ಬೆಂಗಳೂರು (ಜ. 23): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿಯಿದೆ. ಈಗಾಗಲೇ ಅಭಿಮಾನಿಗಳಲ್ಲಿ ಐಪಿಎಲ್ ಫಿವರ್ ಶುರುವಾಗಿದೆ. ಎಲ್ಲ ಫ್ರಾಂಚೈಸಿ ಗೆಲ್ಲುವ ಯೋಜನೆ ಹಾಕಿಕೊಂಡು ತಯಾರಿಯಲ್ಲಿ ಬ್ಯುಸಿಯಾಗಿದೆ.
ಈ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ, ಬಾಲಿವುಡ್ ನಟ ಶಾರುಖ್ ಖಾನ್ ಅಭಿಮಾನೊಯೊಬ್ಬರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಭಾರೀ ಸುದ್ದಿಯಾಗುತ್ತಿದೆ. ವಿವೇಕ್ ಸುಭ್ರಮಣ್ಯಂ ಎಂಬ ಅಭಿಮಾನಿ ಶಾರುಖ್ ಅವರಿಗೆ ಟ್ವೀಟ್ ಮಾಡಿ. “ಕೆಕೆಆರ್ ಶುಭ್ಮನ್ ಗಿಲ್ ಅವರಿಗೆ ಯಾವಾಗ ನಾಯಕತ್ವ ನೀಡುತ್ತದೆ?” ಎಂದು ಕೇಳಿದ್ದಾರೆ.
ಇದಕ್ಕೆ ಮುಟ್ಟಿನೋಡುವಂತಹ ಉತ್ತರ ನೀಡಿರುವ ಕಿಂಗ್ ಖಾನ್, "ಕೆಕೆಆರ್ ನಿಮ್ಮನ್ನು ತಂಡದ ಹೆಡ್ ಕೋಚ್ ಮಾಡಿದ ಕೂಡಲೇ ಗಿಲ್ ಅವರನ್ನು ಕ್ಯಾಪ್ಟನ್ ಆಗಿ ಮಾಡಲಾಗುತ್ತದೆ" ಎಂದು ರಿಪ್ಲೇ ಮಾಡಿದ್ದಾರೆ. ಸದ್ಯ ಶಾರುಖ್ ನೀಡಿರುವ ಉತ್ತರ ಭಾರೀ ವೈರಲ್ ಆಗುತ್ತಿದೆ.
ವಾರ್ಷಿಕ ಗುತ್ತಿಗೆಯಲ್ಲಿ ಪುರುಷರಿಗೆ ಕೋಟಿ ಕೋಟಿ, ಮಹಿಳೆಯರಿಗೆ ಲಕ್ಷ; ಈ ಬಗ್ಗೆ ಸ್ಮೃತಿ ಮಂದಾನ ಏನು ಹೇಳಿದ್ರು?
As soon as KKR makes you the Head Coach my friend. https://t.co/1SSCwWLS8E
— Shah Rukh Khan (@iamsrk) January 22, 2020
#SavageReplies 😂@Bazmccullum #AskSRK pic.twitter.com/UeDgmSSgCq
— KolkataKnightRiders (@KKRiders) January 22, 2020
IND vs NZ: ಮೊದಲ ಟಿ-20 ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ನಲ್ಲಿ ಕೊಹ್ಲಿ ಪಡೆ ಸಖತ್ ಎಂಜಾಯ್!
ಈ ವರ್ಷವೂ ಕೆಕೆಆರ್ ತಂಡವನ್ನು ದಿನೇಶ್ ಕಾರ್ತಿಕ್ ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ತಂಡದ ಹೆಡ್ ಕೋಚ್ ಮೆಕಲಮ್ ಹೇಳಿದ್ದಾರೆ. ಅನುಭವಿ ನಾಯಕನ ಅಗತ್ಯ ತಂಡಕ್ಕಿದೆ ಎಂಬ ಕಾರಣಕ್ಕೆ ಕಾರ್ತಿಕ್ ಅವರೇ ಕೆಕೆಆರ್ ಕ್ಯಾಪ್ಟನ್ ಆಗಲಿದ್ದಾರೆ ಎಂದಿದ್ದರು.
ಕೋಲ್ಕತ್ತಾ ತಂಡ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ 15.50 ಕೋಟಿಗೆ ಆಸೀಸ್ ಬೌಲರ್ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ