HOME » NEWS » Sports » CRICKET IPL 2021 50 AFTER FIVE YEARS FOR GLENN MAXWELL AGAINST SUNRISERS HYDERABAD ZP

Glenn Maxwell: ಬರೋಬ್ಬರಿ 5 ವರ್ಷಗಳ ಬಳಿಕ ಅಬ್ಬರಿಸಿದ ಮ್ಯಾಕ್ಸ್​ವೆಲ್..!

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್​ವೆಲ್ ಎಚ್ಚರಿಕೆ ಆಟವಾಡಿದ್ದು ವಿಶೇಷವಾಗಿತ್ತು. ಆರ್​ಸಿಬಿ ಮಧ್ಯಮ ಕ್ರಮಾಂಕದ ಬ್ಯಟ್ಸ್​ಮನ್​ಗಳು ವಿಫಲರಾದರೂ, ಮ್ಯಾಕ್ಸ್​ವೆಲ್ ಅಂತಿಮ ಓವರ್​ವರೆಗೂ ಬ್ಯಾಟ್ ಬೀಸಿದರು.

news18-kannada
Updated:April 15, 2021, 9:45 PM IST
Glenn Maxwell: ಬರೋಬ್ಬರಿ 5 ವರ್ಷಗಳ ಬಳಿಕ ಅಬ್ಬರಿಸಿದ ಮ್ಯಾಕ್ಸ್​ವೆಲ್..!
Glenn maxwell
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಆರ್​ಸಿಬಿ 6 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡದ ಬಹುತೇಕ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದರು. ಆದರೆ ಒಂದೆಡೆ ಬಂಡೆಯಂತೆ ನಿಂತು ಏಕಾಂಗಿ ಹೋರಾಟ ನಡೆಸಿದ ಗ್ಲೆನ್ ಮ್ಯಾಕ್ಸ್​ವೆಲ್ 41 ಎಸೆತಗಳಲ್ಲಿ 59 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಆರ್​ಸಿಬಿ ಸ್ಫರ್ಧಾತ್ಮಕ ಸವಾಲು ನೀಡಲು ಸಾಧ್ಯವಾಗಿತ್ತು.

ಮ್ಯಾಕ್ಸ್​ವೆಲ್ ಅವರ ಈ ಇನಿಂಗ್ಸ್ ಆರ್​ಸಿಬಿ ಗೆಲುವಿಗೆ ಮಾತ್ರವಲ್ಲ, ಅವರಿಗೂ ವೈಯುಕ್ತಿಕವಾಗಿ ತುಂಬಾ ವಿಶೇಷವಾದದ್ದು. ಏಕೆಂದರೆ ಐಪಿಎಲ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅರ್ಧಶತಕ ಬಾರಿಸಿ ಅರ್ಧ ದಶಕ ಕಳೆದಿದೆ ಎಂದರೆ ನಂಬಲೇಬೇಕು.

ಹೌದು, ಮ್ಯಾಕ್ಸ್​ವೆಲ್ ಕೊನೆಯ ಬಾರಿ ಅರ್ಧಶತಕ ಬಾರಿಸಿದ್ದು 2016 ರಲ್ಲಿ. ಆ ಬಳಿಕ 5 ವರ್ಷಗಳ ಕಾಲ ಐಪಿಎಲ್ ಆಡಿದರೂ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಇದೀಗ 40 ಇನಿಂಗ್ಸ್​​ಗಳ ಬಳಿಕ ಮ್ಯಾಕ್ಸಿ ಬ್ಯಾಟ್​ನಿಂದ ಹಾಫ್​ ಸೆಂಚುರಿ ಮೂಡಿ ಬಂದಿದೆ. ಅದು ಕೂಡ 5 ಫೋರ್ಸ್ ಹಾಗೂ 3 ಸಿಕ್ಸರ್​ನೊಂದಿಗೆ ಎಂಬುದು ವಿಶೇಷ.

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್​ವೆಲ್ ಎಚ್ಚರಿಕೆ ಆಟವಾಡಿದ್ದು ವಿಶೇಷವಾಗಿತ್ತು. ಆರ್​ಸಿಬಿ ಮಧ್ಯಮ ಕ್ರಮಾಂಕದ ಬ್ಯಟ್ಸ್​ಮನ್​ಗಳು ವಿಫಲರಾದರೂ, ಮ್ಯಾಕ್ಸ್​ವೆಲ್ ಅಂತಿಮ ಓವರ್​ವರೆಗೂ ಬ್ಯಾಟ್ ಬೀಸಿದರು. ಅಂತಿಮವಾಗಿ 59 ರನ್​ಗಳಿಸಿ ತಂಡದ ಮೊತ್ತವನ್ನು 149 ಕ್ಕೆ ತಂದು ನಿಲ್ಲಿಸಿದರು. ಅವರ ಈ ಜವಾಬ್ದಾರಿಯುತ ಆಟದ ಫಲವಾಗಿ ಆರ್​ಸಿಬಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ ರೋಚಕ ಗೆಲುವು ದಾಖಲಿಸಿತು.

ಒಟ್ಟಿನಲ್ಲಿ ಐದು ವರ್ಷಗಳ ಬಳಿಕ ಬಾರಿಸಿದ ಅರ್ಧಶತಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರಿಗಷ್ಟೇ ಅಲ್ಲದೆ, ಆರ್​ಸಿಬಿ ಅಭಿಮಾನಿಗಳ ಪಾಲಿಗೂ ಕೂಡ ವಿಶೇಷವಾಯಿತು.
Published by: zahir
First published: April 15, 2021, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories