IPL 2020: ಆರ್​ಸಿಬಿ 9 ಕೋಟಿ ರೆಡೆ ಮಾಡಿತ್ತು ಈ ಆಟಗಾರನನ್ನು ಕೊಳ್ಳಲು; ಆದ್ರೆ, ಕೊಹ್ಲಿ ಟೀಂ ಸೇರಿದ್ದು 50 ಲಕ್ಷಕ್ಕೆ!

ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಇಸುರು ಉದಾನ ಅವರನ್ನು ಆರ್​ಸಿಬಿ ಕೊನೆ ಹಂತದಲ್ಲಿ 50 ಲಕ್ಷಕ್ಕೆ ತನ್ನ ತೆಕ್ಕಗೆ ಸೇರಿಸಿಕೊಂಡಿತು. ಆದರೆ, ಐಪಿಎಲ್ ಹರಾಜಿನ ಹಿಂದಿನ ದಿನ ನಡೆದ ಘಟನೆಯ ವಿಡಿಯೋವೊಂದನ್ನು ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

Vinay Bhat | news18-kannada
Updated:December 27, 2019, 12:02 PM IST
IPL 2020: ಆರ್​ಸಿಬಿ 9 ಕೋಟಿ ರೆಡೆ ಮಾಡಿತ್ತು ಈ ಆಟಗಾರನನ್ನು ಕೊಳ್ಳಲು; ಆದ್ರೆ, ಕೊಹ್ಲಿ ಟೀಂ ಸೇರಿದ್ದು 50 ಲಕ್ಷಕ್ಕೆ!
ಆರ್​ಸಿಬಿ
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಾದರು ಕಪ್ ಗೆಲ್ಲಲೇ ಬೇಕೆಂದು ತೀರ್ಮಾನ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹರಾಜಿನಲ್ಲಿ ತಮಗೆ ಬೇಕಾದ ಪ್ರಮುಖ ಆಟಗಾರರನ್ನು ಖರೀದ ಮಾಡಿದೆ.

ಒಟ್ಟು 8 ಹೊಸ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅದರಲ್ಲು ದ. ಆಫ್ರಿಕಾದ ಆಲ್ರೌಂಡರ್ ಆಟಗಾರ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರನಾಗಿದ್ದಾರೆ.

ಆ್ಯರೋನ್ ಫಿಂಚ್ ಅವರನ್ನು 4 ಕೋಟಿ 40 ಲಕ್ಷಕ್ಕೆ ಆರ್​ಸಿಬಿ ಹರಾಜಿನಲ್ಲಿ ಖರೀದಿ ಮಾಡಿದ ಮೊದಲ ಆಟಗಾರ. ನಂತರ ಅಂತಿಮ ಹಂತದಲ್ಲಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್​ರನ್ನು ಮೂಲಬೆಲೆ 2 ಕೋಟಿ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡಿತು.

ವಿಶ್ವ ಇಲೆವೆನ್ ವಿರುದ್ಧ ಭಾರತದ 5 ಆಟಗಾರರ ಜೊತೆ ಪಾಕ್ ಪ್ಲೇಯರ್ಸ್​​?; ಬಿಸಿಸಿಐ ಹೇಳಿದ್ದೇನು?

ಈ ನಡುವೆ ಆರ್​ಸಿಬಿ ಫ್ರಾಂಚೈಸಿ ಆಲ್ರೌಂಡರ್ ಆಟಗಾರರೊಬ್ಬರನ್ನು ಬರೋಬ್ಬರಿ 9 ಕೋಟಿ ರೂ. ಕೊಟ್ಟು ಖರೀದಿ ಮಾಡಲು ಮುಂದಾಗಿತ್ತು. ಆದರೆ, ಅಂತಿಮವಾಗಿ ಇವರು ತಂಡ ಸೇರಿಕೊಂಡಿದ್ದು 50 ಲಕ್ಷಕ್ಕೆ ಎಂದರೆ ನಂಬಲೇಬೇಕು.

ಹೌದು, ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ ಇಸುರು ಉದಾನ ಅವರನ್ನು ಆರ್​ಸಿಬಿ ಕೊನೆ ಹಂತದಲ್ಲಿ 50 ಲಕ್ಷಕ್ಕೆ ತನ್ನ ತೆಕ್ಕಗೆ ಸೇರಿಸಿಕೊಂಡಿತು. ಆದರೆ, ಐಪಿಎಲ್ ಹರಾಜಿನ ಹಿಂದಿನ ದಿನ ನಡೆದ ಘಟನೆಯ ವಿಡಿಯೋವೊಂದನ್ನು ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಇದರಲ್ಲಿ ಆರ್‌ಸಿಬಿ ತಂಡದ ಕ್ರಿಕೆಟ್‌ ಚಟುವಟಿಕೆಗಳ ಮುಖ್ಯಸ್ಥ ಮೈಕ್‌ ಹಸನ್‌ ಹಾಗೂ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಉದಾನ ಮೇಲೆ 9 ಕೋಟಿ ರುಪಾಯಿವರೆಗೂ ಬಿಡ್ ಮಾಡಿರುವ ದೃಶ್ಯಾವಳಿಗಳು ಸೆರೆಯಾಗಿವೆ. 



ತನ್ನದೇ ತಂಡದ ಹಿಂದೂ ಆಟಗಾರನ ಜೊತೆ ಪಾಕ್ ಪ್ಲೇಯರ್​​ಗಳ ಅನುಚಿತ ವರ್ತನೆ; ಅಚ್ಚರಿಯ ಮಾಹಿತಿ ಬಹಿರಂಗ

9 ಕೋಟಿ ಕೊಟ್ಟು ಲಂಕಾ ಆಲ್ರೌಂಡರ್ ಉದಾನ ಅವರನ್ನು ಖರೀದಿಸಲು ಆರ್​ಸಿಬಿ ಮುಂದಾಗಿತ್ತು. ಆದರೆ, ಕೇವಲ 50 ಲಕ್ಷ ರೂಪಾಯಿಗೆ ಉದಾನ ಕೊನೆಯಲ್ಲಿ ಕೊಹ್ಲಿ ಟೀಂ ಪಾಲಾದರು.

ಒಟ್ಟು ಎಂಟು ಹೊಸ ಪ್ಲೇಯರ್​​ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಹರಾಜಿಗೂ ಮುನ್ನ ಆರ್​ಸಿಬಿ ತನ್ನಲ್ಲೆ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿ.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಆ್ಯರೋನ್ ಫಿಂಚ್, ಕ್ರಿಸ್ ಮೊರೀಸ್, ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಇಸ್ರು ಉದಾನ, ಜೋಶ್ ಪಿಲಿಪ್, ಶಹ್ಬಾಜ್ ಅಹ್ಮದ್ ಹಾಗೂ ಪವನ್ ದೇಶಪಾಂಡೆ.

First published:December 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading