ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಸಿಎಸ್ಕೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಇಂದಿನ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳುವ ಮೊದಲ ತಂಡ ಎನಿಸಿಕೊಳ್ಳಲಿದೆ. ಇತ್ತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಸಿಬಿ ಇಂದು ಗೆಲ್ಲುವ ಮೂಲಕ ಪ್ಲೇ ಆಫ್ಗೇರುವುದನ್ನು ಖಚಿತಪಡಿಸಲಿದೆ.
ಐಪಿಎಲ್ನಲ್ಲಿ ಈವರೆಗೆ ಉಭಯ ತಂಡಗಳು 25 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 15 ಬಾರಿ ಗೆಲುವು ದಾಖಲಿಸಿದರೆ, ಆರ್ಸಿಬಿ ಕೇವಲ 9 ರಲ್ಲಿ ಮಾತ್ರ ವಿಜಯ ಸಾಧಿಸಿದೆ. ಹಾಗೆಯೇ ಒಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.
ಈ ಸೀಸನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 37 ರನ್ಗಳಿಂದ ಸೋಲಿಸಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಜೇಯ 90 ರನ್ ಹಾಗೂ ಕ್ರಿಸ್ ಮೋರಿಸ್ ಮೂರು ವಿಕೆಟ್ ಉರುಳಿಸಿ ಆರ್ಸಿಬಿ ಜಯ ತಂದುಕೊಟ್ಟಿದ್ದರು. ಇದೀಗ ಈ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿದೆ ಧೋನಿ ಪಡೆ.
ಐಪಿಎಲ್ 2020ಯ ಕೊನೆಯ ಐದು ಪಂದ್ಯಗಳ ಫಲಿತಾಂಶ:
ಆರ್ಸಿಬಿ ಆಡಿರುವ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿ ಉತ್ತಮ ಫಾರ್ಮ್ನಲ್ಲಿದೆ.
ಸಿಎಸ್ಕೆ ತಂಡವು ಸತತ ಸೋಲಿನಿಂದ ಕಂಗೆಟ್ಟಿದ್ದು, ಕೊನೆಯ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ವಿಜಯ ಸಾಧಿಸಲು ಸಾಧ್ಯವಾಗಿದೆ.
ಉಭಯ ತಂಡಗಳ ಆಟಗಾರರ ಫಾರ್ಮ್:
ತಂಡದ ಪರ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳು
1) ಫಾಫ್ ಡು ಪ್ಲೆಸಿಸ್ (ಸಿಎಸ್ಕೆ) - 376 ರನ್ ಗಳಿಸಿದ್ದಾರೆ.
2) ವಿರಾಟ್ ಕೊಹ್ಲಿ (ಆರ್ಸಿಬಿ) - 365 ರನ್ ಗಳಿಸಿದ್ದಾರೆ.
3) ದೇವದತ್ ಪಡಿಕ್ಕಲ್ (ಆರ್ಸಿಬಿ) - 321 ರನ್ ಗಳಿಸಿದ್ದಾರೆ.
4) ಎಬಿ ಡಿವಿಲಿಯರ್ಸ್ (ಆರ್ಸಿಬಿ) - 285 ರನ್ ಗಳಿಸಿದ್ದಾರೆ.
5) ಶೇನ್ ವ್ಯಾಟ್ಸನ್ (ಸಿಎಸ್ಕೆ) - 285 ರನ್ ಗಳಿಸಿದ್ದಾರೆ.
ಹೆಚ್ಚು ವಿಕೆಟ್ ಪಡೆದ ಬೌಲರುಗಳು:
1) ಯಜುವೇಂದ್ರ ಚಹಲ್ (ಆರ್ಸಿಬಿ) - 15 ವಿಕೆಟ್ಸ್
2) ಸ್ಯಾಮ್ ಕುರ್ರನ್ (ಸಿಎಸ್ಕೆ) - 10 ವಿಕೆಟ್ಸ್
3) ದೀಪಕ್ ಚಹರ್ (ಸಿಎಸ್ಕೆ) - 10 ವಿಕೆಟ್ಸ್
4) ಶಾರ್ದುಲ್ ಠಾಕೂರ್ (ಸಿಎಸ್ಕೆ) - 9 ವಿಕೆಟ್ಸ್
5) ಕ್ರಿಸ್ ಮೋರಿಸ್ (ಆರ್ಸಿಬಿ) - 9 ವಿಕೆಟ್ಸ್
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ