HOME » NEWS » Sports » CRICKET IPL 2021 AAKASH CHOPRA FEELS RCB WILL NOT QUALIFY FOR THE PLAYOFFS ZP

IPL 2021: ಈ ಸಲ RCB ಪ್ಲೇ ಆಫ್​ ಪ್ರವೇಶಿಸಲ್ಲ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಕಳೆದ ಮೂರು-ನಾಲ್ಕು ಸೀಸನ್​ಗಳಲ್ಲಿ ಆರ್​ಸಿಬಿ ಅತ್ಯುತ್ತಮ ತಂಡವಾಗಿಯೇ ಗುರುತಿಸಿಕೊಂಡಿತ್ತು. ಆದರೆ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿತ್ತು. ಅದು ಈ ಸಲ ಕೂಡ ಪುನರಾರ್ವತನೆ ಆಗಲಿದೆ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ.

news18-kannada
Updated:April 5, 2021, 9:32 PM IST
IPL 2021: ಈ ಸಲ RCB ಪ್ಲೇ ಆಫ್​ ಪ್ರವೇಶಿಸಲ್ಲ: ಮಾಜಿ ಕ್ರಿಕೆಟಿಗನ ಭವಿಷ್ಯ..!
RCB
  • Share this:
ಐಪಿಎಲ್ ಸೀಸನ್ 14ಗೆ ಕೌಂಟ್ ಡೌನ್ ಶುರುವಾಗಿದೆ. ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಇತ್ತ ಎಲ್ಲಾ ತಂಡಗಳು ಗೆಲುವಿನ ಲೆಕ್ಕಚಾರದಲ್ಲಿ ತೊಡಗಿಸಿಕೊಂಡಿದರೆ, ಅತ್ತ ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಹೀಗೆ ತಮ್ಮ ಅಭಿಪ್ರಾಯ ಮಂಡಿಸಿರುವ ಮಾಜಿ ಟೀಮ್ ಇಂಡಿಯಾ ಆಟಗಾರ ಆಕಾಶ್ ಚೋಪ್ರಾ, ಈ ಬಾರಿ ಆರ್​ಸಿಬಿ ಪ್ಲೇ ಆಫ್ ಪ್ರವೇಶಿಸಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸಲ ಕಪ್ ಗೆಲ್ಲುವುದಿರಲಿ, ಪ್ಲೇ ಆಫ್ ಪ್ರವೇಶಿಸುದು ಕೂಡ ಅಸಾಧ್ಯ. ಕಳೆದ ಬಾರಿ ಪ್ಲೇ ಆಫ್ ಪ್ರವೇಶಿಸಿದರೂ, ಅದನ್ನು ಈ ಬಾರಿ ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಕಳೆದ ಮೂರು-ನಾಲ್ಕು ಸೀಸನ್​ಗಳಲ್ಲಿ ಆರ್​ಸಿಬಿ ಅತ್ಯುತ್ತಮ ತಂಡವಾಗಿಯೇ ಗುರುತಿಸಿಕೊಂಡಿತ್ತು. ಆದರೆ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿತ್ತು. ಅದು ಈ ಸಲ ಕೂಡ ಪುನರಾರ್ವತನೆ ಆಗಲಿದೆ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ. ಆರ್​ಸಿಬಿ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗುತ್ತಿದೆ ಎಂದ ಆಕಾಶ್ ಚೋಪ್ರಾ, ಈ ತೊಂದರೆಗಳನ್ನು ಸರಿಪಡಿಸಿದಿದ್ದರೆ, ಈ ಬಾರಿ ಕೂಡ ಸಮಸ್ಯೆಗಳನ್ನು ಎದುರಿಸಲಿದೆ ಎಂದಿದ್ದಾರೆ.

ಇನ್ನು ಈ ಬಾರಿಯ ಆರೆಂಜ್ ಕ್ಯಾಪ್ ಕೊಹ್ಲಿಯ ಪಾಲಾಗಲಿದೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಕೊಹ್ಲಿ ಟಕ್ಕರ್ ಕೊಡುವ ಸ್ಪರ್ಧಿಗಳಾಗಿ ರಿಷಭ್ ಪಂತ್, ಕೆಎಲ್ ರಾಹುಲ್ ಹಾಗೂ ಡೇವಿಡ್ ವಾರ್ನರ್​ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಆರೆಂಜ್ ಕ್ಯಾಪ್ ಉಳಿಸಿಕೊಳ್ಳುವಲ್ಲಿ ಕೊಹ್ಲಿ ಯಶಸ್ವಿಯಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.



ಹಾಗೆಯೇ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಈ ಬಾರಿ ಉತ್ತಮ ಆರಂಭಿಕ ಜೋಡಿಯಾಗಿ ಮಿಂಚಲಿದ್ದಾರೆ. ಅದರೊಂದಿಗೆ ಆರ್​ಸಿಬಿ ಪರ ಯಜುವೇಂದ್ರ ಚಹಲ್ ಅತೀ ಹೆಚ್ಚು ವಿಕೆಟ್ ಪಡೆಯಲಿದ್ದಾರೆ ಎಂದು ಕೂಡ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
Published by: zahir
First published: April 5, 2021, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories