• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ಐಪಿಎಲ್‌ ಬಗ್ಗೆ 7 ವರ್ಷಗಳ ಹಿಂದಿನ ಧೋನಿ ಟ್ವೀಟ್‌ ವೈರಲ್; ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..

ಐಪಿಎಲ್‌ ಬಗ್ಗೆ 7 ವರ್ಷಗಳ ಹಿಂದಿನ ಧೋನಿ ಟ್ವೀಟ್‌ ವೈರಲ್; ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..

ಧೋನಿ

ಧೋನಿ

IPL 2021: ಮಹೇಂದ್ರ ಸಿಂಗ್ ಧೋನಿ ಅವರ ಹಳೆಯ ಟ್ವೀಟ್ ಐಪಿಎಲ್ 2021 ಋತುವಿಗೆ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಪುನರುಜ್ಜೀವನ ಪಡೆದುಕೊಂಡಿದ್ದು, ವೈರಲ್‌ ಆಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನುಮತ್ತೊಮ್ಮೆ ಮುನ್ನಡೆಸಲು ಸಜ್ಜಾಗಿರುವ ಧೋನಿ, ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ತಮ್ಮ ತಂಡದೊಂದಿಗೆ ಕಠಿಣ ಶ್ರಮ ವಹಿಸುತ್ತಿದ್ದಾರೆ.

ಮುಂದೆ ಓದಿ ...
 • Share this:

  ಐಪಿಎಲ್‌ 2021 ಹತ್ತಿರವಾಗುತ್ತಿದ್ದಂತೆ ದೇಶದ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕ್ರಿಕೆಟ್‌ ಜ್ವರ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ನೆಚ್ಚಿನ ಕ್ರಿಕೆಟ್‌ ಆಟಗಾರನ ಕುರಿತು ಅಪ್‌ಡೇಟ್‌ಗಳು ರಾರಾಜಿಸುತ್ತಿರುತ್ತವೆ. ಇದೇ ರೀತಿ, ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಹಳೆಯ ಟ್ವೀಟ್‌ವೊಂದನ್ನು ಈಗ ವೈರಲ್‌ ಮಾಡಿದ್ದಾರೆ. ಧೋನಿ 2014 ರಲ್ಲಿ ಐಪಿಎಲ್‌ ಬಗ್ಗೆ ಮಾಡಿದ್ದ ಆ ಟ್ವೀಟ್‌ಗೆ ಈಗ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇಷ್ಟಕ್ಕೂ ಆ ಟ್ವೀಟ್‌ ಏನು ಅಂತೀರಾ..? ಮುಂದೆ ಓದಿ.


  ಮಹೇಂದ್ರ ಸಿಂಗ್ ಧೋನಿ ಅವರ ಹಳೆಯ ಟ್ವೀಟ್ ಐಪಿಎಲ್ 2021 ಋತುವಿಗೆ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಪುನರುಜ್ಜೀವನ ಪಡೆದುಕೊಂಡಿದ್ದು, ವೈರಲ್‌ ಆಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನುಮತ್ತೊಮ್ಮೆ ಮುನ್ನಡೆಸಲು ಸಜ್ಜಾಗಿರುವ ಧೋನಿ, ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ತಮ್ಮ ತಂಡದೊಂದಿಗೆ ಕಠಿಣ ಶ್ರಮ ವಹಿಸುತ್ತಿದ್ದಾರೆ. ನಗದು ಸಮೃದ್ಧ ಲೀಗ್‌ನ 14 ನೇ ಆವೃತ್ತಿಯನ್ನು ಭಾರತವು ಏಪ್ರಿಲ್‌ನಿಂದ ಆಯೋಜಿಸಲು ಸಜ್ಜಾಗಿದೆ. ಆದರೆ ಪವರ್-ಪ್ಯಾಕ್ಡ್ ಟೂರ್ನಮೆಂಟ್ ಪ್ರಾರಂಭವಾಗುವ ಮೊದಲೇ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಮಹಿ ಅಭಿಮಾನಿಗಳು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕನವಿಂಟೇಜ್ ಟ್ವೀಟ್ ಅನ್ನು ಪತ್ತೆ ಹಚ್ಚಿದ್ದಾರೆ.


  ಅಷ್ಟಕ್ಕೂ ಆ ಟ್ವೀಟ್‌ನಲ್ಲಿ ಏನಿದೆ..?


  "ಯಾವ ತಂಡವು ಗೆದ್ದರೂ ಪರವಾಗಿಲ್ಲ, ನಾನು ಇಲ್ಲಿ ಮನರಂಜನೆಗಾಗಿ ಇದ್ದೇನೆ" ಎಂದು ಮಹೇಂದ್ರ ಸಿಂಗ್ ಧೋನಿ ಮಾರ್ಚ್ 24, 2014 ರಂದು ಟ್ವೀಟ್‌ ಮಾಡಿದ್ದಾರೆ.


  ಆದರೆ, ಟ್ವಿಟ್ಟರ್‌ ಬಳಕೆದಾರರು 7 ವರ್ಷಗಳ ಹಳೆಯ ಈ ಟ್ವೀಟ್‌ಗೆ ತಮ್ಮದೇ ಆದ ಅರ್ಥ ನೀಡುತ್ತಿದ್ದು, ವೈರಲ್‌ ಆಗುತ್ತಿದೆ. ಹೌದು, ನೀವು ಈ ಕೆಲ ಟ್ವೀಟ್‌ಗಳಲ್ಲಿ ಒಂದು ಬಾರಿಯೂ ಐಪಿಎಲ್‌ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಟೀಕೆ ಮಾಡುವುದನ್ನು ನೋಡಬಹುದು. ಧೋನಿಯ ಈ ಟ್ವೀಟ್‌ಗೆ ಹಲವು ನೆಟ್ಟಿಗರ ಪ್ರತಿಕ್ರಿಯೆಗಳು ಹೀಗಿವೆ ನೋಡಿ..  ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ, ಚೆನ್ನೈ ಸೂಪರ್‌ ಕಿಂಗ್ಸ್ ಕೆಟ್ಟದಾಗಿ ಪ್ರದರ್ಶನ ನೀಡಿತ್ತು. ಮೂರು ಬಾರಿಯ ಚಾಂಪಿಯನ್‌ಗಳು ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟರು ಮತ್ತು ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ-ಆಫ್ ಸ್ಥಾನಕ್ಕೆ ಎಂಟ್ರಿ ಪಡೆದುಕೊಳ್ಳಲೂ ಸಹ ಎಡವಿದರು.

  ಈ ಹಿನ್ನೆಲೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಮುಂಬರುವ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ತಂಡ ಎದುರು ನೋಡುತ್ತಿದೆ. ಅದರೆ, ಅದು ಅಷ್ಟು ಸುಲಭವಲ್ಲ. ಮತ್ತು ಪಂದ್ಯಾವಳಿಯ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಮತ್ತು ಅನುಭವಿ ವಿಶ್ಲೇಷಕ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

  First published: