IPL Auction - ಹೆಚ್ಚು ಜನಪ್ರಿಯವಲ್ಲದ ಈ 5 ಭಾರತೀಯ ಆಟಗಾರರಿಗೆ ಇದೆ ಭಾರೀ ಡಿಮ್ಯಾಂಡ್

ಇತ್ತೀಚೆಗೆ ನಡೆದ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅನೇಕ ಯುವ ಪ್ರತಿಭೆಗಳು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅಂಥ ಕೆಲ ಆಟಗಾರರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗುವ ದಟ್ಟ ಸಾಧ್ಯತೆ ಇದೆ.

ಸಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬರೋಡಾ ತಂಡದ ಆಟಗಾರರು

ಸಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬರೋಡಾ ತಂಡದ ಆಟಗಾರರು

 • Share this:
  ಚೆನ್ನೈ(ಫೆ. 18): ಐಪಿಎಲ್​ನಲ್ಲಿ ಬಿಗ್ ಪ್ಲೇಯರ್ಸ್ ಜೊತೆ ಸಣ್ಣಪುಟ್ಟ ಆಟಗಾರರಿಗೆ ಒಳ್ಳೆಯ ಬೇಡಿಕೆ ಇದ್ದೇ ಇರುತ್ತದೆ. ಸ್ಥಳೀಯ ಟೂರ್ನಮೆಂಟ್​ಗಳಲ್ಲಿ ಮಿಂಚಿ ಸೈ ಎನಿಸಿರುವ ಈ ಆಟಗಾರರು ಯಾವುದೇ ತಂಡಕ್ಕಾದೂ ಮೌಲ್ಯ ಒದಿಸಬಲ್ಲರು. ಕಡಿಮೆ ಬೆಲೆಗೆ ಉಪಯುಕ್ತ ಆಟಗಾರರನ್ನ ಸೇರಿಸಿಕೊಂಡು ಬ್ಯಾಲೆನ್ಸ್ ಮಾಡುವ ಅವಕಾಶ ಫ್ರಾಂಚೈಸಿಗಳಿಗೆ ಇದ್ದೇ ಇರುತ್ತದೆ. ಇತ್ತೀಚೆಗೆ ನಡೆದ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅನೇಕ ಎಳೆ ಪ್ರತಿಭೆಗಳು ಮಿಂಚಿವೆ. ಐಪಿಎಲ್​ನ ಫ್ರಾಂಚೈಸಿಗಳು ಬಹಳ ಎಚ್ಚರಿಕೆಯಿಂದ ಈ ಟೂರ್ನಿಯನ್ನ ವೀಕ್ಷಿಸಿದ್ದಾರೆ. ತಮ್ಮ ತಂಡಕ್ಕೆ ಯಾರೆಲ್ಲಾ ಉಪಯುಕ್ತ ಎನಿಸಬಹುದು ಅಂಥ ಆಟಗಾರರನ್ನ ಹರಾಜಿನ ವೇಳೆ ಖರೀದಿಸಲು ಗಣನೆಗೆ ತೆಗೆದುಕೊಂಡಿವೆ. ಇಂಥ ಅನೇಕ ಉದಯೋನ್ಮುಖ ಆಟಗಾರರು ಈ ಬಾರಿಯ ಐಪಿಎಲ್ ಹರಾಜಿನ ಲಿಸ್ಟ್​ನಲ್ಲಿದ್ದಾರೆ. ಇಂಥ ಐದು ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.

  1) ಮೊಹಮ್ಮದ್ ಅಜರುದ್ದೀನ್, ಕೇರಳ: ಕೇರಳದ ಈ ಯುವ ಪ್ರತಿಭೆ ಸಯದ್ ಮುಷ್ತಾಕ್ ಅಲಿ ಟೂರ್ನಿಯ ಒಂದೇ ಪಂದ್ಯದಲ್ಲಿ ಏಕಾಏಕಿ ದೇಶದ ಗಮನ ಸೆಳೆದರು. ಮುಂಬೈ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಇವರು ಕೇವಲ 54 ಎಸೆತದಲ್ಲಿ ಅಜೇಯ 137 ರನ್ ಚಚ್ಚಿದರು. ರನ್ ಚೇಸಿಂಗ್​ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಭಾರತೀಯ ಎಂಬ ದಾಖಲೆ ಬರೆದರು. ಇವರ ಸ್ಕೋರ್​ನಲ್ಲಿ 11 ಸಿಕ್ಸರ್, 9 ಬೌಂಡರಿ ಇವೆ. ಇವರ ಸ್ಫೋಟಕ ಆಟದಿಂದಾಗಿ ಮುಂಬೈ ಒಡ್ಡಿದ 197 ರನ್ ಗುರಿಯನ್ನ ಕೇರಳ ಇನ್ನೂ 25 ಎಸೆತ ಇರುವಂತೆಯೇ ಮೆಟ್ಟಿನಿಂತು ಗೆಲುವು ಸಾಧಿಸಿತು. ಮೊಹಮ್ಮದ್ ಅಜರುದ್ದೀನ್ ಇತರ ಕೆಲ ಪಂದ್ಯಗಳಲ್ಲೂ ಮಿಂಚಿನ ಆಟದ ಪ್ರದರ್ಶನ ನೀಡಿದ್ದಾರೆ.

  2) ಚೇತನ್ ಸಕಾರಿಯಾ, ಸೌರಾಷ್ಟ್ರ: ಎಡಗೈ ವೇಗದ ಬೌಲರ್ ಆಗಿರುವ ಚೇತನ್ ಸಕಾರಿಯಾ ಸಯದ್ ಮುಷ್ತಾಕ್ ಟ್ರೋಫಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. ವಿದರ್ಭಾ ವಿರುದ್ಧದ ಪಂದ್ಯದಲ್ಲಿ 11 ರನ್​ಗೆ 5 ವಿಕೆಟ್ ಕೂಡ ಕಬಳಿಸಿದ್ದಾರೆ. ಇವರ ಎಕನಾಮಿ ರೇಟ್ ಕೂಡ ಕಡಿಮೆ ಇದೆ. ಕ್ರಿಕೆಟ್​ನಲ್ಲಿ ಎಡಗೈ ವೇಗಿಗಳ ಸಂಖ್ಯೆ ಕಡಿಮೆ ಇರುವುದರಿಂದಲೂ ಚೇತನ್ ಸಕಾರಿಯಾಗೆ ಈ ಐಪಿಎಲ್​ನಲ್ಲಿ ಒಳ್ಳೆಯ ಬೇಡಿಕೆ ಇದೆ.

  ಇದನ್ನೂ ಓದಿ: IPL Auction - ಅತಿಹೆಚ್ಚು ಮೂಲಬೆಲೆಗೆ ಬಿಡ್ ಹಾಕಿದ್ದ ಈ ಇಂಗ್ಲೆಂಡ್ ಆಟಗಾರ ಐಪಿಎಲ್ ಹರಾಜಿನಿಂದ ವಾಪಸ್

  3) ಅವಿ ಬಾರೋಟ್, ಸೌರಾಷ್ಟ್ರ: SMAT ಟೂರ್ನಿಯಲ್ಲಿ ಗಮನ ಸೆಳೆದ ಬ್ಯಾಟ್ಸ್​ಮನ್​ಗಳಲ್ಲಿ ಅವಿ ಬಾರೋಟ್ ಪ್ರಮುಖರು. ಐದು ಪಂದ್ಯಗಳಲ್ಲಿ ಇವರು 283 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ ಬರೋಬ್ಬರಿ 185 ಇದೆ. ಗೋವಾ ವಿರುದ್ಧ 53 ಬಾಲ್​ನಲ್ಲಿ 122 ರನ್ ಹಾಗೂ ವಿದರ್ಭಾ ವಿರುದ್ಧ 54 ಬಾಲ್​ನಲ್ಲಿ 93 ರನ್ ಚಚ್ಚುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ವ್ಯಾಲ್ಯೂ ಅಡಿಶನ್ ಎಂಬಂತೆ ಇವರು ಕೆಲ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದಾರೆ.

  4) ವಿವೇಕ್ ಸಿಂಗ್, ಬಂಗಾಳ: SMAT ಟೂರ್ನಿಯಲ್ಲಿ ಬಂಗಾಳ ಹೆಚ್ಚು ಸಾಧನೆ ಮಾಡದಿದ್ದರೂ ಅದರ ಆಟಗಾರ ವಿವೇಕ್ ಸಿಂಗ್ ತಮ್ಮ ಬ್ಯಾಟಿಂಗ್ ಅಬ್ಬರದ ಮೂಲಕ ಗಮನ ಸೆಳೆದಿದ್ದಾರೆ. ಐದು ಪಂದ್ಯಗಳಲ್ಲಿ 69.33 ರನ್ ಸರಾಸರಿಯಲ್ಲಿ ಅವರು 208 ರನ್ ಗಳಿಸಿದ್ದಾರೆ. ಇದರಲ್ಲಿ ಜಾರ್ಖಂಡ್ ವಿರುದ್ಧ ಅವರು ಗಳಿಸಿದ ಒಂದು ಶತಕವೂ ಸೇರಿದೆ.

  5) ವೆಂಕಟೇಶ್ ಅಯ್ಯರ್, ಮಧ್ಯ ಪ್ರದೇಶ: ಶ್ರೇಯಸ್ ಅಯ್ಯರ್ ಅವರಂತೆ ವೆಂಕಟೇಶ್ ಅಯ್ಯರ್ ಕೂಡ ಬಿಡುಬೀಸಿನ ಆಟಗಾರ. ಐದು ಪಂದ್ಯಗಳಲ್ಲಿ ಇವರು 75 ರನ್ ಸರಾಸರಿಯಲ್ಲಿ 227 ರನ್ ಕಲೆಹಾಕಿದ್ದಾರೆ. ಸೌರಾಷ್ಟ್ರ ವಿರುದ್ಧ ಇವರು ಭಾರಿಸಿದ 88 ರನ್ ಸ್ಕೋರ್ ಬಹಳ ಜನರ ಗಮನ ಸೆಳೆದಿದೆ.
  Published by:Vijayasarthy SN
  First published: