ಕ್ರೀಡೆ

  • associate partner

RCB: ಈವರೆಗೆ ಕ್ರಿಕೆಟ್ ಅನ್ನೇ ಆಡದ ಆಟಗಾರನನ್ನು ಖರೀದಿಸಲು ಮುಂದಾಗಿದೆ ಆರ್​ಸಿಬಿ?

IPL, RCB: ಬ್ಲೇಕ್‌ ಅವರು ಓಟದ ಜೊತೆಗೆ ಕ್ರಿಕೆಟ್​ನಲ್ಲೂ ಸಾಕಷ್ಟು ಒಲವು ಹೊಂದಿದ್ದಾರೆ. ಇವರು ಐಪಿಎಲ್​ಗೆ ಸೇರಿದ್ದೆ ಆದಲ್ಲಿ ಆರ್​ಸಿಬಿ ಖರೀದಿ ಮಾಡುತ್ತಾ ಎಂಬುವುದು ನೋಡಬೇಕಿದೆ.

Vinay Bhat | news18-kannada
Updated:December 8, 2019, 3:55 PM IST
RCB: ಈವರೆಗೆ ಕ್ರಿಕೆಟ್ ಅನ್ನೇ ಆಡದ ಆಟಗಾರನನ್ನು ಖರೀದಿಸಲು ಮುಂದಾಗಿದೆ ಆರ್​ಸಿಬಿ?
ಆರ್​ಸಿಬಿ ತಂಡ
  • Share this:
ಬೆಂಗಳೂರು (ಡಿ. 08): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕೆಲವು ತಿಂಗಳುಗಳಷ್ಟೆ ಬಾಕಿಯಿದೆ. ಈಗಾಗಲೇ ಡಿ. 19 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗೆ ಎಲ್ಲ ಫ್ರಾಂಚೈಸಿ ಸಿದ್ದತೆ ನಡೆಸುತ್ತಿದೆ. ಈವರೆಗೆ ಕಪ್ ಗೆಲ್ಲುವಲ್ಲಿ ವಿಫಲವಾದ ರಾಯಲ್ ಚಾಜೆಂಜರ್ಸ್​ ಬೆಂಗಳೂರು ಕೂಡ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ.

ಹೀಗಿರುವಾಗ ಈವರೆಗೆ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರೀಕೆಟ್ ಅನ್ನೇ ಆಡದ ಆಟಗಾರನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆರ್​ಸಿಬಿ ಮುಂದಾಗಿದೆಯಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣ ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಒಂದು ಟ್ವೀಟ್.

IPL 2020: Yohan Blake can get entry RCB team, but the franchise has a special condition
ಜಮೈಕಾದ ಓಟದ ದೊರೆ ಯೊಹಾನ್‌ ಬ್ಲೇಕ್‌


ಭಾರತಕ್ಕೆ ಸರಣಿ ಗೆಲುವಿನ ಗುರಿ; ವಿಂಡೀಸ್​ಗೆ ಗೆಲ್ಲ ಬೇಕಾದ ಒತ್ತಡ; ಅಗ್ರಸ್ಥಾನಕ್ಕೆ ಕೊಹ್ಲಿ-ರೋಹಿತ್ ಹೋರಾಟ!

ಕೆಲವು ದಿನಗಳ ಹಿಂದೆಯಷ್ಟೆ ಜಮೈಕಾದ ಓಟದ ದೊರೆ ಯೊಹಾನ್‌ ಬ್ಲೇಕ್‌ ನನಗೆ ಐಪಿಎಲ್​ನಲ್ಲಿ ಆಡುವ ಆಸೆಯಿದೆ ಎಂದು ಹೇಳಿದ್ದರು. ಭಾರತಕ್ಕೆ ಬಂದಿದ್ದ ಬ್ಲೇಕ್, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ-20 ಲೀಗ್ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಕ್ರಿಕೆಟ್ ವಿಚಾರವಾಗಿ ಮಾತನಾಡಿದ್ದರು.

"ವೆಸ್ಟ್​ ಇಂಡೀಸ್ ತಂಡದ ಪರ ಆಡಬೇಕೆಂಬ ಬಯಕೆ ನನಗಿಲ್ಲ. ಆದರೆ, ಐಪಿಎಲ್​ನಲ್ಲಿ ಆಡಬೇಕೆಂದು ತುಂಬಾ ಆಸೆಯಿದೆ. ಆರ್‌ಸಿಬಿ ಅಥವಾ ಕೆಕೆಆರ್‌ ತಂಡದ ಪರ ಆಡಬೇಕೆಂದಿರುವೆ. ನನಗೆ ಆರ್​ಸಿಬಿ ತಂಡ ತುಂಬಾಇಷ್ಟ. ಕ್ರಿಸ್ ಗೇಲ್ ಈ ತಂಡದಲ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ನನಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​ ನೆಚ್ಚಿನ ಆಟಗಾರರು" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

IND vs WI: ಇಂದು 2ನೇ ಟಿ-20 ಕದನ; ಟೀಂ ಇಂಡಿಯಾದಲ್ಲಿ ಇಂದು ಪ್ರಮುಖ ಬದಲಾವಣೆ ಸಾಧ್ಯತೆ!ಸದ್ಯ ಬ್ಲೇಕ್‌ ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಆರ್​ಸಿಬಿ, "ನೀವು ಆರ್​ಸಿಬಿ ತಂಡದ ಪರ ಆಡಲು ಬಯಸಿದ್ದೀರಿ ಎಂಬುವುದು ತಿಳಿಯಿತು. ನಿಮ್ಮ ವೇಗದಷ್ಟು ನೀವು ಬೌಲಿಂಗ್ ಕೂಡ ಮಾಡಬಲ್ಲರು ಎಂದಾದರೆ ನಮ್ಮ ತಂಡದಲ್ಲಿ ಖಾಯಂ ಸ್ಥಾನ ನೀಡುತ್ತೇವೆ" ಎಂದು ಹೇಳಿದೆ.

 ಬ್ಲೇಕ್‌ ಅವರು ಓಟದ ಜೊತೆಗೆ ಕ್ರಿಕೆಟ್​ನಲ್ಲೂ ಸಾಕಷ್ಟು ಒಲವು ಹೊಂದಿದ್ದಾರೆ. ಇವರು ಐಪಿಎಲ್​ಗೆ ಸೇರಿದ್ದೆ ಆದಲ್ಲಿ ಆರ್​ಸಿಬಿ ಖರೀದಿ ಮಾಡುತ್ತಾ ಎಂಬುವುದು ನೋಡಬೇಕಿದೆ.

ಕೊಹ್ಲಿಯನ್ನ ಕೆಣಕಬೇಡಿ ಎಂದರೂ ಕೇಳಲಿಲ್ಲ, ಈಗ ಅನುಭವಿಸಿ; ವಿಂಡೀಸ್​ಗೆ ಎಚ್ಚರಿಕೆ ನೀಡಿದ ಬಚ್ಚನ್

29 ವರ್ಷದ ಬ್ಲೇಕ್‌ ಅವರು ಒಲಿಂಪಿಕ್ಸ್​​ನಲ್ಲಿ 2 ಚಿನ್ನ, ವಿಶ್ವಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ ಹಾಗೂ ವಿಶ್ವ ರಿಲೇಯಲ್ಲಿ ಒಂದು ಚಿನ್ನ ಗೆದ್ದಿದ್ದಾರೆ. 100, 200, 400 ಮೀ. ಓಟ ಅವರ ಸ್ಪರ್ಧಾ ವಿಭಾಗ. ಇಡೀ ಜಗತ್ತು ಗಮನ ಸೆಳೆಯುವಂತೆ ಓಡಿದ ಇವರು ಸದ್ಯ ಬೇರೊಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಂತಿದೆ.

First published: December 8, 2019, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading