ಕ್ರೀಡೆ

  • associate partner
HOME » NEWS » Sports » CRICKET IPL 2020 TRADING HETMYER STOINIS AMONG 11 BIG NAMES RELEASED BY ROYAL CHALLENGERS BANGALORE VB

IPL: 11 ಆಟಗಾರರನ್ನು ಕೈಬಿಟ್ಟ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಉಳಿದುಕೊಂಡ ಆಟಗಾರರು ಇವರೆ!

ಮುಂಬೈ ಇಂಡಿಯನ್ಸ್​ ತಂಡ ಯುವರಾಜ್ ಸಿಂಗ್​ನನ್ನು ತಂಡದಿಂದ ಕೈಬಿಟ್ಟಿದೆ. ಕೇವಲ ಯುವಿ ಮಾತ್ರವಲ್ಲದೆ 12 ಆಟಗಾರರನ್ನು ಬಿಡುಗಡೆಗೊಳಿಸಿದೆ.

Vinay Bhat | news18-kannada
Updated:November 20, 2019, 9:52 AM IST
IPL: 11 ಆಟಗಾರರನ್ನು ಕೈಬಿಟ್ಟ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಉಳಿದುಕೊಂಡ ಆಟಗಾರರು ಇವರೆ!
ಅದರಂತೆ ಅಗತ್ಯವಿಲ್ಲದ ಆಟಗಾರರನ್ನು ಈಗಾಗಲೇ ಕೈಬಿಟ್ಟಿದ್ದು, ಹರಾಜಿನಲ್ಲಿ ಬಲಿಷ್ಠ ಪ್ಲೇಯರ್ಗಳನ್ನು ಖರೀದಿ ಮಾಡುವತ್ತ ಚಿತ್ತ ನೆಟ್ಟಿದೆ.
  • Share this:
ಬೆಂಗಳೂರು (ನ. 16): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತನ್ನ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾಗಿದೆ. ಇದರ ಮೊದಲ ಹಂತ ಎಂಬಂತೆ ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ತೋರಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಒಟ್ಟು 11 ಆಟಗಾರರಿಗೆ ಗೇಟ್​ಪಾಸ್ ನೀಡಿರುವ ಆರ್​ಸಿಬಿ ಹರಾಜು ಪ್ರಕ್ರಿಯೆಯಲ್ಲಿ ಹೊಸ ಪ್ರತಿಭೆಗಳಿಗೆ ಪ್ರಾಧಾನ್ಯತೆ ನೀಡುವ ಲೆಕ್ಕಾಚಾರದಲ್ಲಿದೆ. ಪ್ರಮುಖವಾಗಿ ಆರ್​ಸಿಬಿ ತಂಡ ಮಾರ್ಕಸ್ ಸ್ಟಾಯಿನಿಸ್, ಶಿಮ್ರೋನ್ ಹೆಟ್ಮೇರ್, ಕಾಲಿನ್ ಗ್ರ್ಯಾಂಡ್​ಹೋಮ್, ಟಿಮ್ ಸೌಥಿ, ಡೇಲ್ ಸ್ಟೈನ್, ಹೆನ್ರಿಚ್ ಕ್ಲಾಸೆನ್, ಅಕ್ಷದೀಪ್ ನಾಥ್, ನೇಥನ್ ಕೌಲ್ಟರ್ ನೈಲ್, ಪ್ರಯಾಸ್ ರೇ ಬರ್ಮನ್, ಕುಲ್ವಂತ್ ಕೇಜ್ರೋಲಿಯಾ, ಹಿಮ್ಮತ್ ಸಿಂಗ್, ಮಿಲಿಂದ್ ಕುಮಾರ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.

 


ಇನ್ನು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

 ಇತ್ತ ಮುಂಬೈ ಇಂಡಿಯನ್ಸ್​ ತಂಡ ಯುವರಾಜ್ ಸಿಂಗ್​ನನ್ನು ತಂಡದಿಂದ ಕೈಬಿಟ್ಟಿದೆ. ಕೇವಲ ಯುವಿ ಮಾತ್ರವಲ್ಲದೆ 12 ಆಟಗಾರರನ್ನು ಬಿಡುಗಡೆಗೊಳಿಸಿದೆ. ಎವಿನ್ ಲೆವಿಸ್, ಆ್ಯಡಂ ಮಿಲ್ನೆ, ಜೇಸನ್ ಬೆಹ್ರೆನ್‌ಡಾರ್ಫ್, ಬ್ಯುರನ್ ಹೆಂಡ್ರಿಕ್ಸ್, ಬೆನ್ ಕಟ್ಟಿಂಗ್, ಬೆನ್ ಕಟ್ಟಿಂಗ್, ಯುವರಾಜ್ ಸಿಂಗ್, ಮಯಾಂಕ್ ಮಾರ್ಕಂಡೆ, ಬರಿಂದರ್ ಸ್ರಾನ್, ರಸೀಖ್ ಸಲಾಂ, ಪಂಕಜ್ ಜಸ್ವಾಲ್, ಸಿದ್ದೇಶ್, ಅಲ್ಜಾರಿ ಜೋಸೆಫ್ ರಿಲೀಸ್ ಮಾಡಿದ ಆಟಗಾರರಾಗಿದ್ದಾರೆ.

 ಸನ್​ರೈಸರ್ಸ್​​ ತಂಡ  ಯೂಸುಫ್ ಪಠಾಣ್, ಶಕೀಬ್ ಅಲ್​ ಹಸನ್, ಮಾರ್ಟಿನ್ ಗಪ್ಟಿಲ್, ದೀಪಕ್ ಹೂಡಾ ಹಾಗೂ ರಿಕ್ಕಿ ಭುಯಿ ಅವರನ್ನು ರಿಲೀಸ್ ಮಾಡಿದೆ.

ಸಿಎಸ್​ಕೆ ಬಿಡುಗಡೆ ಮಾಡಿದ ಆಟಗಾರರು: ಸ್ಯಾಮ್ ಬಿಲ್ಲಿಂಗ್ಸ್, ಮೋಹಿತ್ ಶರ್ಮಾ, ಧ್ರುವ್ ಶೋರೆ, ಡೇವಿಡ್ ವಿಲ್ಲಿ, ಚೈತನ್ಯ ಬಿಶ್ನೋಯ್,

ಕೋಲ್ಕತ್ತಾ ನೈಟ್​ ರೈಡರ್ಸ್ ಬಿಡುಗಡೆ ಮಾಡಿದ ಆಟಗಾರರು​: ಕ್ರಿಸ್ ಲಿನ್, ಕಾರ್ಲೊಸ್ ಬ್ರಾತ್​ವೇಟ್, ರಾಬಿನ್ ಉತ್ತಪ್ಪ, ಪಿಯೂಷ್ ಚಾವ್ಲಾ, ನಿಖಿಲ್ ನಾಯಕ್, ಕೆಸಿ ಕರಿಯಪ್ಪ, ಜೋ ಡೆನ್ಲಿ, ಶ್ರೀಕಾಂತ್ ಮುಂಡೆ, ಯಾರಾ ಪೃಥ್ವಿರಾಜ್, ಅನ್ರಿಚ್ ನೋರ್ಟ್ಜೆ, ಮ್ಯಾಥ್ಯೂ ಕೆಲ್ಲಿ.
First published: November 16, 2019, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading