HOME » NEWS » Sports » CRICKET IPL 2021 BIG RELIEF FOR MUMBAI INDIANS ZP

IPL 2021: ಕೊರೋನಾ ಆತಂಕದಿಂದ ಮುಂಬೈ ಇಂಡಿಯನ್ಸ್ ನಿರಾಳ..!

ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್.

news18-kannada
Updated:April 7, 2021, 10:06 PM IST
IPL 2021: ಕೊರೋನಾ ಆತಂಕದಿಂದ ಮುಂಬೈ ಇಂಡಿಯನ್ಸ್ ನಿರಾಳ..!
Mumbai Indians
  • Share this:
ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮೊದಲ ಪಂದ್ಯ ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ ತಂಡದ ಸ್ಕೌಟ್ ಮತ್ತು ವಿಕೆಟ್‌ಕೀಪಿಂಗ್ ಸಲಹೆಗಾರನಾಗಿರುವ ಕಿರಣ್ ಮೋರೆ ಅವರಿಗೆ ಕೊರೋನಾ ಸೋಂಕು ಬಾಧಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಏಕೆಂದರೆ ಮೋರೆ ತಂಡದ ಆಟಗಾರರೊಂದಿಗೆ ನೇರ ಸಂಪರ್ಕದಲ್ಲಿದ್ದರು.

ಕಿರಣ್ ಮೋರೆ ಅವರು ಕೊರೋನಾ ಪಾಸಿಟಿವ್ ಎಂಬ ಸುದ್ದಿ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ ತಮ್ಮ ಅಭ್ಯಾಸವನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ ಎಲ್ಲಾ ಆಟಗಾರರನ್ನು ಕೊರೋನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಇದೀಗ ಮುಂಬೈ ಆಟಗಾರರ ಕೋವಿಡ್ ರಿಸಲ್ಟ್ ಹೊರಬಂದಿದ್ದು, ಎಲ್ಲರೂ ಸೇಫ್ ಆಗಿದ್ದಾರೆ. ಅಂದರೆ ಕಿರಣ್ ಮೋರೆ ಅವರೊಂದಿಗೆ ಸಂಪರ್ಕದಲ್ಲಿ ಯಾವೊಬ್ಬ ಆಟಗಾರರಲ್ಲೂ ಸೋಂಕಿನ ಲಕ್ಷಣಗಳಾಗಲಿ ಅಥವಾ ಕೋವಿಡ್ ಪಾಸಿಟಿವ್ ಕಂಡು ಬಂದಿಲ್ಲ. ಇದರೊಂದಿಗೆ ಮುಂಬೈ ಫ್ರಾಂಚೈಸಿಗಿದ್ದ ಆತಂಕ ದೂರವಾಗಿದೆ. ಅಲ್ಲದೆ ಮೊದಲ ಪಂದ್ಯದಲ್ಲಿ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ.

ಸದ್ಯ ಆಟಗಾರರು ಹಾಗೂ ತಂಡದ ಕೋಚಿಂಗ್ ಸಿಬ್ಬಂದಿ ಸೇರಿ ಒಟ್ಟು 5 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಕೆಕೆಆರ್​ ತಂಡದ ನಿತೀಶ್ ರಾಣಾ ಹಾಗೂ ಆರ್​ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಚೇತರಿಸಿಕೊಂಡಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್, ಆರ್​ಸಿಬಿಯ ಡೇನಿಯಲ್ ಸ್ಯಾಮ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ಕೀಪಿಂಗ್ ಕೋಚ್ ಕಿರಣ್ ಮೋರೆ ಐಸೊಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ಏಪ್ರಿಲ್ 9 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲಿ ನಾಯಕನಾಗಿ ಹಿಟ್​ಮ್ಯಾನ್ ಗೆಲ್ಲಲಿದ್ದಾರಾ ಅಥವಾ ಕಿಂಗ್ ಕೊಹ್ಲಿ ವಿಜಯ ಸಾಧಿಸಲಿದ್ದಾರಾ ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ ತಂಡ ಹೀಗಿದೆ: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅಂಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್ ತಿವಾರಿ, ಟ್ರೆಂಟ್ ಬೌಲ್ಟ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶನ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡೂಲ್ಕರ್

ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಫಿನ್ ಅಲೆನ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ಆಡಂ ಝಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ ವೆಲ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.
Published by: zahir
First published: April 7, 2021, 10:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories