HOME » NEWS » Sports » CRICKET IPL 2021 9 CRICKETERS SET TO MISS IPL OPENING MATCHES ZP

IPL 2021: 9 ಆಟಗಾರರು ಮೊದಲ ಪಂದ್ಯಕ್ಕೆ ಅಲಭ್ಯ..!

ಏಪ್ರಿಲ್ 14 ರಂದು ನಡೆಯಲಿರುವ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಫಿನ್ ಅಲೆನ್ ಹಾಗೂ ಝಂಪಾ ಆರ್​​​ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಕೊರೋನಾ ರಿಪೋರ್ಟ್ ಎರಡು ಬಾರಿ ನೆಗೆಟಿವ್ ಬಂದರೆ ಮಾತ್ರ ಡೇನಿಯಲ್ ಸ್ಯಾಮ್ಸ್​ಗೆ ತಂಡವನ್ನು ಸೇರಿಕೊಳ್ಳುವ ಅವಕಾಶ ದೊರೆಯಲಿದೆ.

news18-kannada
Updated:April 9, 2021, 10:23 PM IST
IPL 2021: 9 ಆಟಗಾರರು ಮೊದಲ ಪಂದ್ಯಕ್ಕೆ ಅಲಭ್ಯ..!
Ipl 2021
  • Share this:
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಚಾಲನೆ ಸಿಕ್ಕಿದೆ. ಆದರೆ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೂವರು ಆಟಗಾರರು ಕಾಣಿಸಿಕೊಂಡಿರಲಿಲ್ಲ. ಹೌದು, ಕೊರೋನಾ ಸೋಂಕಿಗೆ ಒಳಗಾಗಿರುವ ಡೇನಿಯಲ್ ಸ್ಯಾಮ್ಸ್ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಲಾಗಿರಲಿಲ್ಲ. ಹಾಗೆಯೇ ಮದುವೆ ಕಾರಣದಿಂದ ಆ್ಯಡಂ ಝಂಪಾ ಕೂಡ ಮೊದಲ ಪಂದ್ಯಕ್ಕೆ ಲಭ್ಯರಿರಲಿಲ್ಲ. ಅದೇ ರೀತಿ ನ್ಯೂಜಿಲೆಂಡ್ ತಂಡದ ಆಟಗಾರ ಫಿನ್ ಅಲೆನ್​ ಕೂಡ ಮೊದಲ ಪಂದ್ಯದ ವೇಳೆ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಫಿನ್ ಅಲೆನ್ ಅವರು ಕ್ವಾರಂಟೈನ್​ನಲ್ಲಿದ್ದು, 2ನೇ ಪಂದ್ಯದ ವೇಳೆ ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹಾಗೆಯೇ ಆಡ್ಯಂ ಝಂಪಾ ಏಪ್ರಿಲ್ 12ರ ಬಳಿಕ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಇವರಲ್ಲದೆ ಇನ್ನೂ ಹಲವು ಆಟಗಾರರು ಮೊದಲ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕಗಿಸೋ ರಬಾಡ, ಅನ್ರಿಕ್ ನೋಕಿಯ ಮೊದಲ ಪಂದ್ಯವನ್ನು ಆಡುವುದಿಲ್ಲ. ದಕ್ಷಿಣ ಆಫ್ರಿಕಾದ ಈ ಇಬ್ಬರು ಆಟಗಾರರು ಕ್ವಾರಂಟೈನ್​ನಲ್ಲಿದ್ದು, ಹೀಗಾಗಿ ಏಪ್ರಿಲ್ 10 ರಂದು ನಡೆಯಲಿರುವ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಹಾಗೆಯೇ ಕೊರೋನಾ ಸೋಂಕಿಗೆ ಒಳಗಾಗಿರುವ ಅಕ್ಷರ್ ಪಟೇಲ್ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿರುವ ದಕ್ಷಿಣ ಆಫ್ರಿಕಾ ಲುಂಗಿ ಎನ್​ಗಿಡಿ ಕೂಡ ಕ್ವಾರಂಟೈನ್​ನಲ್ಲಿದ್ದಾರೆ. ಇವರು ಕೂಡ ಡೆಲ್ಲಿ ವಿರುದ್ಧದ ಮೊದಲ ಪಂದ್ಯ ಆಡಲಾಗುವುದಿಲ್ಲ. ಹಾಗೆಯೇ ಗಾಯಗೊಂಡು ಚಿಕಿತ್ಸೆ ಪಡೆದಿರುವ ರಾಜಸ್ಥಾನ್ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ ಕೂಡ ಕೆಲ ಪಂದ್ಯಗಳಿಗೆ ಲಭ್ಯರಿಲ್ಲ. ಅವರೊಂದಿಗೆ ಆರ್​ಆರ್ ತಂಡದ ಇನ್ನೋರ್ವ ವೇಗಿ ಮುಸ್ತಾಫಿಜುರ್ ರೆಹಮಾನ್ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಹಾಗೆಯೇ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರಾದ ಕ್ವಿಂಟನ್ ಡಿಕಾಕ್ ಹಾಗೂ ಆ್ಯಡಂ ಮಿಲ್ನೆ ಕಣಕ್ಕಿಳಿದಿರಲಿಲ್ಲ. ಇವರು ಕೂಡ ಕ್ವಾರಂಟೈನ್​ನಲ್ಲಿದ್ದು, ಹೀಗಾಗಿ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ.

ಇನ್ನು ಏಪ್ರಿಲ್ 14 ರಂದು ನಡೆಯಲಿರುವ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಫಿನ್ ಅಲೆನ್ ಹಾಗೂ ಝಂಪಾ ಆರ್​​​ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಕೊರೋನಾ ರಿಪೋರ್ಟ್ ಎರಡು ಬಾರಿ ನೆಗೆಟಿವ್ ಬಂದರೆ ಮಾತ್ರ ಡೇನಿಯಲ್ ಸ್ಯಾಮ್ಸ್​ಗೆ ತಂಡವನ್ನು ಸೇರಿಕೊಳ್ಳುವ ಅವಕಾಶ ದೊರೆಯಲಿದೆ.
Published by: zahir
First published: April 9, 2021, 10:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories