MI vs RCB: ಆರ್​ಸಿಬಿ ಎದುರು ಆರಂಭದಲ್ಲಿ ಅಬ್ಬರಿಸಿ ಕೊನೆಗೆ ಸೈಲೆಂಟ್​ ಆದ ಮುಂಬೈ ಪಡೆ!

ಸ್ಕ್ರೀಸ್​ಗೆ ಅಂಟಿಕೊಂಡ ಕ್ರಿಸ್​ ಲಿನ್ ಮತ್ತು ಸೂರ್ಯಕುಮಾರ್​ ಯಾದವ್​​ ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಓವರ್​ಗೆ ಒಂದು ಬೌಂಡರಿ ಬಾರಿಸುವ ಮೂಲಕ ಕ್ರಿಸ್​ ಲಿನ್​ ಕೊಹ್ಲಿ ಪಡೆಗೆ ಕಂಟಕವಾಗುವ ಎಲ್ಲಾ ಸೂಚನೆಯನ್ನೂ ನೀಡಿದ್ದರು.

ವಿರಾಟ್​ ಕೊಹ್ಲಿ-ರೋಹಿತ್ ಶರ್ಮಾ.

ವಿರಾಟ್​ ಕೊಹ್ಲಿ-ರೋಹಿತ್ ಶರ್ಮಾ.

 • Share this:
  ಚೆನ್ನೈ (ಏಪ್ರಿಲ್ 09); ಐಪಿಎಲ್​ 2021 ಸೀಸನ್ ಆರಂಭವಾಗಿದೆ. ಸಾಮಾನ್ಯವಾಗಿ ಐಪಿಎಲ್ ಅಂದ್ರೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಬೌಲಿಂಗ್ ಕಳಪೆ ಎಂದೇ ಹೇಳಲಾಗುತ್ತದೆ. ಈ ಮಾತಿನಂತೆಯೇ ಇಂದು ಸಹ ಬೌಲಿಂಗ್ ಆರಂಭಿಸಿದ್ದ ಬೆಂಗಳೂರು ತಂಡ ಆರಂಭದ ನಾಲ್ಕು ಓವರ್​ಗಳನ್ನು ಉತ್ತಮವಾಗಿ ನಿರ್ವಹಿಸಿದ್ದರೂ ಸಹ ತದನಂತರ ಸ್ಕ್ರೀಸ್​ಗೆ ಅಂಟಿಕೊಂಡ ಕ್ರಿಸ್​ ಲಿನ್ ಮತ್ತು ಸೂರ್ಯಕುಮಾರ್​ ಯಾದವ್​​ ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಓವರ್​ಗೆ ಒಂದು ಬೌಂಡರಿ ಬಾರಿಸುವ ಮೂಲಕ ಕ್ರಿಸ್​ ಲಿನ್​ ಕೊಹ್ಲಿ ಪಡೆಗೆ ಕಂಟಕವಾಗುವ ಎಲ್ಲಾ ಸೂಚನೆಯನ್ನೂ ನೀಡಿದ್ದರು. ಒಂದು ಹಂತದಲ್ಲಿ ತಂಡದ ಮೊತ್ತ 10 ಓವರ್​ಗೆ 85ರ ಗಡಿ ದಾಟಿತ್ತು.

  ಬೆಂಗಳೂರು ತಂಡದ ವೇಗ ಮತ್ತು ಸ್ಪಿನ್​ ದಾಳಿಯನ್ನು ಈ ಜೋಡಿ ಮನಬಂದಂತೆ ದಂಡಿಸಲು ಆರಂಭಿಸಿತ್ತು. ಆದರೆ, ಈ ವೇಳೆ ದಾಳಿಗೆ ಇಳಿದ ಜೇಮಿಸನ್ ಸೂರ್ಯಕುಮಾರ್ (31)​ ಯಾದವ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಯಾದವ್ ಬೆನ್ನಿಗೆ ಕ್ರಿಸ್​ ಲಿನ್ (49) ಸಹ ಸುಂದರ್​ಗೆ ವಿಕೆಟ್​ ಒಪ್ಪಿಸಿ ಹೊರ ನಡೆದರು. ಒಂದು ಹಂತದಲ್ಲಿ 200 ರನ್​ ಗಡಿ ದಾಟುವ ಹುಮ್ಮಸ್ಸಿನಲ್ಲಿದ್ದ ಮುಂಬೈ ನಂತರ ಕಂಡದ್ದು ಕುಸಿತದ ಹಾದಿ.

  ಹರ್ಷಲ್ ಪಟೇಲ್ ಮ್ಯಾಜಿಕ್:

  ನವದೀಪ್​ ಸೈನಿ ಬೆಂಗಳೂರು ತಂಡದ ಪ್ರಮುಖ ಬೌಲರ್. ಆದರೆ ಚೆನ್ನೈ ಅಂಗಳ ನಿಧಾನ ಗತಿಯಿಂದ ಕೂಡಿದೆ ಎಂಬ ವಿಚಾರವನ್ನು ಮೊದಲೇ ಗ್ರಹಿಸಿದ್ದ  ನಾಯಕ ಕೊಹ್ಲಿ ಇಂದು ಸೈನಿ ಬದಲಿಗೆ ಹರ್ಷಲ್​ ಪಟೇಲ್ ಅವರನ್ನು ಅಂಗಳಕ್ಕೆ ಇಳಿಸಿದ್ದರು. ಕೊನೆಗೂ ಕೊಹ್ಲಿಯ ತಂತ್ರ ಇಂದು ಕೈ ಹಿಡಿದಿದೆ.

  ಇದನ್ನೂ ಓದಿ: IPL 2021 MI vs RCB: ಹರ್ಷಲ್ ಪಟೇಲ್ ದಾಳಿಗೆ ನಲುಗಿದ ಮುಂಬೈ: ಆರ್​ಸಿಬಿಗೆ ಸಾಧಾರಣ ಸವಾಲು

  ಐಪಿಎಲ್​ ಕ್ರಿಕೆಟ್​ ಇತಿಹಾಸದಲ್ಲೇ ಯಾವ ಬೌಲರ್​​ ಸಹ ಮೊದಲ ಪಂದ್ಯದಲ್ಲಿ 5 ವಿಕೆಟ್​ ಗೊಂಚಲನ್ನು ಪಡೆದಿಲ್ಲ. ಆ ಸಾಧನೆಯನ್ನು ಇಂದು ಹರ್ಷಲ್ ಪಟೇಲ್ ಮಾಡಿದ್ದಾರೆ. ಕೊನೆಯ 31 ರನ್​ಗಳಿಗೆ ಮುಂಬೈ 6 ವಿಕೆಟ್​ ಕಳೆದುಕೊಂಡರೆ ಅದರಲ್ಲಿ 5 ವಿಕೆಟ್​ಗಳನ್ನು ಹರ್ಷಲ್ ಪಟೇಲ್ ಅವರೇ ಕಬಳಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

  ಹರ್ಷಲ್​ ಪಟೇಲ್ ದಾಳಿಗೆ ನಲುಗಿದ ಮುಂಬೈ ಕೊನೆಗೆ ನಿಗದಿತ 20 ಓವರ್​ಗಳಲ್ಲಿ 159 ದಾಖಲಿಸುವ ಮೂಲಕ ಆರ್​ಸಿಬಿಗೆ ಸಾಧಾರಣ ಮೊತ್ತವನ್ನು ಗುರಿಯಾಗಿ ನೀಡಿದೆ. ಈ ಗುರಿಯನ್ನು ಆರ್​ಸಿಬಿ ಹೇಗೆ ಬೆನ್ನಟ್ಟಲಿದೆ? ಎಂಬುದನ್ನು ಕಾದುನೋಡಬೇಕಿದೆ.
  Published by:MAshok Kumar
  First published: