HOME » NEWS » Sports » CRICKET IPL 2021 FANS GO GAGA AFTER SEEING GLENN MAXWELL IN RCB COLOURS ZP

IPL 2021: ಅಭ್ಯಾಸ ಆರಂಭಿಸಿದ ಮ್ಯಾಕ್ಸ್​ವೆಲ್: RCB ಹೊಸ ಆಟಗಾರನ ಬ್ಯಾಟಿಂಗ್ ವಿಡಿಯೋ ವೈರಲ್

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಫಿನ್ ಅಲೆನ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್

news18-kannada
Updated:April 6, 2021, 4:43 PM IST
IPL 2021: ಅಭ್ಯಾಸ ಆರಂಭಿಸಿದ ಮ್ಯಾಕ್ಸ್​ವೆಲ್: RCB ಹೊಸ ಆಟಗಾರನ ಬ್ಯಾಟಿಂಗ್ ವಿಡಿಯೋ ವೈರಲ್
maxwell
  • Share this:
ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ದಿನಗಳು ಮಾತ್ರ ಉಳಿದಿವೆ. ಏಪ್ರಿಲ್ 9 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಕಣಕ್ಕಿಳಿಯಲಿದೆ. ಈಗಾಗಲೇ ಆರ್​ಸಿಬಿ ತಂಡದ ಆಟಗಾರರು ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇದೀಗ ಆರ್​ಸಿಬಿ ತಂಡದ ಹೊಸ ಆಟಗಾರ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.

ಕ್ವಾರಂಟೈನ್ ಮುಗಿಸಿ ತಂಡದ ಬಯೋಬಬಲ್ ಪ್ರವೇಶಿಸಿರುವ ಗ್ಲೆನ್ ಮ್ಯಾಕ್ಸ್​ವೆಲ್ ಅಭ್ಯಾಸ ಶುರು ಮಾಡಿದ್ದಾರೆ. ಇದೇ ವೇಳೆ ಚಿತ್ರೀಕರಿಸಲಾದ ವಿಡಿಯೋವನ್ನು ಆರ್​ಸಿಬಿ ತಂಡದ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಭ್ಯಾಸದ ವೇಳೆ ಸ್ವಿಚ್ ಹಿಟ್​ ಶಾಟ್​ ಮೂಲಕ ಸಿಕ್ಸರ್​​ಗಳನ್ನು ಬಾರಿಸುತ್ತಿರುವ ಮ್ಯಾಕ್ಸಿಯ ವಿಡಿಯೋ ವೈರಲ್ ಆಗಿದ್ದು, ಈ ಮೂಲಕ ಈ ಬಾರಿ ಆರ್​ಸಿಬಿ ಪರ ಸ್ವಿಚ್ ಹಿಟ್​ ಮೂಲಕವೇ ರನ್​ ಮಳೆ ಸುರಿಸುವ ಸೂಚನೆ ನೀಡಿದ್ದಾರೆ ಮ್ಯಾಕ್ಸ್​ವೆಲ್.

ಈ ಬಾರಿ ಆರ್​ಸಿಬಿ ತಂಡದಲ್ಲಿ ಉತ್ತಮ ಆಲ್​ರೌಂಡರ್​ಗಳಿದ್ದಾರೆ. ಅದರಲ್ಲೂ ವಿಶೇಷವಾಗಿ ಆರ್​ಸಿಬಿ ತಂಡದಲ್ಲಿರುವ ವಿದೇಶಿ ಆಟಗಾರರಲ್ಲಿ 5 ಮಂದಿ ಆಸ್ಟ್ರೇಲಿಯಾ ಕ್ರಿಕೆಟಿಗರು. ಹಾಗೆಯೇ ಇನ್ನಿಬ್ಬರು ನ್ಯೂಜಿಲೆಂಡ್ ಆಟಗಾರರು. ಇವರೊಂದಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ತಂಡದಲ್ಲಿ ಆಪತ್ಭಾಂಧವನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿಯ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಫಿನ್ ಅಲೆನ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ಆಡಂ ಝಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ ವೆಲ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.
Published by: zahir
First published: April 6, 2021, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories