LIVE NOW

IPL 2021 Auction Live – ಐಪಿಎಲ್ ಹರಾಜು: ಮುಂಬೈ ಇಂಡಿಯನ್ಸ್​ಗೆ ಅರ್ಜುನ್ ತೆಂಡೂಲ್ಕರ್

ಮಧ್ಯಾಹ್ನ 3ಗಂಟೆಗೆ ಐಪಿಎಲ್ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಐದರಿಂದ ಆರು ಗಂಟೆಗಳಲ್ಲಿ ಕೊನೆಗೊಳ್ಳುವ ನಿರೀಕ್ಷೆ ಇದೆ. ನ್ಯೂಸ್18 ಕನ್ನಡದ ಲೈವ್ ಬ್ಲಾಗ್​ನಲ್ಲೂ ಕ್ಷಣಕ್ಷಣದ ಮಾಹಿತಿ ಪಡೆಯಬಹುದು. ಈ ಬಾರಿಯ ಮಿನಿ ಹರಾಜಿನಲ್ಲಿ 61 ಆಟಗಾರರನ್ನ ತಂಡಗಳು ಖರೀದಿಸುವ ಅವಕಾಶ ಇದೆ. 290ಕ್ಕೂ ಹೆಚ್ಚು ಆಟಗಾರರು ಹರಾಜಿನ ಪಟ್ಟಿಯಲ್ಲಿದ್ದಾರೆ.

Kannada.news18.com | February 18, 2021, 8:15 PM IST
facebook Twitter Linkedin
Last Updated February 18, 2021
auto-refresh
ಏಪ್ರಿಲ್ ಎರಡನೇ ವಾರದಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಸೀಸನ್ ಟೂರ್ನಿಗಾಗಿ​ ಹರಾಜು (IPL 2021 Auction) ಪ್ರಕ್ರಿಯೆ ಇಂದು ನಡೆಯಲಿದೆ. ಈ ಬಾರಿ ಮಿನಿ ಹರಾಜು ನಡೆಯುವುದರಿಂದ ಬಿಡ್ಡಿಂಗ್ ಕಾರ್ಯಕ್ರಮವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಲಿದೆ. ಮಧ್ಯಾಹ್ನ 3ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಐದರಿಂದ ಆರು ಗಂಟೆಗಳಲ್ಲಿ ಕೊನೆಗೊಳ್ಳುವ ನಿರೀಕ್ಷೆ ಇದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ಗಳಲ್ಲಿ ಇದರ ನೇರ ಪ್ರಸಾರವಾಗಲಿದೆ. ನ್ಯೂಸ್18 ಕನ್ನಡದ ಲೈವ್ ಬ್ಲಾಗ್​ನಲ್ಲೂ ಕ್ಷಣಕ್ಷಣದ ಮಾಹಿತಿ ಪಡೆಯಬಹುದು. ಈ ಬಾರಿಯ ಮಿನಿ ಹರಾಜಿನಲ್ಲಿ 61 ಆಟಗಾರರನ್ನ ತಂಡಗಳು ಖರೀದಿಸುವ ಅವಕಾಶ ಇದೆ. 290ಕ್ಕೂ ಹೆಚ್ಚು ಆಟಗಾರರು ಹರಾಜಿನ ಪಟ್ಟಿಯಲ್ಲಿದ್ದಾರೆ. ಸದ್ಯ ಇರುವ ಐಪಿಎಲ್ ತಂಡಗಳ ಪೈಕಿ ಅತಿ ಹೆಚ್ಚು ಬಜೆಟ್ ಹೊಂದಿರುವುದು ಪಂಜಾಬ್ ಕಿಂಗ್ಸ್ ತಂಡ. ಈ ತಂಡ 9 ಆಟಗಾರರ ಖರೀದಿಗೆ 53 ಕೋಟಿ ರೂ ವ್ಯಯಿಸುವ ಅವಕಾಶ ಹೊಂದಿದೆ. ಹೀಗಾಗಿ, ಪಂಜಾಬಿ ರಾಜರು ದೊಡ್ಡ ಆಟಗಾರರ ಮೇಲೆ ಭಾರೀ ಬಿಡ್ ಮಾಡುವ ನಿರೀಕ್ಷೆ ಇದೆ. ಆರ್​ಸಿಬಿ ತಂಡದ ಪರ್ಸ್​ನಲ್ಲಿ 35.9 ಕೋಟಿ ರೂ ಬಾಕಿ ಇದ್ದು, 11 ಆಟಗಾರರನ್ನ ಖರೀದಿಸಬಹುದು. ರಾಜಸ್ಥಾನ್ ರಾಯಲ್ಸ್ ತಂಡದ ಬಳಿಯೂ 30 ಕೋಟಿಗಿಂತ ಹೆಚ್ಚು ಹಣ ಇದೆ. Read More
7:59 pm (IST)
6:15 pm (IST)
Load More