HOME » NEWS » Sports » CRICKET IPL 2021 AUCTION 4 STAR PLAYERS NAME NOT ANNOUNCED DURING IPL 2021 AUCTION IN CHENNAI ZP

IPL 2021: ಈ ಆಟಗಾರರ ಹೆಸರನ್ನು ಐಪಿಎಲ್ ಹರಾಜಿನಲ್ಲಿ ಕೂಗಿರಲಿಲ್ಲ..!

ಅನುಭವಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಈಗಲೂ ಅಂತಾರಾಷ್ಟ್ರೀಯ ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲೂ 4 ತಂಡಗಳ ಪರ ಆಡಿದ್ದಾರೆ. 2019 ರ ಐಪಿಎಲ್‌ನಲ್ಲಿ ಸೌಥಿ ಆರ್‌ಸಿಬಿ ಪರ ಆಡಿದ್ದರು.

news18-kannada
Updated:February 26, 2021, 9:40 PM IST
IPL 2021: ಈ ಆಟಗಾರರ ಹೆಸರನ್ನು ಐಪಿಎಲ್ ಹರಾಜಿನಲ್ಲಿ ಕೂಗಿರಲಿಲ್ಲ..!
IPL 2021
  • Share this:
ಐಪಿಎಲ್ 2021 ಗಾಗಿ ಎಲ್ಲಾ ತಂಡಗಳು ಸಂಪೂರ್ಣವಾಗಿ ಸಜ್ಜಾಗಿವೆ. ಈ ವರ್ಷದ ಹರಾಜಿಗಾಗಿ ಒಟ್ಟು 1097 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದರಿಂದ 292 ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ಈ ಅಂತಿಮ ಪಟ್ಟಿಯಲ್ಲಿದ್ದ ಎಲ್ಲಾ ಆಟಗಾರರ ಹೆಸರನ್ನು ಹರಾಜಿನಲ್ಲಿ ಸೂಚಿಸಿರಲಿಲ್ಲ.

ಈ ಬಾರಿ 8 ಫ್ರಾಂಚೈಸಿಗಳು ಒಟ್ಟು 57 ಆಟಗಾರರನ್ನು ಮಾತ್ರ ಖರೀದಿಸಿದ್ದರು. ಇದರಿಂದ ಕೆಲ ಆಟಗಾರರು ಮಾರಾಟವಾಗದೆ ಉಳಿಯಬೇಕಾಯಿತು. ಆದರೆ, ಈ ಹರಾಜಿನ ಅಂತಿಮ ಪಟ್ಟಿಯಲ್ಲಿರುವ ಕೆಲವು ಪ್ರಮುಖ ಆಟಗಾರರ ಹೆಸರನ್ನು ಬಿಡ್ಡಿಂಗ್​ ವೇಳೆ ಕೂಗಿರಲಿಲ್ಲ. ಅದರಲ್ಲೂ 4 ಸ್ಟಾರ್​ ಆಟಗಾರರು ಹೆಸರನ್ನು ಹರಾಜಿನ ವೇಳೆ ಕೈಬಿಡಲಾಗಿತ್ತು. ಆ ನಾಲ್ಕು ಆಟಗಾರರ ವಿವರ ಇಲ್ಲಿದೆ.

ಶಾರ್ಫೆನ್ ರುದರ್​ರ್ಫೋರ್ಡ್: ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಶಾರ್ಫೆನ್ ರುದರ್‌ಫೋರ್ಡ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್​ 2019 ರಲ್ಲಿ 2 ಕೋಟಿ ರೂ. ನೀಡಿ ಖರೀದಿಸಿತ್ತು. ಅಲ್ಲದೆ 2019 ರಲ್ಲಿ ರುದರ್​ಫೊರ್ಡ್​ 7 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಐಪಿಎಲ್ 2020 ಕ್ಕಿಂತ ಮೊದಲು, ಮುಂಬೈ ತಂಡವು ರುದರ್​ಫೋರ್ಡ್ ರನ್ನು ಟ್ರೇಡ್ ಮಾಡಿತ್ತು. ಅಲ್ಲದೆ ಈ ವರ್ಷ ಬಿಡುಗಡೆ ಮಾಡಿದ್ದರು. ಆದರೆ ಅಂತಿಮ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದರೂ ರುದರ್​ಫೋರ್ಡ್​​ ಅವರ ಹೆಸರನ್ನು ಹರಾಜು ಕೂಗಿರಲಿಲ್ಲ.

ಮೊರ್ನೆ ಮೊರ್ಕೆಲ್: ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ 2009 ರಿಂದ 2016 ರವರೆಗೆ ಐಪಿಎಲ್ ಆಡಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದಾಗ್ಯೂ ಈ ಬಾರಿ ಕೂಡ ಮೊರ್ಕೆಲ್ ಹೆಸರು ಅಂತಿಮ ಪಟ್ಟಿಯಲ್ಲಿತ್ತು. ಆದರೆ ಹರಾಜಿನ ಸಮಯದಲ್ಲಿ ಅವರ ಹೆಸರನ್ನು ಘೋಷಿಸಲಾಗಿರಲಿಲ್ಲ.

ಟಿಮ್ ಸೌಥಿ: ಅನುಭವಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಈಗಲೂ ಅಂತಾರಾಷ್ಟ್ರೀಯ ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲೂ 4 ತಂಡಗಳ ಪರ ಆಡಿದ್ದಾರೆ. 2019 ರ ಐಪಿಎಲ್‌ನಲ್ಲಿ ಸೌಥಿ ಆರ್‌ಸಿಬಿ ಪರ ಆಡಿದ್ದರು. ಇದರ ಬಳಿಕ ಐಪಿಎಲ್​ನಲ್ಲಿ ಅವಕಾಶ ದೊರೆತಿರಲಿಲ್ಲ. ಈ ಹರಾಜಿನಲ್ಲಿ ಸೌಥಿ ಹೆಸರು 292 ಆಟಗಾರರ ಅಂತಿಮ ಪಟ್ಟಿಯಲ್ಲಿತ್ತು. ಆದರೆ ಬಿಡ್ಡಿಂಗ್ ವೇಳೆ ಅವರ ಹೆಸರನ್ನು ಕೂಗಿರಲಿಲ್ಲ.

ಮುಶ್ಫಿಕುರ್ ರಹೀಂ: ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮುಶ್ಫಿಕುರ್ ರಹೀಂ ಪ್ರತಿವರ್ಷ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಆದರೆ ಇದುವರೆಗೆ ಐಪಿಎಲ್​ ಆಡುವ ಅವಕಾಶ ದೊರೆತಿಲ್ಲ. ಹೀಗಾಗಿ ರಹೀಂ ಈ ಬಾರಿ ಹೆಸರು ನೋಂದಣಿ ಮಾಡಿಕೊಳ್ಳುವುದಿಲ್ಲ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಾಂಗ್ಲಾ ಕ್ರಿಕೆಟಿಗನಿಗೆ 292 ಆಟಗಾರರ ಪಟ್ಟಿಯಲ್ಲಿ ಸ್ಥಾನ ಲಭಿಸಿತ್ತು. ಆದರೆ, ಹರಾಜಿನ ಸಮಯದಲ್ಲಿ ರಹೀಂ ಹೆಸರನ್ನು ಹರಾಜು ಕೂಗಿರಲಿಲ್ಲ.
ಇನ್ನು ಹರಾಜಿನ ವೇಳೆ ಹೀಗೆ ಹೆಸರು ಕೈ ಬಿಡಲು ಒಂದು ಕಾರಣ ಸಮಯದ ಅಭಾವ. ಇನ್ನೊಂದು ಕಾರಣ ಫ್ರಾಂಚೈಸಿಗಳ ಬಳಿ ಇರುವ ಖರೀದಿ ಮೊತ್ತ. ಇನ್ನು ಫ್ರಾಂಚೈಸಿಗಳು ಕೂಡ ತಾವು ಖರೀದಿಸಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿರುತ್ತಾರೆ. ಈ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸಹ ಕೈ ಬಿಡಲಾಗುತ್ತದೆ.
Published by: zahir
First published: February 26, 2021, 9:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories