HOME » NEWS » Sports » CRICKET IPL 2021 MOEEN ALI TELLS CSK HE WONT WEAR LOGO OF ALCOHOL BRAND ON JERSEY ZP

IPL 2021: ಮೊಯೀನ್ ಅಲಿ ಮನವಿಗೆ ಸಮ್ಮತಿ ಸೂಚಿಸಿದ CSK

ಕಳೆದ ಬಾರಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಕಣಕ್ಕಿಳಿದಿದ್ದ ಮೊಯೀನ್ ಅಲಿ ಅವರು ಈ ಬಾರಿ 7 ಕೋಟಿ ಮೌಲ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು. ಇದುವರೆಗೆ ಐಪಿಎಲ್​ನಲ್ಲಿ 19 ಪಂದ್ಯಗಳನ್ನಾಡಿರುವ ಅಲಿ 309 ರನ್‌ ಹಾಗೂ 10 ವಿಕೆಟ್‌ ಪಡೆದಿದ್ದಾರೆ.

news18-kannada
Updated:April 4, 2021, 6:35 PM IST
IPL 2021: ಮೊಯೀನ್ ಅಲಿ ಮನವಿಗೆ ಸಮ್ಮತಿ ಸೂಚಿಸಿದ CSK
csk
  • Share this:
ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದು, ಎಲ್ಲಾ ತಂಡಗಳು ಭರದ ಸಿದ್ಧತೆಯಲ್ಲಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್​ರೌಂಡರ್ ಮೊಯೀನ್ ಅಲಿ ತಂಡದ ಮ್ಯಾನೇಜ್ಮೆಂಟ್​ಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿರುವುದು ಬಹಿರಂಗವಾಗಿದೆ. ಹೌದು, ತಮ್ಮ ಜೆರ್ಸಿಯಲ್ಲಿ ಯಾವುದೇ ಆಲ್ಕೋಹಾಲ್ ಉತ್ಪನ್ನಗಳ ಜಾಹೀರಾತು ನೀಡದಂತೆ ಮೊಯೀನ್ ಅಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಸಿಎಸ್​ಕೆ ತಂಡ ಇದೀಗ ಮೊಯೀನ್ ಅಲಿ ಅವರಿಗೆ ವಿಶೇಷ ಜೆರ್ಸಿಯನ್ನು ನೀಡಿದೆ.

ಅದರಂತೆ ಮೊಯೀನ್ ಅಲಿ ಧರಿಸಲಿರುವ ಜೆರ್ಸಿಯಲ್ಲಿ ಯಾವುದೇ ರೀತಿಯ ಆಲ್ಕೋಹಾಲ್ ಬ್ರ್ಯಾಂಡ್​ನ ಲೋಗೋ ಅಥವಾ ಜಾಹೀರಾತು ಇರುವುದಿಲ್ಲ. ಪ್ರಸ್ತುತ ಸಿಎಸ್​ಕೆ ತಂಡದ ಪ್ರಮುಖ ಪ್ರಾಯೋಜಕರಾಗಿ SNJ 10000 ಕಂಪೆನಿಯಿದ್ದು, ಇದು ಚೆನ್ನೈ ಮೂಲದ ಆಲ್ಕೋಹಾಲ್​ ಉತ್ಪನ್ನದ ಬ್ರ್ಯಾಂಡ್ ಆಗಿದೆ. ಈ ಕಂಪೆನಿಯ ಜಾಹೀರಾತು ಮೊಯೀನ್ ಅಲಿ ಅವರ ಜೆರ್ಸಿ ಮೇಲೆ ಕಾಣಿಸಿಕೊಳ್ಳುವುದಿಲ್ಲ.
ಮೊಯೀನ್ ಅಲಿ ಅವರು ಈ ಹಿಂದೆಯೇ ಮಾದಕ ವಸ್ತುಗಳ ಜಾಹೀರಾತಿನಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅದರಂತೆ ಇಂಗ್ಲೆಂಡ್ ತಂಡದ ಶಾಂಪೇನ್ ಸಂಭ್ರಮ, ಇತರೆ ಉತ್ಪನ್ನಗಳ ಪ್ರಚಾರಗಳಿಂದ ಹೊರುಗುಳಿಯುತ್ತಿದ್ದರು. ಇದೀಗ ಸಿಎಸ್​ಕೆ ತಂಡದ ಆಲ್ಕೋಹಾಲ್​ ಪ್ರಾಯೋಜಕತ್ವದಿಂದ ಕೂಡ ವಿನಾಯಿತಿ ಪಡೆದುಕೊಂಡಿದ್ದಾರೆ.

ಕಳೆದ ಬಾರಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಕಣಕ್ಕಿಳಿದಿದ್ದ ಮೊಯೀನ್ ಅಲಿ ಅವರು ಈ ಬಾರಿ 7 ಕೋಟಿ ಮೌಲ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು. ಇದುವರೆಗೆ ಐಪಿಎಲ್​ನಲ್ಲಿ 19 ಪಂದ್ಯಗಳನ್ನಾಡಿರುವ ಅಲಿ 309 ರನ್‌ ಹಾಗೂ 10 ವಿಕೆಟ್‌ ಪಡೆದಿದ್ದಾರೆ.
Published by: zahir
First published: April 4, 2021, 6:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories