IPL 2021: ಐಪಿಎಲ್ ಹರಾಜು ಪಟ್ಟಿಯಲ್ಲಿರುವ 18 ಹಿರಿಯ ಆಟಗಾರರು ಇವರೇ..!

2010 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ವೇಗಿ ಫಿಡೆಲ್ ಎಡ್ವರ್ಡ್ಸ್​ ಅವರ ಪ್ರಸ್ತುತ ವಯಸ್ಸು 39 ವರ್ಷ. ಇವರೂ ಕೂಡ ಈ ಬಾರಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

IPL 2021

IPL 2021

 • Share this:
  IPL 2021 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 18 ರಂದು ಚೆನ್ನೈನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಈ ಹರಾಜಿಗಾಗಿ 1097 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಇದೀಗ ಆಟಗಾರರ ಶಾರ್ಟ್​ ಲೀಸ್ಟ್ ಮಾಡಲಾಗಿದ್ದು, ಅದರಂತೆ 292 ಆಟಗಾರರನ್ನು ಬಿಡ್ಡಿಂಗ್​ಗೆ ಆರಿಸಲಾಗಿದೆ.

  ಈ ಅಂತಿಮ ಪಟ್ಟಿಯಲ್ಲಿ 164 ಭಾರತೀಯ ಕ್ರಿಕೆಟರುಗಳಿದ್ದಾರೆ. ಹಾಗೆಯೇ 128 ಫಾರಿನ್ ಪ್ಲೇಯರ್ಸ್ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಇದರಲ್ಲಿ 18 ಮಂದಿ ಆಟಗಾರರು 35 ವರ್ಷಕ್ಕಿಂತಲೂ ಮೇಲ್ಪಟ್ಟವರು ಎಂಬುದು ವಿಶೇಷ. ಹಾಗಿದ್ರೆ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಹಿರಿಯ ಆಟಗಾರರು ಯಾರು ಎಂದು ನೋಡೋಣ...

  ಅರುಣ್ ಕಾರ್ತಿಕ್: ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿರುವ 35 ವರ್ಷದ ಅರುಣ್ ಕಾರ್ತಿಕ್ ಕೂಡ ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  ಪ್ರದೀಪ್ ಸಾಹು: ಮತ್ತೋರ್ವ ದೇಶೀಯ ಪ್ರತಿಭೆ 35 ವರ್ಷದ ಸಾಹು ಸಹ ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  ಅಕ್ಷಯ್ ವಖೇದೆ: ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿರುವ ಅಕ್ಷಯ್ ಕೂಡ ಐಪಿಎಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಪ್ರಸ್ತುತ ವಯಸ್ಸು 35 ವರ್ಷ.

  ಜಾನ್ ರಾಸ್ ಜಗೇಸರ್: ವೆಸ್ಟ್ ಇಂಡೀಸ್​ನ 35 ವರ್ಷದ ಜಾನ್ ರಾಸ್ ಕೂಡ ಐಪಿಎಲ್​ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  ನೀಲ್ ವೇಗ್ನರ್: ನ್ಯೂಜಿಲೆಂಡ್ ಕ್ರಿಕೆಟರ್ 35 ವರ್ಷದ ನೀಲ್ ವೇಗ್ನರ್ ಸಹ ಈ ಬಾರಿ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

  ಮೊಹಮದುಲ್ಲಾ: ಬಾಂಗ್ಲಾದೇಶದ 35 ವರ್ಷ ಬ್ಯಾಟ್ಸಮನ್ ಮೊಹಮದುಲ್ಲಾ ಕೂಡ ಈ ಬಾರಿಯ ಐಪಿಎಲ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  ರವಿ ಬೋಪಾರ: ಇಂಗ್ಲೆಂಡ್​ನ ಆಟಗಾರ ರವಿ ಬೋಪಾರ ಸಹ ಈ ಬಾರಿ ಐಪಿಎಲ್ ಬಿಡ್ಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಪ್ರಸ್ತುತ ವಯಸ್ಸು 35 ವರ್ಷ.

  ಡೇವಿಡ್ ವೀಸ್: ದಕ್ಷಿಣ ಆಫ್ರಿಕಾದ 35 ವರ್ಷದ ಹಿರಿಯ ಆಟಗಾರ ಡೇವಿಡ್ ವೀಸ್ ಸಹ ಈ ಬಾರಿ ಬಿಡ್ಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  ಲಿಯಾಮ್ ಪ್ಲಂಕೆಟ್: ಇಂಗ್ಲೆಂಡ್​ನ 36 ವರ್ಷ ಆಟಗಾರ ಲಿಯಾಮ್ ಪ್ಲಂಕೆಟ್ ಸಹ ಈ ಬಾರಿ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  ಸ್ಟುವರ್ಟ್ ಬಿನ್ನಿ: ಮಾಜಿ ಆರ್​ಸಿಬಿ ಆಟಗಾರ ಸ್ಟುವರ್ಟ್ ಬಿನ್ನಿ ಹೆಸರು ಕೂಡ ಈ ಬಾರಿಯ ಹರಾಜು ಪಟ್ಟಿಯಲ್ಲಿದೆ. ಪ್ರಸ್ತುತ ಬಿನ್ನಿ ವಯಸ್ಸು 36 ವರ್ಷ.

  ಕೇದರ್ ಜಾಧವ್: ಕಳೆದ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸಿದ್ದ ಕೇದರ್ ಜಾಧವ್ ಈ 2 ಕೋಟಿ ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜು ಪಟ್ಟಿಯಲ್ಲಿದ್ದಾರೆ. 36 ವರ್ಷದ ಜಾಧವ್ 2 ಕೋಟಿಗೆ ಸೇಲ್ ಆಗಲಿದ್ದಾರಾ ಕಾದು ನೋಡಬೇಕಿದೆ.

  ಮೊರ್ನೆ ಮೋರ್ಕಲ್: ಮಾಜಿ ಕೆಕೆಆರ್ ತಂಡದ ಬೌಲರ್ ದಕ್ಷಿಣ ಆಫ್ರಿಕಾದ ಮೊರ್ಕಲ್ ಅವರು ಕೂಡ ಈ ಬಾರಿಯ ಐಪಿಎಲ್​ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಅಲ್ಲದೆ 36 ವರ್ಷದ ಮೊರ್ಕಲ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  ಅನುಸಪ್ತ್ ಮಜುಂದಾರ್: 36 ವರ್ಷದ ದೇಶೀಯ ಕ್ರಿಕೆಟ್ ಅನುಸಪ್ತ್ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಿಂಚಿದ್ದರು. ಇದೀಗ ಐಪಿಎಲ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವ ವಿಶ್ವಾಸದಲ್ಲಿದ್ದಾರೆ.

  ಶಾನ್ ಮಾರ್ಷ್​: 2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಅವರು ಕೂಡ ಈ ಬಾರಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ಷ್ ಅವರ ಪ್ರಸ್ತುತ ವಯಸ್ಸು 37 ವರ್ಷ.

  ಡೇನಿಯಲ್ ಕ್ರಿಶ್ಚಿಯನ್: 2010 ರಲ್ಲಿ ಐಪಿಎಲ್ ಆಡಿದ್ದ ಅಸ್ಟ್ರೇಲಿಯಾದ 37 ವರ್ಷದ ಡೇನಿಯಲ್ ಕ್ರಿಶ್ಚಿಯನ್ ಕೂಡ ಈ ಬಾರಿ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  ಫಿಡೆಲ್ ಎಡ್ವರ್ಡ್ಸ್​: 2010 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ವೆಸ್ಟ್ ಇಂಡೀಸ್ ವೇಗಿ ಫಿಡೆಲ್ ಎಡ್ವರ್ಡ್ಸ್​ ಅವರ ಪ್ರಸ್ತುತ ವಯಸ್ಸು 39 ವರ್ಷ. ಇವರೂ ಕೂಡ ಈ ಬಾರಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  ಹರ್ಭಜನ್ ಸಿಂಗ್: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಿರುವ ಹರ್ಭಜನ್ ಸಿಂಗ್ ಅವರ ವಯಸ್ಸು 40 ವರ್ಷ. ಇದಾಗ್ಯೂ ಭಜ್ಜಿ 2 ಕೋಟಿ ಮೂಲ ಬೆಲೆಯೊಂದಿಗೆ ಈ ಬಾರಿ ಕೂಡ ಐಪಿಎಲ್​ ಆಡುವ ಇರಾದೆಯಲ್ಲಿದ್ದಾರೆ.

  ನಯನ್ ದೋಶಿ: ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಅವರ ಪುತ್ರ ನಯನ್ ದೋಶಿ ಈ ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರ. ಪ್ರಸ್ತುತ ಅವರ ವಯಸ್ಸು 42 ವರ್ಷ. 2010 ರಲ್ಲಿ ಆರ್​ಸಿಬಿ ಹಾಗೂ 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ನಯನ್ ದೋಶಿ ಇದೀಗ 10 ವರ್ಷಗಳ ಬಳಿಕ ಮತ್ತೊಮ್ಮೆ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
  Published by:zahir
  First published: