ಕ್ರೀಡೆ

  • associate partner
HOME » NEWS » Sports » CRICKET IPL 2020 SMASHES TV RECORDS BECOMES FIRST SPORTS TOURNAMENT TO CROSS 400 BILLION VIEWS BARC MAK

ಹೊಸ ದಾಖಲೆ ಬರೆದ IPL 2020; 400 ಬಿಲಿಯನ್ ನಿಮಿಷಗಳ ವೀಕ್ಷಣೆಯನ್ನು ದಾಟಿದ ಮೊದಲ ಕ್ರೀಡಾಕೂಟ

ಸ್ಪೋರ್ಟಿಂಗ್ ಲೀಗ್ ದಾಖಲಿಸಿದ ಅತಿ ಹೆಚ್ಚು ವೀಕ್ಷಕರ ವಿಷಯದಲ್ಲಿ ಕಳೆದ ವರ್ಷ ನಡೆದ ಕ್ರಿಕೆಟ್ (ಏಕದಿನ) ವಿಶ್ವಕಪ್ ಮೊದಲ ಸ್ಥಾನದಲ್ಲಿತ್ತು. ಈ ಕ್ರೀಡಾಕೂಟ 344 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ದಾಖಲಿಸಿತ್ತು. ಆದರೆ, ಆ ದಾಖಲೆಯನ್ನು ಇದೀಗ ಐಪಿಎಲ್​ 13ನೇ ಆವೃತ್ತಿ ಮೀರಿದೆ.


Updated:November 20, 2020, 8:30 PM IST
ಹೊಸ ದಾಖಲೆ ಬರೆದ IPL 2020; 400 ಬಿಲಿಯನ್ ನಿಮಿಷಗಳ ವೀಕ್ಷಣೆಯನ್ನು ದಾಟಿದ ಮೊದಲ ಕ್ರೀಡಾಕೂಟ
IPL UAE
  • Share this:
ಕಳೆದ 12 ಆವೃತ್ತಿಗಳಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದ ಐಪಿಎಲ್​ ಈ ವರ್ಷ ಕೊರೋನಾ ಭೀತಿಯ ಕಾರಣದಿಂದಾಗಿ ಪ್ರೇಕ್ಷಕರೇ ಇಲ್ಲದ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಆಯೋಜಿಸಬೇಕಾದ ಪರಿಸ್ಥಿತಿಗೆ ಬಿಸಿಸಿಐ ಒಳಗಾಗಿತ್ತು. ಈ ನಡುವೆ ಪ್ರೇಕ್ಷಕರೇ ಇಲ್ಲದ ಪಂದ್ಯಗಳು ಜನರ ಮನಸ್ಸನ್ನು ಗೆಲ್ಲುತ್ತದೆಯೇ ಎಂಬ ಪ್ರಶ್ನೆಯೂ ಮೂಡಿತ್ತು. ಎಲ್ಲಾ ಅಡೆತಡೆಗಳನ್ನೂ ಮೀರಿ ಬಿಸಿಸಿಐ ಕೊನೆಗೂ 13ನೇ ಆವೃತ್ತಿಯ ಐಪಿಎಲ್​ ಪಂದ್ಯಾವಳಿಯನ್ನು ದೂರದ ದುಬೈನಲ್ಲಿ ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಈ ನಡುವೆ ಬಾರ್ಕ್ ಸಂಸ್ಥೆ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ 2020 (ಐಪಿಎಲ್) ವೀಕ್ಷಣೆಯ ನಿಮಿಷಗಳಲ್ಲಿ ಶೇ.23 ರಷ್ಟು ಏರಿಕೆಯಾಗಿದೆ. ಅಲ್ಲದೆ, 400 ಬಿಲಿಯನ್​ ವೀಕ್ಷಣೆ ನಿಮಿಷಗಳನ್ನು ಪಡೆದ ಮೊದಲ ಕ್ರೀಡಾಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನಲಾಗಿದೆ. 

ಐಪಿಎಲ್​ ಕಳೆದ ವರ್ಷ 326 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ದಾಖಲಿಸಿತ್ತು. ಐಪಿಎಲ್​ ಇತಿಹಾಸದಲ್ಲಿ ಇದನ್ನು ದಾಖಲೆ ಎಂದು ಪರಿಗಣಿಸಲಾಗಿತ್ತು. ಆದರೆ, ಈ ಬಾರಿ ಕೊರೋನಾ ಕಾರಣದಿಂದಾಗಿ ಜನ ಮನೆಯಲ್ಲೇ ಇದ್ದದ್ದು ಐಪಿಎಲ್​ ವೀಕ್ಷಣೆ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ. ಪರಿಣಾಮ ಬಾರ್ಕ್​ ಸಂಸ್ಥೆ ನೀಡುವ ಅಂಕಿಅಂಶಗಳ ಪ್ರಕಾರ ಈ ಬಾರಿಯ ಐಪಿಎಲ್​ ಟಿವಿಯಲ್ಲಿ 400 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ದಾಖಲಿಸಿದೆ. ಅಲ್ಲದೆ, ಬಾರ್ಕ್ ಮಾಹಿತಿಯ ಪ್ರಕಾರ ಐಪಿಎಲ್ 2020 400 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ದಾಟಿದ ಮೊದಲ ಕ್ರೀಡಾ ಪಂದ್ಯಾವಳಿಯೂ ಹೌದು ಎನ್ನಲಾಗುತ್ತಿದೆ.

ಸ್ಪೋರ್ಟಿಂಗ್ ಲೀಗ್ ದಾಖಲಿಸಿದ ಅತಿ ಹೆಚ್ಚು ವೀಕ್ಷಕರ ವಿಷಯದಲ್ಲಿ ಕಳೆದ ವರ್ಷ ನಡೆದ ಕ್ರಿಕೆಟ್ (ಏಕದಿನ) ವಿಶ್ವಕಪ್ ಮೊದಲ ಸ್ಥಾನದಲ್ಲಿತ್ತು. ಈ ಕ್ರೀಡಾಕೂಟ 344 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ದಾಖಲಿಸಿತ್ತು. ಆದರೆ, ಆ ದಾಖಲೆಯನ್ನು ಇದೀಗ ಐಪಿಎಲ್​ 13ನೇ ಆವೃತ್ತಿ ಮೀರಿದೆ. ಒಟ್ಟಾರೆಯಾಗಿ 405 ಮಿಲಿಯನ್ ವೀಕ್ಷಕರು ಈ ಬಾರಿಯ ಐಪಿಎಲ್​ ಟೂರ್ನಿಯನ್ನು ಟ್ಯೂನ್ ಮಾಡಿದ್ದಾರೆ.

ಒಟ್ಟು 32 ಪಂದ್ಯಗಳೊಂದಿಗೆ ಲೀಗ್‌ನ ಮೊದಲ ನಾಲ್ಕು ವಾರಗಳಲ್ಲಿ ಐಪಿಎಲ್ 7.3 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ಮತ್ತು ಪ್ರತಿ ಪಂದ್ಯಕ್ಕೆ 110 ಮಿಲಿಯನ್ ವೀಕ್ಷಣೆ ನಿಮಿಷಗಳನ್ನು ದಾಖಲಿಸಿದೆ. ಈ ವರ್ಷದ ಐಪಿಎಲ್‌ನಲ್ಲಿ ಪ್ರತಿ ಪಂದ್ಯದ ಸರಾಸರಿ ಸಮಯವು 15 ಪ್ರತಿಶತದಷ್ಟು ಹೆಚ್ಚಾಗಿದೆ. ವೀಕ್ಷಕರು ಈ ತುವಿನಲ್ಲಿ ಐಪಿಎಲ್ ವೀಕ್ಷಿಸಲು 42 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಕಳೆದಿದ್ದಾರೆ. ಕಳೆದ ವರ್ಷ 37 ನಿಮಿಷಗಳನ್ನು ಐಪಿಎಲ್​ ವೀಕ್ಷಣೆಗೆ ಕಳೆದಿದ್ದರು.

ಒಟ್ಟಾರೆಯಾಗಿ ಐಪಿಎಲ್ 13233.9 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ನೋಂದಾಯಿಸಿದೆ ಮತ್ತು ಲೀಗ್‌ನ ಮೊದಲ ನಾಲ್ಕು ವಾರಗಳಲ್ಲಿ 361 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ. ಆರಂಭಿಕ ವಾರದಲ್ಲಿ ಪಂದ್ಯಾವಳಿ 269 ಮಿಲಿಯನ್ ವೀಕ್ಷಕರನ್ನು ಮತ್ತು 60.6 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ಗಳಿಸಿದೆ.

ಪುರುಷರು ಐಪಿಎಲ್ ಅನ್ನು ಹೆಚ್ಚು ವೀಕ್ಷಿಸುತ್ತಿದ್ದರೆ, ಮಹಿಳೆಯರ ಸಂಖ್ಯೆಯೂ ಕಡಿಮೆ ಏನಲ್ಲ. ವಾಸ್ತವವಾಗಿ ಐಪಿಎಲ್‌ನ 13 ನೇ ಋತುವಿನಲ್ಲಿ ಮಹಿಳಾ ವೀಕ್ಷಕರ ಸಂಖ್ಯೆ ಕಳೆದ 12 ಸೀಸನ್‌ಗೆ ಹೋಲಿಸಿದರೆ ಶೇ.33 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : LPL 2020: ಲಂಕಾ ಪ್ರೀಮಿಯರ್ ಲೀಗ್​ಗೆ ಕ್ಷಣಗಣನೆ: ಘರ್ಜಿಸಲು ತಯಾರಾದ ಭಾರತದ ಹಳೇ ಹುಲಿಗಳು: ಯಾರೆಲ್ಲಾ?ಈ ವರ್ಷದ ಐಪಿಎಲ್‌ನ ಆರಂಭಿಕ ವಾರದಲ್ಲಿ ಮೊದಲ ಏಳು ಪಂದ್ಯಗಳಿಗೆ ಮಹಿಳಾ ವೀಕ್ಷಕರ ಸಂಖ್ಯೆ 3.7 ಬಿಲಿಯನ್ ವೀಕ್ಷಣೆ ನಿಮಿಷಗಳಲ್ಲಿ ದಾಖಲಾಗಿದೆ. ಮತ್ತೊಂದೆಡೆ, ಕಳೆದ ವರ್ಷದ ಮೊದಲ ಎಂಟು ಪಂದ್ಯಗಳಲ್ಲಿ 2.8 ಬಿಲಿಯನ್ ವೀಕ್ಷಣೆ ನಿಮಿಷಗಳು ದಾಖಲಾಗಿತ್ತು.
Youtube Video

ಟಿವಿಯ ಜೊತೆಗೆ ಐಪಿಎಲ್ ಅನ್ನು ಸ್ಟ್ರೀಮಿಂಗ್ ಮಾಡುತ್ತಿದ್ದ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ ಆನ್‌ಲೈನ್ ವೀಕ್ಷಕರ ಗಮನವನ್ನು ಸಹ ಈ ಬಾರಿಯ ಐಪಿಎಲ್ ಲೀಗ್ ಸೆಳೆದಿದೆ. ಆರಂಭಿಕ ವಾರದಲ್ಲಿ ಡಿಸ್ನಿ + ಹಾಟ್‌ಸ್ಟಾರ್ ತನ್ನ ಬಳಕೆದಾರರ ಸಂಖ್ಯೆಯಲ್ಲಿ ವಾರದಲ್ಲಿ 99 ಪ್ರತಿಶತದಷ್ಟು ಏರಿಕೆ ಕಂಡಿದೆ ಎನ್ನಲಾಗುತ್ತಿದೆ.
Published by: MAshok Kumar
First published: November 20, 2020, 8:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories