಂತರರಾಷ್ಟ್ರೀಯ ಕ್ರಿಕೆಟ್​ನ ಅಪ್ಪಟ ಲೆಜೆಂಡ್ ಅವರು. ಮಿಸ್ಟರ್ 360 ಡಿಗ್ರಿ ಪ್ಲೇಯರ್ ಎಂದೇ ಖ್ಯಾತರಾಗಿದ್ದಾರೆ. ಅಂದರೆ ಯಾವುದೇ ಕೋನದಲ್ಲೂ ಇವರು ಶಾಟ್​ಗಳನ್ನ ಹೊಡೆಯಬಲ್ಲಂಥ ಛಾತಿ ಇರುವವರು. ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ಇವರ ಆಟದ ಮೊನಚು ಅಷ್ಟೇನೂ ತಗ್ಗಿಲ್ಲ. ಈಗಲೂ ಅದ್ಭುತ ಶಾಟ್​ಗಳನ್ನ ಪ್ರಯೋಗಿಸುತ್ತಾರೆ. ಅದು ಈ ಐಪಿಎಲ್​ನ ಮೊದಲ ಸುತ್ತಿನ ಪಂದ್ಯಗಳಲ್ಲೇ ಸಾಬೀತಾಗಿದೆ. ಇವರು ಮುಂದಿನ ಆರ್​ಸಿಬಿ ನಾಯಕರಾದರೆ ಅಚ್ಚರಿ ಏನಿಲ್ಲ.

  ಇದನ್ನೂ ಓದಿ: IPL- ಐಪಿಎಲ್ 2021ಗೆ ಕೋವಿಡ್ ಭೀತಿ; ನಟರಾಜನ್​ಗೆ ಪಾಸಿಟಿವ್; ಏಳು ಮಂದಿ ಐಸೋಲೇಶನ್

  ಇವರಲ್ಲದೇ, ಯುಜವೇಂದ್ರ ಚಹಲ್, ದೇವದತ್ ಪಡಿಕ್ಕಲ್ ಅವರಂಥ ಆಟಗಾರರಿಗೂ ಕ್ಯಾಪ್ಟನ್ಸಿ ಯೋಗ ದೊರೆತರೂ ದೊರೆಯಬಹುದು ಎನ್ನಲಾಗುತ್ತಿದೆ. ಚಹಲ್ ಅವರು ಆರ್​ಸಿಬಿಯ ಅತ್ಯಂತ ಯಶಸ್ವಿ ಸ್ಪಿನ್ನರ್ ಎನಿಸಿದ್ದಾರೆ. ಪಡಿಕ್ಕಲ್ ಕೂಡ ಒಳ್ಳೆಯ ಬ್ಯಾಟಿಂಗ್ ಫಾರ್ಮ್​ನಲ್ಲಿದ್ದಾರೆ. ಕರ್ನಾಟಕದವರಾದ್ದರಿಂದ ಪಡಿಕ್ಕಲ್​ಗೆ ನಾಯಕತ್ವ ಸಿಕ್ಕರೆ ಅನಿರೀಕ್ಷಿತವೇನಾಗುವುದಿಲ್ಲ.

  ಒಂದು ವೇಳೆ ಈ ಸೀಸನ್​ನಲ್ಲಿ ಆರ್​ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಮುಂದುವರಿದರೆ, ಮುಂದಿನ ಸೀಸನ್​ನ ಹರಾಜಿನಲ್ಲಿ ಹಲವು ಹಿರಿಯ ಅಟಗಾರರು ಖರೀದಿಗೆ ಲಭ್ಯ ಇರುತ್ತಾರೆ. ಅಪ್ಪಟ ನಾಯಕತ್ವದ ಆಟಗಾರರಾದ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ ಮೊದಲಾದವರು ಲಭ್ಯವಾದರೂ ಆಗಬಹುದು. ಆಗ ಆರ್​ಸಿಬಿ ತಂಡಕ್ಕೆ ಹೊಂದಿಕೆಯಾಗುವ ಅಂಥ ಆಟಗಾರರೊಬ್ಬರನ್ನ ಸೆಳೆದುಕೊಳ್ಳುವ ಅವಕಾಶವಂತೂ ಇದೆ.
  SCHEDULE TIME TABLE:
  ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ ಬಹುತೇಕ ಎಲ್ಲವನ್ನೂ ಅನುಭವಿಸಿದ್ಧಾರೆ. ಭಾರತ ಕಂಡ ಅತ್ಯಂತ ಯಶಸ್ವಿ ಆಟಗಾರ ಹಾಗೂ ಯಶಸ್ವಿ ನಾಯಕರಲ್ಲಿ ಅವರೂ ಒಬ್ಬರು. ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಈ ಮೂರೂ ಮಾದರಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ನಲ್ಲಿ 50ಕ್ಕೂ ಹೆಚ್ಚು ರನ್ ಸರಾಸರಿ ಹೊಂದಿ ದಾಖಲೆ ಬರೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ಮತ್ತು ಲಿಸ್ಟ್ ಎ ಕ್ರಿಕೆಟ್​ನಲ್ಲೂ ಇವರು 50ಕ್ಕೂ ಹೆಚ್ಚು ರನ್ ಸರಾಸರಿ ಹೊಂದಿದ್ದಾರೆ. ಐಪಿಎಲ್ ಟೂರ್ನಿಗಳಲ್ಲಿ ಮಾತ್ರ ಇವರ ರನ್ ಸರಾಸರಿ 50ಕ್ಕಿಂತ ಕಡಿಮೆ ಇದೆ. ಇಂಥ ಅಪ್ರತಿಮ ಬ್ಯಾಟ್ಸ್​ಮನ್ ಆಗಿರುವ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲೂ ಹಿಂದುಳಿದಿಲ್ಲ. ಭಾರತಕ್ಕೆ ಅತ್ಯವಶ್ಯಕವಾಗಿದ್ದ ಆತ್ಮಸ್ಥೈರ್ಯವನ್ನು ಬರಲು ಕಾರಣವಾಗಿದ್ದರಲ್ಲಿ ಇವರ ಕ್ಯಾಪ್ಟನ್ಸಿಯ ಪಾತ್ರವೂ ಇದೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಇವರ ನಾಯಕತ್ವದಲ್ಲಿ ಭಾರತ ಅನೇಕ ಮೈಲಿಗಲ್ಲುಗಳನ್ನ ಮುಟ್ಟಿದೆ. ಆದರೆ, ನಾಯಕರಾಗಿ ವಿರಾಟ್ ಕೊಹ್ಲಿ ಎದುರಿಸುವ ಕೊರತೆ ಎಂದರೆ ಯಾವುದೇ ವಿಶ್ವಕಪ್ ಗೆಲ್ಲದಿರುವುದು ಹಾಗೂ ಐಪಿಎಲ್ ಟೂರ್ನಿಯನ್ನ ಗೆಲ್ಲದೇ ಇರುವುದು. ಈ ಬಾರಿ ಎರಡನ್ನೂ ದಕ್ಕಿಸಿಕೊಳ್ಳುವ ಅವಕಾಶ ಇದೆ. ಆ ನಿರೀಕ್ಷೆ ಈಡೇರುತ್ತದಾ ಎಂದು ಕಾದುನೋಡಬೇಕು.
  Published by:Vijayasarthy SN
  First published: