IPL ಸೀಸನ್ 14 ಶುರುವಾಗಲು ವಾರಗಳು ಮಾತ್ರ ಉಳಿದಿದೆ. ಈಗಾಗಲೇ ಫ್ರಾಂಚೈಸಿಗಳು ಐಪಿಎಲ್ಗೆ ಸಿದ್ಧತೆಗಳನ್ನು ಶುರು ಮಾಡಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ತಮ್ಮ ಆಟಗಾರರಿಗೆ 7 ದಿನಗಳ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಇತ್ತ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಕೆಲ ಆಟಗಾರರು ಚೆನ್ನೈನಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಲ್ಲದೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಹೊಸ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವುದನ್ನು ಧೋನಿ ಖಚಿತ ಪಡಿಸಿದ್ದಾರೆ. ತಂಡದ ನೂತನ ಜೆರ್ಸಿಯನ್ನು ವಿಡಿಯೋ ಮೂಲಕ ಅನಾವರಣಗೊಳಿಸಿರುವ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಿಷಲ್ ಹೊಡೆಯುವಂತೆ ತಿಳಿಸಿದ್ದಾರೆ.
ತಂಡದ ಜೆರ್ಸಿಯ ಬಣ್ಣವು ಈ ಹಿಂದಿನಂತೆ ಹಳದಿಯಲ್ಲೇ ಇರಲಿದ್ದು, ಇದರ ಹೊರತಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ಜೆರ್ಸಿಯ ಭುಜದ ಭಾಗದಲ್ಲಿ ಸೈನ್ಯಕ್ಕೆ ಗೌರವ ಸೂಚಿಸುವ ಸಲುವಾಗಿ ಸೈನಿಕರ ಸಮವಸ್ತ್ರದ ಪಟ್ಟಿಗಳನ್ನು ನೀಡಲಾಗಿದೆ. ಹಾಗೆಯೇ ಈ ಬಾರಿ ತಂಡದ ಪ್ರಾಯೋಜಕತ್ವವನ್ನು ಮಿಂತ್ರಾ ಕಂಪೆನಿ ಪಡೆದುಕೊಂಡಿದ್ದು, ಅದರಂತೆ ಈ ಹಿಂದಿನ ಮುತ್ತೂಟ್ ಫೈನಾನ್ಸ್ ಕಂಪೆನಿಯ ಲೋಗೋ ಬದಲಿಗೆ ಹೊಸ ಲೋಗೋ ಕಾಣಿಸಿಕೊಳ್ಳಲಿದೆ.
Thala Dharisanam! #WearOnWhistleOn with the all new #Yellove! #WhistlePodu 💛🦁
🛒 - https://t.co/qS3ZqqhgGe pic.twitter.com/Gpyu27aZfL
— Chennai Super Kings (@ChennaiIPL) March 24, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ