IPL 2021: ಆಟಗಾರನ ಕೋವಿಡ್ ಟೆಸ್ಟ್ ನೆಗೆಟಿವ್: KKR ತಂಡ ನಿರಾಳ..!

ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಆಟಗಾರನಾಗಿರುವ ನಿತೀಶ್ ರಾಣಾ ಇದುವರೆಗೆ 60 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 11 ಅರ್ಧಶತಕಗಳೊಂದಿಗೆ 1437 ರನ್‌ ಬಾರಿಸಿದ್ದಾರೆ. ಈ ಬಾರಿ ಕೂಡ ಕೆಕೆಆರ್​ ತಂಡದ ಬ್ಯಾಟಿಂಗ್ ಬಳಗದಲ್ಲಿ ಎಡಗೈ ದಾಂಡಿಗ ರಾಣಾ ಸ್ಥಾನ ಪಡೆಯುವುದು ಬಹುತೇಕ ಖಚಿತ.

KKR

KKR

 • Share this:
  IPL 2021 ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಲ್ಲಾ ತಂಡಗಳ ಆಟಗಾರರು ಇದೀಗ ಅಭ್ಯಾಸವನ್ನು ಆರಂಭಿಸಿದ್ದು, ಕೆಲ ಆಟಗಾರರು ಕ್ವಾರಂಟೈನ್​ನಲ್ಲಿದ್ದಾರೆ. ಇತ್ತ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಪಂದ್ಯಕ್ಕಾಗಿ ಚೆನ್ನೈಗೆ ಆಗಮಿಸಿದರೆ, ಕೊಲ್ಕತ್ತಾ ನೈಟ್​ ರೈಡರ್ಸ್ ಆಟಗಾರರು ಮುಂಬೈಗೆ ಬಂದಿಳಿದಿತ್ತು.

  ಇದರ ಬೆನ್ನಲ್ಲೇ ತಂಡದ ಪ್ರಮುಖ ಆಟಗಾರ ನಿತೀಶ್ ರಾಣಾಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಮಾರ್ಚ್ 22 ರಂದು ಬಯೋಬಬಲ್ ಪ್ರವೇಶಕ್ಕೂ ಮುನ್ನ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ನಿತೀಶ್ ರಾಣಾಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಹೀಗಾಗಿ ಯುವ ಆಟಗಾರರನ್ನು ಪತ್ಯೇಕವಾಗಿ ಇರಿಸಲಾಗಿದೆ ಎಂದು ವರದಿಯೊಂದು ತಿಳಿಸಿತ್ತು.

  ಇತ್ತೀಚೆಗೆ ನಡೆದ ದೇಶೀಯ ಕ್ರಿಕೆಟ್ ಟೂರ್ನಿಗಳಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ನಿತೀಶ್ ರಾಣಾ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು. ಈ ಟೂರ್ನಿ ಬಳಿಕ ಎಡಗೈ ದಾಂಡಿಗ ಗೋವಾಗೆ ತೆರಳಿ ರಜಾ ದಿನಗಳನ್ನು ಕಳೆದಿದ್ದರು. ಆ ಬಳಿಕವಷ್ಟೇ ಐಪಿಎಲ್​ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದರು. ಇದೇ ವೇಳೆ ಕೊರೋನಾ ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ ಎನ್ನಲಾಗಿತ್ತು.

  ಅಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಶಿಬಿರದಿಂದ ರಾಣಾ ಅವರನ್ನು ದೂರವಿರಿಸಲಾಗಿತ್ತು. ಇದೀಗ ಅವರ ಹೊಸ ಕೋವಿಡ್ ಟೆಸ್ಟ್ ವರದಿಯು ನೆಗೆಟಿವ್ ಬಂದಿದ್ದು, ಕೊರೋನಾ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಗುರುವಾರ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಅವರು ಸೋಂಕಿನಿಂದ ಮುಕ್ತರಾಗಿರುವುದು ಕಂಡು ಬಂದಿದೆ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಅಧಿಕೃತವಾಗಿ ಮಾಹಿತಿ ನೀಡಿದೆ.

  ಈ ಬಾರಿ ಐಪಿಎಲ್​ನಲ್ಲಿ ಪಾಲ್ಗೊಳ್ಳುವ ಆಟಗಾರರು ಬಯೋಬಬಲ್​ಗೂ ಮುನ್ನ ಕೊರೋನಾ ನೆಗೆಟಿವ್ ವರದಿ ಹೊಂದಿರಬೇಕಿರುವುದು ಕಡ್ಡಾಯ. ಹೀಗಾಗಿ 7 ದಿನಗಳ ಕ್ವಾರಂಟೈನ್​ ಮುಗಿಸಿ ಆಟಗಾರರನ್ನು ಬಯೋಬಬಲ್​ ಪ್ರವೇಶಕ್ಕೆ ಅನುಮತಿಸಲಾಗುತ್ತದೆ. ಇಷ್ಟು ದಿನ ಕ್ವಾರಂಟೈನ್​ನಲ್ಲಿದ್ದ ನಿತೀಶ್ ರಾಣಾ ಅವರ ಹೊಸ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿರುವುದರಿಂದ ಶೀಘ್ರದಲ್ಲೇ ಅವರು ಕೆಕೆಆರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

  ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಆಟಗಾರನಾಗಿರುವ ನಿತೀಶ್ ರಾಣಾ ಇದುವರೆಗೆ 60 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 11 ಅರ್ಧಶತಕಗಳೊಂದಿಗೆ 1437 ರನ್‌ ಬಾರಿಸಿದ್ದಾರೆ. ಈ ಬಾರಿ ಕೂಡ ಕೆಕೆಆರ್​ ತಂಡದ ಬ್ಯಾಟಿಂಗ್ ಬಳಗದಲ್ಲಿ ಎಡಗೈ ದಾಂಡಿಗ ರಾಣಾ ಸ್ಥಾನ ಪಡೆಯುವುದು ಬಹುತೇಕ ಖಚಿತ.
  Published by:zahir
  First published: