HOME » NEWS » Sports » CRICKET IPL 2021 BILLY STANLAKE AND REECE TOPLEY REJECT OFFER FROM CSK ZP

IPL 2021: CSK ಪರ ಆಡುವುದಿಲ್ಲ ಎಂದ ಇಬ್ಬರು ಬೌಲರುಗಳು..!

ಎಂಎಸ್ ಧೋನಿ (ನಾಯಕ), ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್.

news18-kannada
Updated:April 4, 2021, 5:39 PM IST
IPL 2021: CSK ಪರ ಆಡುವುದಿಲ್ಲ ಎಂದ ಇಬ್ಬರು ಬೌಲರುಗಳು..!
Chennai Super Kings
  • Share this:
ಒಂದೆಡೆ ಕೊರೋನಾ ಆತಂಕ...ಇನ್ನೊಂದೆಡೆ ಐಪಿಎಲ್ ಆರಂಭಕ್ಕೆ ಸಿದ್ದತೆ...ಮತ್ತೊಂದೆಡೆ ಕೆಲ ಆಟಗಾರರು ಅಲಭ್ಯ...ಹೀಗೆ ನಾನಾ ಕಾರಣಗಳಿಂದ ಈ ಬಾರಿಯ ಐಪಿಎಲ್​ ಆರಂಭದಿಂದಲೇ ಸುದ್ದಿಯಲ್ಲಿದೆ. ಈಗಾಗಲೇ ಬಯೋಬಬಲ್​ ಹಾಗೂ ವೈಯುಕ್ತಿಕ ಕಾರಣಗಳನ್ನು ನೀಡಿ ಕೆಲ ಆಟಗಾರರು ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಅದರಲ್ಲೂ ಐಪಿಎಲ್ ಆರಂಭಕ್ಕೆ ವಾರಗಳು ಮಾತ್ರ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿ ಆಸ್ಟ್ರೇಲಿಯಾ ಜೋಶ್ ಹ್ಯಾಝಲ್​ವುಡ್ ಹಿಂದೆ ಸರಿದಿದ್ದರು.

ಇದೀಗ ಸಿಎಸ್​ಕೆ ತಂಡವು ಹ್ಯಾಝಲ್​ವುಡ್ ಸ್ಥಾನದಲ್ಲಿ ಮತ್ತೋರ್ವ ವಿದೇಶಿ ಆಟಗಾರರನ ಹುಡುಕಾಟದಲ್ಲಿದೆ. ಅದರಂತೆ ಈಗಾಗಲೇ ಸಿಎಸ್​ಕೆ ಫ್ರಾಂಚೈಸಿ ಇಬ್ಬರು ವಿದೇಶಿ ಬೌಲರುಗಳನ್ನು ಸಂಪರ್ಕಿಸಿದ್ದಾರೆ. ಆದರೆ ಈ ಇಬ್ಬರೂ ಕೂಡ ಸಿಎಸ್​ಕೆ ನೀಡಿದ ಆಫರ್​ನ್ನು ನಿರಾಕರಿಸಿದ್ದಾರೆ. ಹೌದು, ಜೋಶ್​ ಹ್ಯಾಝಲ್​ವುಡ್​ಗೆ ಪರ್ಯಾಯವಾಗಿ ಸಿಎಸ್​ಕೆ ಮ್ಯಾನೇಜ್ಮೆಂಟ್​ ಆಸ್ಟ್ರೇಲಿಯಾದ ವೇಗಿ ಬಿಲ್ಲಿ ಸ್ಟ್ಯಾನ್​ಲೇಕ್​ನ್ನು ಸಂಪರ್ಕಿಸಿದೆ. ಆದರೆ ಈ ಆಫರ್​ ಅನ್ನು ಆಸೀಸ್ ವೇಗಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಇದರ ಬೆನ್ನಲ್ಲೇ ಇತ್ತೀಚೆಗೆ ಭಾರತದ ವಿರುದ್ಧ ಆಡಿದ್ದ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿಯನ್ನು ಸಿಎಸ್​ಕೆ ಸಂಪರ್ಕಿಸಿದೆ. ಚೊಚ್ಚಲ ಐಪಿಎಲ್ ಆಡುವ ಅವಕಾಶ ದೊರೆತರೂ ಈ ಆಫರ್​ನ್ನು ರೀಸ್ ಟೋಪ್ಲಿ ಕೂಡ ನಿರಾಕರಿಸಿದ್ದಾರೆ. ಈ ಇಬ್ಬರು ವೇಗಿಗಳು ಐಪಿಎಲ್​ ಅವಕಾಶವನ್ನು ತಿರಸ್ಕರಿಸಲು ಮುಖ್ಯ ಕಾರಣ ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಎನ್ನಲಾಗಿದೆ. ಹೀಗಾಗಿ ಐಪಿಎಲ್ ಚಾನ್ಸ್​ ಸಿಕ್ಕರೂ ಅದನ್ನು ತಿರಸ್ಕರಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯವನ್ನು ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಸಿಎಸ್​ಕೆ ಯಾವ ವೇಗಿಯನ್ನು ತಂಡಕ್ಕೆ ಕರೆ ತರಲಿದ್ದಾರೆ ಕಾದು ನೋಡಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್, ಸ್ಯಾಮ್ ಕರನ್.
Published by: zahir
First published: April 4, 2021, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories