Karnataka Players in Auction – ಐಪಿಎಲ್ ಹರಾಜಿನಲ್ಲಿರುವ ಕರ್ನಾಟಕದ 8 ಕ್ರಿಕೆಟಿಗರು

ಕರುಣ್ ನಾಯರ್, ಕೆ ಗೌತಮ್, ಕಾರ್ಯಪ್ಪ ಸೇರಿದಂತೆ ಕರ್ನಾಟಕದ ಎಂಟು ಕ್ರಿಕೆಟಿಗರು ಈ ವರ್ಷದ ಐಪಿಎಲ್​ನ ಹರಾಜಿನ ಪಟ್ಟಿಯಲ್ಲಿದ್ದಾರೆ. ಇವರ ಪೈಕಿ ಯಾರು ಹೆಚ್ಚು ಬೆಲೆಗೆ ಸೇಲ್ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕೆ ಗೌತಮ್

ಕೆ ಗೌತಮ್

 • Share this:
  ಚೆನ್ನೈ(ಫೆ. 18): ಇವತ್ತಿನ ಐಪಿಎಲ್ ಮಿನಿ ಹರಾಜಿನಲ್ಲಿ 8 ಫ್ರಾಂಚೈಸಿಗಳು 61 ಆಟಗಾರರನ್ನ ಖರೀದಿಸುವ ಅವಕಾಶ ಹೊಂದಿದ್ದಾರೆ. ಹರಾಜಿನ ಪಟ್ಟಿಯಲ್ಲಿ 291 ಆಟಗಾರರಿದ್ದಾರೆ. ಇವರ ಪೈಕಿ ಕರ್ನಾಟಕದ ಎಂಟು ಕ್ರಿಕೆಟಿಗೂ ಇದ್ದಾರೆ. ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್ ಮೊದಲಾದ ಹಲವು ಪ್ರಮುಖ ಆಟಗಾರರನ್ನ ಆಯಾ ಐಪಿಎಲ್ ತಂಡಗಳು ರೀಟೈನ್ ಮಾಡಿಕೊಂಡಿವೆ. ಇವರನ್ನ ಬಿಟ್ಟು ಹರಾಜಿಗೆ ಬಂದಿರುವ ಎಂಟು ಕರ್ನಾಟಕ ಕ್ರಿಕೆಟಿಗರು ಪಟ್ಟಿಯಲ್ಲಿದ್ದಾರೆ. ಇವರ ಪೈಕಿ ಕರುಣ್ ನಾಯರ್ ಹೆಸರು ಪ್ರಮುಖವಾದುದು. ಅನಿರುದ್ಧ್ ಜೋಷಿ, ರೋಹನ್ ಕದಮ್, ಕೆ ಗೌತಮ್ ಹೆಸರು ಈ ಲಿಸ್ಟ್​ನಲ್ಲಿವೆ.

  2021ರ ಐಪಿಎಲ್ ಹರಾಜಿನ ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರರು: ಕರುಣ್ ನಾಯರ್, ಕೆ ಗೌತಮ್, ಕೆಸಿ ಕಾರ್ಯಪ್ಪ, ಜಗದೀಶ್ ಸುಚಿತ್, ರೋಹನ್ ಕದಂ, ರೋನಿತ್ ಮೋರೆ, ಅಭಿಮನ್ಯು ಮಿಥುನ್, ಅನಿರುದ್ಧ ಜೋಷಿ.

  ಇದನ್ನೂ ಓದಿ: IPL 2021 auction: ಐಪಿಎಲ್​ ಹರಾಜು ಪಟ್ಟಿಯಲ್ಲಿರುವ 292 ಆಟಗಾರರ ಹೆಸರು ಇಲ್ಲಿದೆ

  ಇವರ ಪೈಕಿ ಕೃಷ್ಣಪ್ಪ ಗೌತಮ್ ಅವರಿಗೆ ಒಳ್ಳೆಯ ಬೆಲೆ ಕುದುರವ ಸಾಧ್ಯತೆ ಇದೆ. ಇವರು ಆಲ್​ರೌಂಡರ್ ಆಗಿರುವುದು ಅವರಿಗೆ advantage ಆಗಿದೆ. ಕರುಣ್ ನಾಯರ್ ಕೂಡ ಸೇಲ್ ಆಗುವ ದಟ್ಟ ಸಾಧ್ಯತೆ ಇದೆ. ಜಗದೀಶ್ ಸುಚಿತ್ ಮತ್ತು ಕಾರ್ಯಪ್ಪ ಈಗಾಗಲೇ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ. ಅನಿರುದ್ಧ್ ಜೋಷಿ ಈ ಬಾರಿಯ ಸಯದ್ ಮುಷ್ತಾಕ್ ಅಲಿ ಟೂರ್ನಿಯ ಕೆಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇವರೂ ಮಾರಾಟವಾಗಬಹುದು. ರೋಹನ್ ಕದಂ ಉತ್ತಮ ಬ್ಯಾಟ್ಸ್​ಮನ್ ಆಗಿದ್ದಾರೆ. ರೋನಿತ್ ಮೋರೆ ಮತ್ತು ಅಭಿಮನ್ಯು ಮಿಥುನ್ ಅನುಭವಿ ಬೌಲರ್​ಗಳೆನಿಸಿದ್ದಾರೆ. ಇವರೆಲ್ಲರೂ ಮಾರಾಟವಾಗುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
  Published by:Vijayasarthy SN
  First published: