ಕ್ರೀಡೆ

  • associate partner
HOME » NEWS » Sports » CRICKET IPL 2020 ROYAL CHALLENGER BANGALORE RCB TO CHANGE NAME AHEAD OF NEXT SEASON VB

IPL 2020: ಆರ್​ಸಿಬಿ ಫ್ರಾಂಚೈಸಿ ಮಾಡಿದ ಕೆಲಸ ಕಂಡು ದಂಗಾದ ಅಭಿಮಾನಿಗಳು; ಚಹಾಲ್ ಕೂಡ ಶಾಕ್!

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಮೇ 24ರಂದು ಫೈನಲ್ ಪಂದ್ಯ ನಡೆಯಲಿದೆ.

news18-kannada
Updated:February 13, 2020, 8:50 AM IST
IPL 2020: ಆರ್​ಸಿಬಿ ಫ್ರಾಂಚೈಸಿ ಮಾಡಿದ ಕೆಲಸ ಕಂಡು ದಂಗಾದ ಅಭಿಮಾನಿಗಳು; ಚಹಾಲ್ ಕೂಡ ಶಾಕ್!
ಸಾಮಾನ್ಯವಾಗಿ ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆಟಗಾರರನ್ನು ಖರೀದಿ ಮಾಡಿದ ಮೊತ್ತದ ಶೇ.15ರಷ್ಟು ಹಣವನ್ನು ನೀಡಲಾಗುತ್ತದೆ. ತಂಡ ಸೇರಿಕೊಂಡ ಬಳಿಕ ಶೇ.65ರಷ್ಟು ಹಾಗೂ ಶೇ. 20ರಷ್ಟು ಹಣ ಟೂರ್ನಿ ಮುಕ್ತಾಯದ ಬಳಿಕ ನೀಡಲಾಗುತ್ತಿತ್ತು- ಅಶೋಕ್ ಮಲ್ಹೋತ್ರಾ
  • Share this:
ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇತ್ತೀಚೆಗಷ್ಟೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನು ಕಿತ್ತುಹಾಕಿ ಕೇವಲ ರಾಯಲ್ ಚಾಲೆಂಜರ್ಸ್​ ಎಂದು ಬರೆದುಕೊಂಡಿತ್ತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆರ್​ಸಿಬಿ ವಿರುದ್ಧ ಕಿಡಿ ಕಾರಿದ್ದರು.

ಸದ್ಯ ಇದರ ಬೆನ್ನಲ್ಲೆ ಆರ್​ಸಿಬಿ ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿನ ಪ್ರೊಫೈಲ್ ಫೋಟೋ, ಕವರ್ ಫೋಟೋ ತೆಗದು ಹಾಕಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಇನ್​ಸ್ಟಾಗ್ರಾಂನಲ್ಲಿ ಇದುವರೆಗೂ ಹಾಕಿದ್ದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್ ಮಾಡಿದೆ.

IPL 2020: ‘What googly is this’ - Yuzvendra Chahal reacts after RCB remove picture and name on social media
ಆರ್​ಸಿಬಿಯ ಅಧಿಕೃತ ಇನ್​ಸ್ಟಾಗ್ರಾಂ ಖಾತೆ.


Ranji Trophy 2019-20: ಮೊದಲ ದಿನ 17 ವಿಕೆಟ್ ಪತನ; ಕರ್ನಾಟಕ ಅಲ್ಪ ಮುನ್ನಡೆ

ಈ ಮೂಲಕ ಆರ್​ಸಿಬಿ ತಂಡ ತನ್ನ ಹೆಸರು ಬದಲಾವಣೆಗೆ ಮತ್ತೊಂದು ಸುಳಿವು ನೀಡಿದೆ. ಇದರಿಂದ ಕೇವಲ ಅಭಿಮಾನಿಗಳು ಮಾತ್ರ ಶಾಕ್ ಆಗಿದ್ದಲ್ಲದೆ, ಯಜುವೇಂದ್ರ ಚಹಾಲ್ ಕೂಡ ಟ್ವೀಟ್ ಮಾಡಿ "ಆರ್​ಸಿಬಿಯಿಂದ ಇದು ಯಾವರೀತಿಯ ಗೂಗ್ಲಿ?, ಇನ್​ಸ್ಟಾಗ್ರಾಂನ ಪ್ರೊಫೈಲ್ ಫೋಟೋ ಮತ್ತು ಪೋಸ್ಟ್​ಗಳು ಇಲ್ಲಿದೆ ಹೋದವು?" ಎಂದು ಕೇಳಿದ್ದಾರೆ.

ಕಿಂಗ್ ಕೊಹ್ಲಿ 7 ಬಾರಿ ನಾಯಕನಾಗಿ ಆರ್​ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಆದರೂ ಒಮ್ಮೆಯೂ ಕಪ್ ಗೆಲ್ಲಲು ಯಶಸ್ವಿಯಾಗಲಿಲ್ಲ. ಆದರೆ, ಈ ಬಾರಿ ಹಲವು ಬದಲಾವಣೆಯೊಂದಿಗೆ ಹೊಸ ಹುರುಪಿನಿಂದ ಕಣಕ್ಕಿಳಿಯುವ ಅಂದಾಜಿದೆ.

ಕೇವಲ 35 ರನ್​ಗಳಿಗೆ ಆಲೌಟ್: ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ನೇಪಾಳ13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಮೇ 24ರಂದು ಫೈನಲ್ ಪಂದ್ಯ ನಡೆಯಲಿದೆ.

Youtube Video
First published: February 13, 2020, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories