HOME » NEWS » Sports » CRICKET IPL 2021 AB DEVILLIERS PICK SMS DHONI OVER VIRAT KOHLI ROHIT SHARMA STG ZP

IPL ಇಲೆವೆನ್‌ ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್: ಎಂಎಸ್ ಧೋನಿ ತಂಡದ ನಾಯಕ

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಪಷ್ಟ ಆಯ್ಕೆಯಾಗಿದ್ದು, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸ್​​ ನಂತರದ ಸ್ಥಾನದಲ್ಲಿದ್ದಾರೆ. ನಂತರ ಆಲ್​​ರೌಂಡರ್​ಗಳಾಗಿ ರವೀಂದ್ರ ಜಡೇಜಾ ಮತ್ತು ಬೆನ್ ಸ್ಟೋಕ್ಸ್ ಆಯ್ಕೆಯಾಗಿದ್ದಾರೆ. ಜೊತೆಗೆ ನಾಯಕನಾಗಿ ಅವರು ಎಂ.ಎಸ್.ಧೋನಿಯವರನ್ನು ಆಯ್ಕೆ ಮಾಡಿಕೊಂಡರು.

news18-kannada
Updated:April 2, 2021, 9:55 PM IST
IPL ಇಲೆವೆನ್‌ ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್: ಎಂಎಸ್ ಧೋನಿ ತಂಡದ ನಾಯಕ
AB de Villiers
  • Share this:
ಬಹು ನಿರೀಕ್ಷಿತ ಐಪಿಎಲ್​ 2021 ರ ಆವೃತ್ತಿಗೆ ಈಗಾಗಲೇ ಕೌಂಟ್‌ಡೌನ್‌ ಶುರುವಾಗಿದೆ. ಏಪ್ರಿಲ್​ 9 ಕ್ಕೆ ಉದ್ಘಾಟನೆ ಪಂದ್ಯ ನಡೆಯಲಿದ್ದು, ಚೆನೈ ನ ಎಂ ಎ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈಗಾಗಲೇ ಒಂದಷ್ಟು ಆಟಗಾರರು ಹೋಟೆಲ್​ಗಳಲ್ಲಿ ಕ್ವಾರಂಟೈನ್​ ಅವಧಿಯಲ್ಲಿದ್ದರೆ, ಬಹುತೇಕ ಆಟಗಾರರೆಲ್ಲರೂ ತಮ್ಮ ತಂಡದೊಟ್ಟಿಗೆ ಪ್ರ್ಯಾಕ್ಟೀಸ್ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಆರ್​ ಸಿ ಬಿ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ಮೆಚ್ಚಿನ ಐಪಿಎಲ್ ಆಟಗಾರರನ್ನು ಹೆಸರಿಸಿದ್ದಾರೆ. ಕಳೆದ ಇಷ್ಟು ವರ್ಷಗಳಲ್ಲಿ ಐಪಿಎಲ್​ ತಂಡಗಳಲ್ಲಿ ಹಲವಾರು ಅತ್ಯುತ್ತಮ ಆಟಗಾರರಿದ್ದಾರೆ. ಈ ಆಟಗಾರರ ಪಟ್ಟಿಯಿಂದ ಐಪಿಎಲ್ ಇಲೆವೆನ್‌ಗೆ ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿದೆ. ಆದರೆ ಆರ್‌ಸಿಬಿಯ ಎಬಿ ಡಿವಿಲಿಯರ್ಸ್ ಈ ಕೆಲಸ ಮಾಡಿದ್ದಾರೆ. ಈ ಪಟ್ಟಿಯೂ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದ್ದು, ಹಲವಾರು ಪ್ರಶ್ನೇಗಳನ್ನು ಸಹ ಮೂಡಿಸಿದೆ. ಹಾಗಾದರೆ ಈ ಲಿಸ್ಟ್​ ನಲ್ಲಿ ಅಂಥದ್ದೇನಿದೆ ಅನ್ನೋದು ಇಲ್ಲಿದೆ.

" ಐಪಿಎಲ್ ಇಲೆವೆನ್ ಗೆ ನನ್ನನ್ನು ನಾನೇ ಆಯ್ಕೆ ಮಾಡಿ ನನ್ನನ್ನು ಸೇರಿಸಿಕೊಂಡರೆ ಎಷ್ಟು ಕೆಟ್ಟದಾಗಿ ಕಾಣುತ್ತದೆ ಎಂದು ಕಳೆದ ರಾತ್ರಿ ನಾನು ಯೋಚಿಸುತ್ತಿದ್ದೆ. ಆದ್ದರಿಂದ, ಬ್ಯಾಟಿಂಗ್ ಆರಂಭಿಸುವಾಗ, ದೆಹಲಿಯಲ್ಲಿ ನನ್ನೊಟ್ಟಿಗೆ ಪ್ರಾರಂಭಿಸಿದ ಯಾರನ್ನಾದರೂ ಒಬ್ಬರನ್ನು ಅಂದರೆ ಮೊದಲು ವೀರೇಂದ್ರ ಸೆಹ್ವಾಗ್ ಅವರನ್ನು ಆರಂಭಿಕ ಆಟಗಾರರಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ. ಕಳೆದ ಐದು ವರ್ಷಗಳಲ್ಲಿ ವಿಶ್ವದ ಕೆಲವು ಅತ್ಯುತ್ತಮ ಕ್ರಿಕೆಟ್ ಆಡಿರುವ ರೋಹಿತ್ ಶರ್ಮಾ​ ಅವರು 2ನೇ ಸ್ಥಾನದಲ್ಲಿರುತ್ತಾರೆ ಎಂದು Cricbuzz ವೆಬ್‌ಸೈಟ್‌ನಲ್ಲಿ ಡಿವಿಲಿಯರ್ಸ್​ ಉಲ್ಲೇಖಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಪಷ್ಟ ಆಯ್ಕೆಯಾಗಿದ್ದು, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸ್​​ ನಂತರದ ಸ್ಥಾನದಲ್ಲಿದ್ದಾರೆ. ನಂತರ ಆಲ್​​ರೌಂಡರ್​ಗಳಾಗಿ ರವೀಂದ್ರ ಜಡೇಜಾ ಮತ್ತು ಬೆನ್ ಸ್ಟೋಕ್ಸ್ ಆಯ್ಕೆಯಾಗಿದ್ದಾರೆ. ಜೊತೆಗೆ ನಾಯಕನಾಗಿ ಅವರು ಎಂ.ಎಸ್.ಧೋನಿಯವರನ್ನು ಆಯ್ಕೆ ಮಾಡಿಕೊಂಡರು.

''3 ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಪಷ್ಟ ಆಯ್ಕೆ. ನಂತರ 4ನೇ ಸ್ಥಾನಕ್ಕೆ ಕೇನ್ ವಿಲಿಯಮ್ಸನ್, ಅಥವಾ ಸ್ಮಿತ್ ಅಥವಾ ನಾನೇ ಇರುತ್ತೇನೆ... ಈ ಎರಡು ರೀಪ್ಲೇಸ್‌ಮೆಂಟ್‌ಗಳಾಗಿವೆ.. 5 ನೇ ಸ್ಥಾನದಲ್ಲಿ ಬೆನ್ ಸ್ಟೋಕ್ಸ್, ಕ್ಯಾಪ್ಟನ್ ಆಗಿ ಆರರಲ್ಲಿ ಎಂಎಸ್ ಧೋನಿ, ಮತ್ತು 7 ನೇ ಸ್ಥಾನದಲ್ಲಿ ಜಡೇಜಾ ಅವರಿದ್ದಾರೆ. 8 ರಲ್ಲಿ ರಶೀದ್ ಖಾನ್, 9 ನೇ ಸ್ಥಾನದಲ್ಲಿ ಭುವನೇಶ್ವರ್‌, 10 ರಲ್ಲಿ ಕಗಿಸೊ ರಬಾಡ, ಮತ್ತು 11 ನೇ ಸ್ಥಾನದಲ್ಲಿ ಬುಮ್ರಾ ಇದ್ದಾರೆ ಎಂದು ಅವರು ಹೇಳಿದರು.

ಸುರೇಶ್ ರೈನಾ ಮತ್ತು ಲಸಿತ್ ಮಾಲಿಂಗ ಅವರ ಹೆಸರು ಈ ಪಟ್ಟಿಯಲ್ಲಿ ಮಿಸ್​ ಆಗಿರೋದು ಕ್ರಿಕೆಟ್ ಪ್ರಿಯರಿಗೆ ಆಶ್ಚರ್ಯವೆನಿಸಿದೆ.

ಡಿವಿಲಿಯರ್ಸ್​ ಆಯ್ಕೆ ಮಾಡಿದ ಐಪಿಎಲ್ ಇಲೆವೆನ್ ಪಟ್ಟಿ ಇಲ್ಲಿದೆ..
ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ / ಸ್ಟೀವ್ ಸ್ಮಿತ್ / ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಎಂ.ಎಸ್​ ಧೋನಿ (ನಾಯಕ), ರವೀಂದ್ರ ಜಡೇಜಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕಗಿಸೊ ರಬಾಡ, ಜಸ್ಪ್ರೀತ್ ಬುಮ್ರಾ.

ಎಬಿ ಡಿವಿಲಿಯರ್ಸ್​ ದಕ್ಷಿಣ ಆಫ್ರಿಕಾದ ಆಟಗಾರರಾಗಿದ್ದು, ಏಕದಿನ ಮತ್ತು ಟ್ವೆಂಟಿ 20ಯ ನಾಯಕರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಮೊದಲು ಡೆಲ್ಲಿ ಡೇರ್​ ಡೆವಿಲ್ಸ್​ ಪರವಾಗಿ ಆಡಿದ್ದರು. ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಸೇರಿದರು.
First published: April 2, 2021, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories