ಕಿಂಗ್ಸ್​​ ಪಾಲಾದ ಸ್ಟಾರ್ ಆಲ್ರೌಂಡರ್; ಪಂಜಾಬ್ ತಂಡದಲ್ಲಿದ್ದಾರೆ 6 ಜನ ಕನ್ನಡಿಗರು; ಯಾರೆಲ್ಲ ಗೊತ್ತಾ?

ದೇಶೀಯ ಕ್ರಿಕೆಟ್​ನಲ್ಲಿ ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸ್ಟಾರ್ ಆಲ್ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಕಿಂಗ್ಸ್​​ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ.

ಈಗಾಗಲೇ  ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಬಾರಿ ಮತ್ತೊಂದು ಹೊಸ ತಂಡ ಸೇರ್ಪಡೆಯಾಗುವ ಸಾಧ್ಯತೆ ಕೂಡ ಇದೆ.

ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಬಾರಿ ಮತ್ತೊಂದು ಹೊಸ ತಂಡ ಸೇರ್ಪಡೆಯಾಗುವ ಸಾಧ್ಯತೆ ಕೂಡ ಇದೆ.

  • Share this:
ಬೆಂಗಳೂರು (ನ. 14): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಎಲ್ಲಾ ತಂಡದ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಕೆಲ ತಂಡಗಳು ಪ್ರಮುಖ ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡರೆ ಇನ್ನೂ ಕೆಲವರನ್ನು ರಿಲೀಸ್ ಮಾಡಿದೆ.

ಈಗಾಗಲೇ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿದ್ದ ವೇಗಿ ಅಂಕಿತ್​ ರಜಪೂತ್ ರಾಜಸ್ಥಾನ ರಾಯಲ್ಸ್​ ತಂಡದ ಪಾಲಾಗಿದ್ದಾರೆ. 2018 ಹಾಗೂ 19ರ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್​ಗಳ ಪೈಕಿ ಅಂಕಿತ್ ಕೂಡ ಒಬ್ಬರು. 2018ರಲ್ಲಿ ಕಿಂಗ್ಸ್​ ತಂಡ ಸೇರಿದ್ದ ಇವರು ಒಟ್ಟು 23 ಪಂದ್ಯಗಳಲ್ಲಿ 22 ವಿಕೆಟ್ ಕಿತ್ತಿದ್ದಾರೆ.

 India vs Bangladesh, Live: ಟಾಸ್ ಗೆದ್ದ ಬಾಂಗ್ಲಾದೇಶ; ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ ಭಾರತ

ಇನ್ನು ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿದ್ದ ಕಿವೀಸ್​ ವೇಗಿ, ಟ್ರೆಂಟ್​ ಬೌಲ್ಟ್​ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ನಾಕೌಟ್ ಹಂತಕ್ಕೇರಲು ಬೌಲ್ಟ್​ ಪ್ರಮುಖ ಪಾತ್ರವಹಿಸಿದ್ದರು. ಅದಾಗಿಯು ಇವರನ್ನು ಡೆಲ್ಲಿ ತಂಡ ಕೈಬಿಟ್ಟಿದೆ. ಬೌಲ್ಟ್​ ಒಟ್ಟು 33 ಐಪಿಎಲ್ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ.

 ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸ್ಟಾರ್ ಆಲ್ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಕಿಂಗ್ಸ್​​ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ.

IPL: 2018ರ ಐಪಿಎಲ್ ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?

ವಿಶೇಷ ಎಂದರೆ ಕರ್ನಾಟಕದ ಕೃಷ್ಣಪ್ಪ ಗೌತಮ್ ಕಿಂಗ್ಸ್​ ಇಲೆವೆನ್ ಪಂಜಾಬ್ ಸೇರಿ ಒಟ್ಟು 6 ಜನ ಕನ್ನಡಿಗರು ಈ ತಂಡದಲ್ಲಿದ್ದಾರೆ. ಪ್ರಮುಖ ಕೋಚ್ ಆಗಿರುವ ಅನಿಲ್ ಕುಂಬ್ಳೆ ಕನ್ನಡಿಗರಾಗಿದ್ದು, ಕೆ ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಹಾಗೂ ಇತ್ತೀಚೆಗಷ್ಟೆ ಅಶ್ವಿನ್ ಬದಲು ಕನ್ನಡಿಗ ಜಗದೀಶ್ ಸುಚಿತ್​ರನ್ನು ಕಿಂಗ್ಸ್​ ತಂಡ ಬರಮಾಡಿಕೊಂಡಿದೆ. ಈ ಮೂಲಕ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ ಒಟ್ಟು ಆರು ಜನ ಕನ್ನಡಿಗರ ಬಲ ಸಿಕ್ಕಂತಾಗಿದೆ.

ಇನ್ನು ಮುಂಬೈ ಇಂಡಿಯನ್ಸ್​ ತಂಡ ಎವಿನ್ ಲೆವಿಸ್​ರನ್ನು ಕೈಬಿಟ್ಟಿದೆ. ಪ್ರಮುಖ ವೇಗಿ ಧವಳ್ ಕುಲ್ಕರ್ಣಿ ಅವರು ರೋಹಿತ್ ತಂಡದ ಪಾಲಾಗಿದ್ದಾರೆ. ಇತ್ತ ನವೆಂಬರ್ 15 ರಂದು ಆರ್​ಸಿಬಿ ತಂಡ ತನ್ನಲ್ಲೆ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ ಎಂದುಹೇಳಿದೆ.

First published: