ಕ್ರೀಡೆ

  • associate partner

IPL 2020: ಈ ಬಾರಿಯ ಐಪಿಎಲ್​ನಲ್ಲಿ ಹೊಸ ನಿಯಮ: ಏನಿದು ಬಯೋ ಸೆಕ್ಯೂರ್ ಬಬಲ್?, ಈ ಸ್ಟೋರಿ ಓದಿ

IPL 2020: ಕೊರೋನಾದಿಂದಾಗಿ ಈ ಬಾರಿ ಯುಎಇನಲ್ಲಿ ಐಪಿಎಲ್​ ಪಂದ್ಯ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡು ಸುರಕ್ಷಿತವಾಗಿ ಪಂದ್ಯವನ್ನು ಯಶಸ್ವಿಗೊಳಿಸಲು ಬಿಸಿಸಿಐ ಚಿಂತಿಸಿದೆ. ಕ್ರಿಕೆಟಿಗರಿಗೆ ಕೊರೋನಾ ಸೋಂಕು ಹರಡದಂತೆ ಐಪಿಎಲ್​ ಆಡಳಿತ ಮಂಡಳಿ ಬಯೋ ಸೆಕ್ಯೂರ್ ಬಬಲ್​ ನಿಯಮವನ್ನು ಜಾರಿಗೆತಂದಿದೆ. ಇದರ ಅನ್ವಯ ಐಪಿಎಲ್​ ಸರಿಯಾದ ಕ್ರಮದ ಮೂಲಕ ನಡೆಯಲಿದೆ. ಹಾಗಿದ್ದರೆ ಬಯೋ ಬಬಲ್​ ಎಂದರೇನು? ಏನೇನಿದೆ ನಿಯಮ.. ಈ ಬಗ್ಗೆ  ಮಾಹಿತಿ ಇಲ್ಲಿದೆ.

news18-kannada
Updated:August 10, 2020, 2:26 PM IST
IPL 2020: ಈ ಬಾರಿಯ ಐಪಿಎಲ್​ನಲ್ಲಿ ಹೊಸ ನಿಯಮ: ಏನಿದು ಬಯೋ ಸೆಕ್ಯೂರ್ ಬಬಲ್?, ಈ ಸ್ಟೋರಿ ಓದಿ
IPL 2020
  • Share this:
ಇಂಡಿಯನ್​ ಪ್ರಿಮಿಯರ್​ ಲೀಗ್​ (ಐಪಿಎಲ್​) ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕ್ರೀಡಾಭಿಮಾನಿಗಳಲ್ಲಿ ತಮ್ಮ ನೆಚ್ಚಿನ ತಂಡದ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವ ಉತ್ಸಾಹ ಮನೆ ಮಾಡಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಕುರಿತಾಗಿ ಮಾಹಿತಿಗಳು ಹರಿದಾಡುತ್ತಿದೆ. ಜನರು ತಮ್ಮ ನೆಚ್ಚಿನ ತಂಡಗಳ ಫೋಟೋ, ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಸೆಪ್ಟೆಂಬರ್​ 19 ರಂದು ಪ್ರಾರಂಭವಾಗುವ  ಐಪಿಎಲ್ ಪಂದ್ಯವನ್ನು ವೀಕ್ಷಿಸಲಿದ್ದಾರೆ ತುದಿಗಾಲಿನಲ್ಲಿ ಕೂತಿದ್ದಾರೆ.

ಅಂದಹಾಗೆಯೇ, ಕೊರೋನಾದಿಂದಾಗಿ ಈ ಬಾರಿ ಯುಎಇನಲ್ಲಿ ಐಪಿಎಲ್​ ಪಂದ್ಯ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡು ಸುರಕ್ಷಿತವಾಗಿ ಪಂದ್ಯವನ್ನು ಯಶಸ್ವಿಗೊಳಿಸಲು ಬಿಸಿಸಿಐ ಚಿಂತಿಸಿದೆ. ಕ್ರಿಕೆಟಿಗರಿಗೆ ಕೊರೋನಾ ಸೋಂಕು ಹರಡದಂತೆ ಐಪಿಎಲ್​ ಆಡಳಿತ ಮಂಡಳಿ ಬಯೋ ಸೆಕ್ಯೂರ್ ಬಬಲ್​ ನಿಯಮವನ್ನು ಜಾರಿಗೆತಂದಿದೆ. ಇದರ ಅನ್ವಯ ಐಪಿಎಲ್​ ಸರಿಯಾದ ಕ್ರಮದ ಮೂಲಕ ನಡೆಯಲಿದೆ. ಹಾಗಿದ್ದರೆ ಬಯೋ  ಬಬಲ್​ ಎಂದರೇನು? ಏನೇನಿದೆ ನಿಯಮ.. ಈ ಬಗ್ಗೆ  ಮಾಹಿತಿ ಇಲ್ಲಿದೆ.

ಬಯೋ ಸೆಕ್ಯೂರ್​ ಬಬಲ್​ ನಿಯಮದ ಪ್ರಕಾರ ಈ ಬಾರಿಯ ಐಪಿಎಲ್​ ಪಂದ್ಯ ನಡೆಯಲಿದೆ. ಐಪಿಲ್​​ ಆಡಳಿತ ಮಂಡಳಿ ಐಪಿಎಲ್​​ ಫ್ರಾಂಚೈಸಿಗಳಿಗಾಗಿ ಬಯೋ ಬಬಲ್​​ ನಿಯಮವನ್ನು ಹಾಕಿಕೊಂಡಿದೆ. ಇದರ ಮೂಲಕ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನಿರ್ಧರಿಸಲಿದೆ.

ಪ್ಲೇಯರ್ಸ್​ ಐಸೋಲೇಶನ್​:

ಐಪಿಎಲ್​ನಲ್ಲಿ ಕ್ರಿಕೆಟಿಗರ ಚಲನವಲನಗಳು ಕಡಿಮೆ ಇರುತ್ತದೆ. ಇಂಗ್ಲೆಂಡ್ ಮತ್ತು ವೆಸ್ಟ್​​ ಇಂಡೀಸ್​ ಪಂದ್ಯದಲ್ಲಿ ಆಟಗಾರರು​ ಐಸೋಲೇಶನ್​ ನಿಯಮವನ್ನು ಅನುಸರಿಸಲಾಗಿದೆ. ಆಟಗಾರರಿಗೆ ಹೆಚ್ಚು ಓಡಾಡಲು ಅವಕಾಶವಿರುವುದಿಲ್ಲ.

ಸೆಲ್ಫ್​ ಕ್ವಾರಟೈಂನ್​:

ಕ್ರಿಕೆಟಿಗರು ಐಪಿಎಲ್​ ಪಂದ್ಯ ನಡೆಯುವ ಜಾಗಕ್ಕೆ ಹೋದಂತೆ ಸೆಲ್ಫ್​​ಕ್ವಾರಂಟೈನ್​ ಆಗಲಿದ್ದಾರೆ. ಅದರ ಜೊತೆಗೆ ಆಟಗಾರರಿಗೆ ನೀಡಲಾಗುವ ಹೋಟೆಲ್​ ಅಥವಾ ರೂಂನಲ್ಲಿ ಸೆಲ್ಫ್​ ಕ್ವಾರಟೈಂನ್​ ಆಗಬೇಕು. ಫ್ಯಾಮಿಲಿ, ಪ್ರೆಂಡ್ಸನ್ನು ಕೂಡ ಕ್ರಿಕೆಟಿಗರು ಭೇಟಿ ಮಾಡುವುದನ್ನು ನಿರ್ಬಂಧಿಸಲಾಗಿದೆ.


ಪಂದ್ಯ ವೀಕ್ಷಣೆ ಹೇಗೆ?

ಐಪಿಎಲ್​​ ಪಂದ್ಯ ಪ್ರಾರಂಭದಲ್ಲಿ ಯಾವುದೇ ವೀಕ್ಷಕರಿಗೆ ವೀಕ್ಷಣೆಗೆ ಅನುಮತಿ ಇರುವುದಿಲ್ಲ. ಕಾಲಕ್ರಮೇಣ ಸ್ಥಿತಿಗತಿ ಬದಲಾದಂತೆ ವೀಕ್ಷಕರಿಗೆ ಐಪಿಎಲ್​ ಪಂದ್ಯ ವೀಕ್ಷಿಸುವ ಆವಕಾಶವನ್ನು ಬಿಸಿಸಿಐ ಕಲ್ಪಿಸುವ ಸಾಧ್ಯತೆ ಇದೆ. ಆದರೆ ಟಿವಿ ನೇರಪ್ರಸಾರದ ಮೂಲಕ ಪಂದ್ಯವನ್ನು ವೀಕ್ಷಿಸಬಹುದಾಗಿಗೆ. ಕೊರೋನಾದಿಂದಾಗಿ ಈ ಬಾರಿಯ ಐಪಿಎಲ್​ ಇಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮದಲ್ಲಿ ನಡೆಯಲಿದೆ.
Published by: Harshith AS
First published: August 10, 2020, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading