HOME » NEWS » Sports » CRICKET IPL 2021 BCCI VICE PRESIDENT RAJEEV SHUKLA CONFIRMS LEAGUES SUSPENSION FOR THIS SEASON LG

IPL 2021: ಕೊರೋನಾ ಭೀತಿಯಿಂದ ಐಪಿಎಲ್​ ಪಂದ್ಯಾವಳಿ ಮುಂದೂಡಿದ ಬಿಸಿಸಿಐ

ನಿನ್ನೆ ಕೂಡ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಕೋಲ್ಕತ್ತಾ ತಂಡ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಈ ಪಂದ್ಯವನ್ನೂ ಮುಂದೂಡಲಾಗಿತ್ತು.

news18-kannada
Updated:May 4, 2021, 3:48 PM IST
IPL 2021: ಕೊರೋನಾ ಭೀತಿಯಿಂದ ಐಪಿಎಲ್​ ಪಂದ್ಯಾವಳಿ ಮುಂದೂಡಿದ ಬಿಸಿಸಿಐ
ಐಪಿಎಲ್​
  • Share this:
ನವದೆಹಲಿ(ಮೇ 04): ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹಾಗೂ  ಐಪಿಎಲ್​​ನ ಹಲವು​ ಆಟಗಾರರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆ, ಈ ಬಾರಿಯ ಐಪಿಎಲ್​ ಪಂದ್ಯಾವಳಿಯನ್ನು ಬಿಸಿಸಿಐ ಸದ್ಯದ ಮಟ್ಟಿಗೆ ಮುಂದೂಡಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಸನ್​ರೈಸರ್ಸ್​ ಹೈದ್ರಾಬಾದ್​ (SRH)​ ತಂಡದ ವೃದ್ಧಿಮಾನ್ ಸಹಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ನ​​ ಅಮಿತ್​ ಮಿಶ್ರಾಗೆ ಕೊರೋನಾ ಪಾಸಿಟಿವ್​ ದೃಢಪಟ್ಟಿರುವುದರಿಂದ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಈವರೆಗೆ ಒಟ್ಟು ನಾಲ್ವರು ಆಟಗಾರರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಐಪಿಎಲ್​  14 ನೇ ಆವೃತ್ತಿ ಪಂದ್ಯಾಟವನ್ನು ಮುಂದೂಡಿಕೆ ಮಾಡಲಾಗಿದೆ. ಮುಂದಿನ ಆದೇಶದರವರೆಗೆ ಐಪಿಎಲ್​ ಪಂದ್ಯಾವಳಿಯನ್ನು ಮುಂದೂಡಿ ಬಿಸಿಸಿಐ ಆದೇಶಿಸಿದೆ.


Mamata Banerjee: ಗೆಲುವಿನ ಬಳಿಕ ಮಮತಾ ಬ್ಯಾನರ್ಜಿಯ 1980ರ ದಶಕದ ಫೋಟೋ ವೈರಲ್‌...!

ಕಳೆದ 48 ಗಂಟೆಯಲ್ಲಿ ನಾಲ್ವರು ಆಟಗಾರರು ಮತ್ತು ಟೂರ್ನಮೆಂಟ್​ನಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್​ ದೃಢಪಟ್ಟಿದೆ. ಹೀಗಾಗಿ ಮಂಗಳವಾರ ಬಿಸಿಸಿಐ ಈ 14ನೇ ಆವೃತ್ತಿಯ ಐಪಿಎಲ್​ ಪಂದ್ಯಾಟವನ್ನು ಸದ್ಯದ ಮಟ್ಟಿಗೆ ರದ್ದು ಮಾಡಿದೆ. ಆದರೆ, ಈ ಬಾರಿಯ ಟೂರ್ನಿ ಸಂಪೂರ್ಣ ರದ್ದಾಗಿಲ್ಲ. ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ ಎಂದು ಬಿಸಿಸಿಐ ಹೇಳಿದೆ. ಈ ಬಾರಿಯ ಐಪಿಎಲ್​ನಲ್ಲಿ 60 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಲಾಗಿತ್ತು.

ವೃದ್ಧಿಮಾನ್ ಸಹಾ ಮತ್ತು ಅಮಿತ್ ಮಿಶ್ರಾಗೆ ಕೊರೋನಾ ಪಾಸಿಟಿವ್​ ಬಂದ ಬಳಿಕ, ಬಿಸಿಸಿಐ ಇಡಿ ಟೂರ್ನಮೆಂಟ್​​ನ್ನು ಮುಂಬೈಗೆ ಶಿಫ್ಟ್​​ ಮಾಡಲು ನಿರ್ಧರಿಸಿತ್ತು. ಆದರೆ  ಇಂದು ಬಿಸಿಸಿಐ ಅನಿರ್ದಿಷ್ಟಾವಧಿಗೆ ಪಂದ್ಯಾವಳಿ ಮುಂದೂಡಿದೆ.

ಇಂದು ಸನ್​ರೈಸರ್ಸ್​ ಹೈದ್ರಾಬಾದ್(SRH) ಮತ್ತು ಮುಂಬೈ ಇಂಡಿಯನ್ಸ್​(MI) ನಡುವೆ ನವದೆಹಲಿಯಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಪಂದ್ಯಕ್ಕೂ ಮುನ್ನ ಬಿಸಿಸಿಐ ಐಪಿಎಲ್​ ಪಂದ್ಯವನ್ನು ಮುಂದೂಡಿದೆ. ಮೇ 2ರಂದು ಪಂಜಾಬ್​ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ ನಡುವೆ ನಡೆದ ಪಂದ್ಯವೇ ಕೊನೆಯ ಪಂದ್ಯವಾಗಿದೆ.

ನಿನ್ನೆ ಕೂಡ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಕೋಲ್ಕತ್ತಾ ತಂಡ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಈ ಪಂದ್ಯವನ್ನೂ ಮುಂದೂಡಲಾಗಿತ್ತು.
Published by: Latha CG
First published: May 4, 2021, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories