ಕ್ರೀಡೆ

  • associate partner
HOME » NEWS » Sports » CRICKET IPL 2020 RCB WILL RCB BRING DALE STEYN AGAIN IN IPL AUCTION VB

RCB: ಹರಾಜಿಗೂ ಮುನ್ನ ಕೈಬಿಟ್ಟ ಈ ಸ್ಟಾರ್ ಆಟಗಾರನನ್ನು ಮತ್ತೆ ಖರೀದಿ ಮಾಡಲಿದೆ ಆರ್​​ಸಿಬಿ?

ಟ್ವಿಟ್ಟರ್​​ನಲ್ಲಿ ಆರ್​ಸಿಬಿ ಅಭಿಮಾನಿಗಳು ಡೇಲ್ ಸ್ಟೈನ್​ ಅನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಜೊತೆಗೆ ಮತ್ತೊಬ್ಬ ಆಲ್ರೌಂಡರ್ ಆಟಗಾರ ಮಾರ್ಕಸ್ ಸ್ಟಾಯಿನಿಸ್ ಅವರನ್ನು ರಿಲೀಸ್ ಮಾಡಿದ ಬಗ್ಗೆ ಅಸಮಾದಾನ ಹೊರಹಾಕಿದ್ದಾರೆ.

Vinay Bhat | news18-kannada
Updated:November 20, 2019, 10:33 AM IST
RCB: ಹರಾಜಿಗೂ ಮುನ್ನ ಕೈಬಿಟ್ಟ ಈ ಸ್ಟಾರ್ ಆಟಗಾರನನ್ನು ಮತ್ತೆ ಖರೀದಿ ಮಾಡಲಿದೆ ಆರ್​​ಸಿಬಿ?
ಮೇ ತಿಂಗಳಲ್ಲಿ ನಡೆಯಬೇಕಿದ್ದ ಫುಟ್ಬಾಲ್ ಪಂದ್ಯಾವಳಿಗಳನ್ನು ಕ್ಲೋಸ್ಡ್ ಡೋರ್ ಮಾದರಿಯಲ್ಲಿ ನಡೆಸಲು ಜರ್ಮನಿ ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇರೀತಿ ಐಪಿಎಲ್ ಕೂಡ ನಡೆಸಲು ತೀರ್ಮಾನಿಸಲಾಗಿದೆ ಎಂದು ನಿರೀಕ್ಷಿಸಲಾಗಿತ್ತು.
  • Share this:
ಬೆಂಗಳೂರು (ನ. 20): ಡಿಸೆಂಬರ್ 19 ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಐಪಿಎಲ್ 13ನೇ ಆವೃತ್ತಿಯ ಹರಾಜು ನಡೆಯಲಿದೆ. ಇದಕ್ಕೂ ಮೊದಲು ನಡೆದ ಪ್ರಕ್ರಿಯೆಯಲ್ಲಿ ಎಲ್ಲಾ ಫ್ರಾಂಚೈಸಿ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಅಗತ್ಯವಿಲ್ಲದವರನ್ನು ಬಿಡುಗಡೆ ಮಾಡಿದೆ.

ಈ ಪೈಕಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ 11 ಆಟಗಾರರನ್ನು ಕೈಬಿಟ್ಟು 13 ಪ್ಲೇಯರ್​​​ಗಳನ್ನು ತನ್ನಲ್ಲೆ ಉಳಿಸಿಕೊಂಡಿದೆ. ಆರ್​ಸಿಬಿ ತಂಡ ಮಾರ್ಕಸ್ ಸ್ಟಾಯಿನಿಸ್, ಶಿಮ್ರೋನ್ ಹೆಟ್ಮೇರ್, ಕಾಲಿನ್ ಗ್ರ್ಯಾಂಡ್​ಹೋಮ್, ಟಿಮ್ ಸೌಥಿ, ಡೇಲ್ ಸ್ಟೈನ್, ಹೆನ್ರಿಚ್ ಕ್ಲಾಸೆನ್, ಅಕ್ಷದೀಪ್ ನಾಥ್, ನೇಥನ್ ಕೌಲ್ಟರ್ ನೈಲ್, ಪ್ರಯಾಸ್ ರೇ ಬರ್ಮನ್, ಕುಲ್ವಂತ್ ಕೇಜ್ರೋಲಿಯಾ, ಹಿಮ್ಮತ್ ಸಿಂಗ್, ಮಿಲಿಂದ್ ಕುಮಾರ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.

IPL 2020: Dale Steyn Gives a Fitting Reply to a Fan’s Tweet
ಡೇಲ್ ಸ್ಟೈನ್


ಟೆಸ್ಟ್​​ ಕ್ರಿಕೆಟ್​ ಮೇಲೆತ್ತಲು ಪಿಂಕ್ ಬಾಲ್​​ ಉತ್ತಮ ಮಾರ್ಗ, ಆದರೆ...; ರಾಹುಲ್ ದ್ರಾವಿಡ್

ಅಚ್ಚರಿ ಎಂದರೆ 12ನೇ ಆವೃತ್ತಿಯ ಐಪಿಎಲ್​ನಲ್ಲಿ ಸೋಲಿನಿಂದ ಕಂಗೆಟ್ಟಿದ ಆರ್​ಸಿಬಿಗೆ ತಮ್ಮ ಮಾರಕ ಬೌಲಿಂಗ್ ಮೂಲಕ ಗೆಲುವಿನ ರುಚಿ ನೀಡಿದ ಡೇಲ್ ಸ್ಟೈನ್​ರನ್ನೂ ಆರ್​ಸಿಬಿ ಫ್ರಾಂಚೈಸಿ ರಿಲೀಸ್ ಮಾಡಿ ಶಾಕ್ ನೀಡಿದೆ. ನೇಥನ್ ಕೌಲ್ಟರ್ ನೈಲ್ ಇಂಜುರಿಗೆ ತುತ್ತಾದ ಪರಿಣಾಮ ಆರ್​​ಸಿಬಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್​ರನ್ನು ಹಿಂದಿನ ಆವೃತ್ತಿಯಲ್ಲಿ ಖರೀದಿ ಮಾಡಿತ್ತು.

ಅದರಂತೆ ಅಂತಿಮ ಹಂತದಲ್ಲಿ ಸ್ಟೈನ್ ಅವರು ಕೊಹ್ಲಿ ಪಡೆ ಸೇರಿದ ಪರಿಣಾಮ ದುರ್ಬಲವಾಗಿದ್ದ ಬೌಲಿಂಗ್ ವಿಭಾಗ ಬಲಿಷ್ಠವಾಯಿತು. ಇಂಥಹ ಸ್ಟಾರ್ ಆಟಗಾರನನ್ನು ಈಗ ಆರ್​ಸಿಬಿ ಕೈಬಿಟ್ಟಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಟ್ವಿಟ್ಟರ್​​ನಲ್ಲಿ ಆರ್​ಸಿಬಿ ಅಭಿಮಾನಿಗಳು ಡೇಲ್ ಸ್ಟೈನ್​ ಅನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಜೊತೆಗೆ ಮತ್ತೊಬ್ಬ ಆಲ್ರೌಂಡರ್ ಆಟಗಾರ ಮಾರ್ಕಸ್ ಸ್ಟಾಯಿನಿಸ್ ಅವರನ್ನು ರಿಲೀಸ್ ಮಾಡಿದ ಬಗ್ಗೆ ಅಸಮಾದಾನ ಹೊರಹಾಕಿರುವ ಫ್ಯಾನ್ಸ್​, ಇವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಕೋರಿದ್ದಾರೆ.Yuvraj Singh: ಕೋಚ್ ಆಗಲಿರುವ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್; ಯಾವಾಗ?

 

ಆರ್​ಸಿಬಿ ತನ್ನಲ್ಲೆ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿ.

 

First published: November 20, 2019, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading