IPL 2020: ಐಪಿಎಲ್​​ನಿಂದ ದೂರ ಸರಿದರೂ ಈ ಆಟಗಾರನ ದಾಖಲೆ ಮುರಿಯುವುದು ಕಷ್ಟಸಾಧ್ಯ!

2008 ರಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಐಪಿಎಲ್ ಆರಂಭಿಸಿದ ಯುವಿ ಕಳೆದ ವರ್ಷ ಮುಂಬೈ ಪರ ಅಂತಿಮ ಸೀಸನ್ ಆಡುವ ಮೂಲಕ ತಮ್ಮ ಓಟವನ್ನು ಅಂತ್ಯಗೊಳಿಸಿದರು.

news18-kannada
Updated:January 5, 2020, 5:37 PM IST
IPL 2020: ಐಪಿಎಲ್​​ನಿಂದ ದೂರ ಸರಿದರೂ ಈ ಆಟಗಾರನ ದಾಖಲೆ ಮುರಿಯುವುದು ಕಷ್ಟಸಾಧ್ಯ!
ಯುವರಾಜ್ ಸಿಂಗ್
  • Share this:
ಟೀಂ ಇಂಡಿಯಾದ 2007ರ ಐಸಿಸಿ ಟಿ-20 ವಿಶ್ವಕಪ್ ಹಾಗೂ 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್​​ ಹೀರೋ ಯುವರಾಜ್ ಸಿಂಗ್ ಇಂಡಿಯನ್ ಪ್ರೀಮಿಯಲ್ ಲೀಗ್​ನಿಂದ ಈಗಾಗಲೇ ಹಿಂದೆ ಸರಿದಿದ್ದಾರೆ.

ಕಿಂಗ್ಸ್​​ ಇಲೆವೆನ್ ಪಂಜಾಬ್, ಪುಣೆ ವಾರಿಯರ್ಸ್​​, ರಾಯಲ್ ಚಾಲೆಂಜರ್ಸ್​​ ಬೆಂಗಳೂರು, ಡೆಲ್ಲಿ ಡೇರ್ ಡೆವಿಲ್ಸ್​ ಮತ್ತು ಸನ್​ರೈಸರ್ಸ್​​ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್​​. ಹೀಗೆ 6 ಫ್ರಾಂಚೈಸಿಗಳಲ್ಲಿ ಆಡಿರುವ ಯುವಿ ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ಸರದಾರನೂ ಹೌದು. ಐಪಿಎಲ್​ನಿಂದ ಇವರು ದೂರು ಸರಿದರೂ ಇವರ ದಾಖಲೆಯನ್ನು ಪುಡಿ ಮಾಡುವುದು ಅಷ್ಟೊಂದು ಸುಲಭದ ವಿಚಾರವಲ್ಲ.

IND vs SL: ವರ್ಷದ ಮೊದಲ ಕದನಕ್ಕೆ ಟೀಂ ಇಂಡಿಯಾ ಸಜ್ಜು; ಮೈದಾನದಲ್ಲಿ ಕೊಹ್ಲಿ ಹುಡುಗರ ಭರ್ಜರಿ ಅಭ್ಯಾಸ!

ಒಂದು ಐಪಿಎಲ್​ ಸೀಸನ್​ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಟಗಾರ ಯುವರಾಜ್ ಸಿಂಗ್

ಯುವರಾಜ್ ಸಿಂಗ್ ಒಬ್ಬ ಪ್ರತಿಭಾವಂತ ಆಲ್ರೌಂಡರ್ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. 2009ರ ಐಪಿಎಲ್ ಸೀಸನ್​​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಯುವಿ ಆಡುತ್ತಿದ್ದರು. ಈವೇಳೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಯುವರಾಜ್ ರಾಬಿನ್ ಉತ್ತಪ್ಪ, ಜ್ಯಾಕ್ ಕ್ಯಾಲಿಸ್ ಹಾಗೂ ಮಾರ್ಕ್​​ ಬೋಚರ್​​ರನ್ನು ಔಟ್ ಮಾಡಿ ಮೊದಲ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದರು.

ಇನ್ನು ಇದೇ ಸೀಸನ್​​ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧದ ಪಂದ್ಯದಲ್ಲಿ ಯುವಿ ಅವರು ಗಿಬ್ಸ್​​​, ಆ್ಯಂಡ್ರೋ ಸೈಮಂಡ್ಸ್​​ ಮತ್ತು ವೇಣುಗೋಪಾಲ್ ರಾವ್ ವಿಕೆಟ್ ಪಡೆದು ಒಂದೇ ಸೀಸನ್​ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದರು.

ಐಪಿಎಲ್ ಇತಿಹಾಸದಲ್ಲೇ ಹರಾಜಾದ ದುಬಾರಿ ಆಟಗಾರ2008 ರಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಐಪಿಎಲ್ ಆರಂಭಿಸಿದ ಯುವಿ ಕಳೆದ ವರ್ಷ ಮುಂಬೈ ಪರ ಅಂತಿಮ ಸೀಸನ್ ಆಡುವ ಮೂಲಕ ತಮ್ಮ ಓಟವನ್ನು ಅಂತ್ಯಗೊಳಿಸಿದರು. ಯುವರಾಜ್ 14 ಕೋಟಿಗೆ ಹರಾಜಾಗಿದ್ದು ಭಾರತೀಯ ಆಟಗಾರನೊಬ್ಬ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್ ಆದವರಾಗಿದ್ದಾರೆ.

IND vs SL 1st T20: ಟೀಂ ಇಂಡಿಯಾದಲ್ಲಿ ನಡೆಯುತ್ತಾ ಅಚ್ಚರಿಯ ಬದಲಾವಣೆ?; ಇಲ್ಲಿದೆ ಸಂಭವನೀಯ ತಂಡ

4ನೇ ವಿಕೆಟ್​ಗೆ ಅತ್ಯಧಿಕ ರನ್ ಜೊತೆಯಾಟವಾಡಿದ ದಾಖಲೆ

ಆರ್​ಸಿಬಿ ಯುವರಾಜ್​​​ ಅವರನ್ನು 2014ರ ಐಪಿಎಲ್​ನಲ್ಲಿ ದಾಖಲೆಯೆ 14 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಈ ಸೀಸನ್​ನಲ್ಲಿ ಎಬಿಡಿ ವಿಲಿಯರ್ಸ್​​ ಜೊತೆಗೂಡಿ ಯುವರಾಜ್ ಸಿಂಗ್ ಹೊಸ ದಾಖಲೆ ಬರೆದರು. ಎಬಿಡಿ ಹಾಗೂ ಯುವಿ 132 ರನ್​ಗಳ ಕಾಣಿಕೆ ನೀಡಿ 4ನೇ ವಿಕೆಟ್​ಗೆ ಅತ್ಯಧಿಕ ರನ್ ಜೊತೆಯಾಟವಾಡಿದ ನಂಬರ್ ಜೋಡಿ ಎಂದೆನಿಸಿದರು. ರಾಜಸ್ತಾನ್ ರಾಯಲ್ಸ್​​ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ 40 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ಯುವರಾಜ್ ಹಾಗೂ ಎಬಿಡಿ ಜೊತೆಯಾಗಿ ತಂಡದ ಮೊತ್ತವನ್ನು 190ಕ್ಕೆ ತಂದಿಟ್ಟರು.

ಆಡಿದ 5 ತಂಡಗಳಲ್ಲೂ ಅರ್ಧಶತಕದ ಸಾಧನೆ

ಐಪಿಎಲ್ ಸೀಸನ್​​ನಲ್ಲಿ ಯುವರಾಜ್ ಕಿಂಗ್ಸ್​ ಇಲೆವೆನ್ ಪಂಜಾಬ್, ಆರ್​ಸಿಬಿ, ಪುಣೆ ವಾರಿಯರ್ಸ್​​, ಡೆಲ್ಲಿ ಡೇರ್ ಡೆವಿಲ್ಸ್​, ಮುಂಬೈ ಇಂಡಿಯನ್ಸ್​​ ಹಾಗೂ ಸನ್​ರೈಸರ್ಸ್​​ ಹೈದರಾಬಾದ್ ಹೀಗೆ ಒಟ್ಟು 6 ತಂಡಗಳಲ್ಲಿ ಆಡಿದ್ದಾರೆ. ಆಡಿದ 5 ತಂಡಗಳಲ್ಲಿ ಅರ್ಧಶತಕ ಸಿಡಿಸಿದ ಆಟಗಾರ ಎಂದರೆ ಅದು ಯುವರಾಜ್ ಸಿಂಗ್ ಮಾತ್ರ.

First published:January 5, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ