ಆರ್​ಸಿಬಿ ತಂಡದಲ್ಲಿ 9 ಬ್ಯಾಟ್ಸ್​ಮನ್​, 4 ಆಲ್ರೌಂಡರ್, 8 ಬೌಲರ್​ಗಳು; ಪ್ಲೇಯಿಂಗ್ XI ನಲ್ಲಿ ಯಾರೆಲ್ಲ?

RCB: ಆರ್​ಸಿಬಿ ತಂಡದಲ್ಲಿ ಒಟ್ಟು 21 ಆಟಗಾರರಿದ್ದಾರೆ. ಇದರಲ್ಲಿ ಬ್ಯಾಟ್ಸ್​ಮನ್, ಆಲ್ರೌಂಡರ್ ಹಾಗೂ ಬೌಲರ್​ಗಳು ಯಾರು ಎಂಬುವುದನ್ನು ನೋಡುವುದಾದರೆ…

Vinay Bhat | news18-kannada
Updated:December 21, 2019, 11:30 AM IST
ಆರ್​ಸಿಬಿ ತಂಡದಲ್ಲಿ 9 ಬ್ಯಾಟ್ಸ್​ಮನ್​, 4 ಆಲ್ರೌಂಡರ್, 8 ಬೌಲರ್​ಗಳು; ಪ್ಲೇಯಿಂಗ್ XI ನಲ್ಲಿ ಯಾರೆಲ್ಲ?
13ನೇ ಆವೃತ್ತಿಯ ಐಪಿಎಲ್ಗೆ ಬಲಿಷ್ಠ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್ಸಿಬಿ ಈ ಬಾರಿ ಆದ್ರೂ ಕಪ್ ಗೆಲ್ಲುತ್ತಾ ನೋಡಬೇಕಿದೆ.
  • Share this:
ಬೆಂಗಳೂರು (ಡಿ. 21): 13ನೇ ಆವೃತ್ತಿಯ ಐಪಿಎಲ್​ನಲ್ಲಾದರು ಕಪ್ ಗೆಲ್ಲಲೇ ಬೇಕೆಂದು ತೀರ್ಮಾನ ಮಾಡಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹರಾಜಿನಲ್ಲಿ ತಮಗೆ ಬೇಕಾದ ಪ್ರಮುಖ ಆಟಗಾರರನ್ನು ಖರೀದ ಮಾಡಿದೆ. ಈ ಬಗ್ಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಸಂತಸ ಹಂಚಿಕೊಂಡಿದ್ದಾರೆ.

ಒಟ್ಟು ಎಂಟು ಹೊಸ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅದರಲ್ಲು ದ. ಆಫ್ರಿಕಾದ ಆಲ್ರೌಂಡರ್ ಆಟಗಾರ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರನಾಗಿದ್ದಾರೆ.

 IPL 2020: ಐಪಿಎಲ್ 13ನೇ ಆವೃತ್ತಿ ಯಾವಾಗ ಪ್ರಾರಂಭ..?; ಇಲ್ಲಿದೆ ಮಾಹಿತಿ

ಆ್ಯರೋನ್ ಫಿಂಚ್ ಅವರನ್ನು 4 ಕೋಟಿ 40 ಲಕ್ಷಕ್ಕೆ ಆರ್​ಸಿಬಿ ಹರಾಜಿನಲ್ಲಿ ಖರೀದಿ ಮಾಡಿದ ಮೊದಲ ಆಟಗಾರ. ನಂತರ ಅಂತಿಮ ಹಂತದಲ್ಲಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್​ರನ್ನು ಮೂಲಬೆಲೆ 2 ಕೋಟಿ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡಿತು.

ಕರ್ನಾಟಕದ ಒಬ್ಬ ಆಲ್ರೌಂಡರ್ ಆಟಗಾರ ಪವನ್ ದೇಶಪಾಂಡೆ ಅವರನ್ನು 20 ಲಕ್ಷಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಜೊತೆಗೆ ಶಹ್ಬಾಜ್ ಅಹ್ಮದ್ 20 ಲಕ್ಷ, ಇಸ್ರು ಉದಾನ 50 ಲಕ್ಷಕ್ಕೆ, ಆಸ್ಟ್ರೇಲಿಯಾ ಪ್ರಮುಖ ವೇಗಿ ಕೇನ್ ರಿಚರ್ಡಸನ್ ಅವರನ್ನು 4 ಕೋಟಿ ಕೊಟ್ಟು ಖರೀದಿ ಮಾಡಿದೆ. ಜೋಶ್ ಪಿಲಿಪ್ ಅವರನ್ನು 20 ಲಕ್ಷ ಕೊಟ್ಟು ತಮ್ಮ ತಂಡಕ್ಕೆ ಆರ್​ಸಿಬಿ ಸೇರಿಸಿದೆ.

ಹೀಗೆ ಆರ್​ಸಿಬಿ ತಂಡದಲ್ಲಿ ಒಟ್ಟು 21 ಆಟಗಾರರಿದ್ದಾರೆ. ಇದರಲ್ಲಿ ಬ್ಯಾಟ್ಸ್​ಮನ್, ಆಲ್ರೌಂಡರ್ ಹಾಗೂ ಬೌಲರ್​ಗಳು ಯಾರು ಎಂಬುವುದನ್ನು ನೋಡುವುದಾದರೆ…

ಬ್ಯಾಟ್ಸ್​ಮನ್​- ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್​​, ದೇವದತ್ ಪಡಿಕ್ಕಲ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಆ್ಯರೋನ್ ಫಿಂಚ್, ಜೋಶ್ ಪಿಲಿಪ್ (ವಿಕೆಟ್ ಕೀಪರ್), ಶಹ್ಬಾಜ್ ಅಹ್ಮದ್ (ವಿಕೆಟ್ ಕೀಪರ್), ಗುರ್​ಕೀರತ್ ಸಿಂಗ್ ಮನ್, ಪವನ್ ದೇಶಪಾಂಡೆ.

10.75 ಕೋಟಿಗೆ ಹರಾಜಾದ ಬೆನ್ನಲ್ಲೆ ಅಬ್ಬರಿಸಿದ ಮ್ಯಾಕ್ಸ್​ವೆಲ್; 39 ಎಸೆತಗಳಲ್ಲಿ ಸಿಡಿಸಿದ ರನ್ ಎಷ್ಟು ಗೊತ್ತಾ?

ಆಲ್ರೌಂಡರ್- ಮೊಯೀನ್ ಅಲಿ, ಕ್ರಿಸ್ ಮೊರೀಸ್, ಇಸುರು ಉದಾನ, ಶಿವಂ ದುಬೆ.

ಸ್ಪಿನ್ನರ್- ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ.

ವೇಗಿಗಳು- ಉಮೇಶ್ ಯಾದವ್, ನ್​ವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡಸನ್, ಡೇಲ್ ಸ್ಟೈನ್.

ಇನ್ನು ಆರ್​ಸಿಬಿ ಬಲಿಷ್ಠ ಆಡುವ ಬಳಗವನ್ನು ನೋಡುವುದಾದರೆ…

ಆ್ಯರೋನ್ ಫಿಂಚ್, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಗುರ್​​ಕೀರತ್ ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೊರೀಸ್, ಡೇಲ್ ಸ್ಟೈನ್, ಉಮೇಶ್ ಯಾದವ್, ಯಜುವೇಂದ್ರ ಚಹಾಲ್.

First published:December 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading