• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RCB ಈ ಆಟಗಾರನನ್ನು ಉಳಿಸಿಕೊಂಡಿದ್ದಕ್ಕೂ ಸಾರ್ಥಕ?; ರಣಜಿಯಲ್ಲಿ ಇವರ ಬೌಲಿಂಗ್ ಬಿರುಗಾಳಿ ನೋಡಿ!

RCB ಈ ಆಟಗಾರನನ್ನು ಉಳಿಸಿಕೊಂಡಿದ್ದಕ್ಕೂ ಸಾರ್ಥಕ?; ರಣಜಿಯಲ್ಲಿ ಇವರ ಬೌಲಿಂಗ್ ಬಿರುಗಾಳಿ ನೋಡಿ!

ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಬೌಲ್ಡ್​ ಆದ ಬ್ಯಾಟ್ಸ್​ಮನ್​​

ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಬೌಲ್ಡ್​ ಆದ ಬ್ಯಾಟ್ಸ್​ಮನ್​​

ಎರಡನೇ ಇನ್ನಿಂಗ್ಸ್​​ನಲ್ಲಿ ಕೇರಳದ ಆರಂಭಿಕ ಬ್ಯಾಟ್ಸ್​ಮನ್​ ಪೂನಮ್ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್​ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇವರ ಬೌಲಿಂಗ್ ಬಿರುಗಾಳಿ ಕಂಡು ಆರ್​ಸಿಬಿ ಅಭಿಮಾನಿಗಳು ಖುಷಿಯಾಗಿದ್ದು, ಈ ಬಾರಿಯ ಐಪಿಎಲ್​ನಲ್ಲಿ ಮಾರಕ ದಾಳಿಯನ್ನು ನಿರೀಕ್ಷಿಸಲಾಗಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಜ. 07): ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ತಮಗೆ ಅಗತ್ಯವಿಲ್ಲದ, ಕಳೆದ ಸೀಸನ್​ನಲ್ಲಿ ಕೆಟ್ಟ ಪ್ರದರ್ಶನ ನೀಡಿದ ಆಟಗಾರರನ್ನು ಕೈಬಿಟ್ಟಿತ್ತು. ಆದರೆ, ದುಬಾರಿ ಬೌಲರ್ ಎನಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್​ ಅವರನ್ನು ಮಾತ್ರ ತನ್ನಲ್ಲೆ ಉಳಿಸಿಕೊಂಡಿತ್ತು.

ಸಿರಾಜ್​ನನ್ನು ಆರ್​ಸಿಬಿ ಉಳಿಸಿಕೊಂಡಿದ್ದಕ್ಕೆ ಬೆಂಗಳೂರು ಅಭಿಮಾನಿಗಳು ಗರಂ ಆಗಿದ್ದರು. ಕಳೆದ ಎರಡೂ ಸೀಸನ್​ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಸಿರಾಜ್​ನನ್ನು ಈ ಬಾರಿಯೂ ಉಳಿಸಿಕೊಂಡಿದ್ದಕ್ಕೆ ನೆಟ್ಟಿಗರು ಕಿಡಿ ಕಾರಿದ್ದರು.

IPL 2020: RCB Player Mohammed Siraj sends stumps flying with sharp inswinger in Ranji Trophy
ಮೊಹಮ್ಮದ್ ಸಿರಾಜ್


India vs Sri Lanka Live: ಟಾಸ್ ಗೆದ್ದ ಭಾರತ; ಕೊಹ್ಲಿ ಪಡೆಯ ಆಡುವ ಬಳಗ ಇಲ್ಲಿದೆ ನೋಡಿ!

ಆದರೆ, ಸದ್ಯ ಸಾಗುತ್ತಿರುವ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿ ಸಿರಾಜ್ ಸುದ್ದಿಯಲ್ಲಿದ್ದಾರೆ. ರಣಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್ ಬೆಂಕಿಯ ಚೆಂಡನ್ನು ಉಗುಳುತ್ತಿದ್ದಾರೆ.

ನಿನ್ನೆಗೆ ಅಂತ್ಯಕಂಡ ಕೇರಳ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಹೈದರಾಬಾದ್ ಗೆಲ್ಲಲು ಪ್ರಮುಖ ಕಾರಣ ಮೊಹಮ್ಮದ್ ಸಿರಾಜ್. ಕೇರಳ ಬ್ಯಾಟ್ಸ್​ಮನ್​ಗಳನ್ನು ಬಂದಷ್ಟೆ ವೇಗದಲ್ಲಿ ಪೆವಿಲಿಯನ್​ಗೆ ಅಟ್ಟಿದ ಸಿರಾಜ್ ಎರಡೂ ಇನ್ನಿಂಗ್ಸ್​ ಸೇರಿ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಅದರಲ್ಲು ಎರಡನೇ ಇನ್ನಿಂಗ್ಸ್​​ನಲ್ಲಿ ಕೇರಳದ ಆರಂಭಿಕ ಬ್ಯಾಟ್ಸ್​ಮನ್​ ಪೂನಮ್ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್​ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇವರ ಬೌಲಿಂಗ್ ಬಿರುಗಾಳಿ ಕಂಡು ಆರ್​ಸಿಬಿ ಅಭಿಮಾನಿಗಳು ಖುಷಿಯಾಗಿದ್ದು, ಈ ಬಾರಿಯ ಐಪಿಎಲ್​ನಲ್ಲಿ ಮಾರಕ ದಾಳಿಯನ್ನು ನಿರೀಕ್ಷಿಸಲಾಗಿದೆ.

 



 




View this post on Instagram




 

Ranji trophy 🏆 2020


A post shared by Mohammed Siraj (@mohammedsirajofficial) on





ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 164 ರನ್​ಗೆ ಸರ್ವಪತನ ಕಂಡಿತು. ಸಿರಾಜ್ ಹಾಗೂ ರವಿ ಕಿರಣ್  4 ವಿಕೆಟ್ ಕಿತ್ತು ಮಿಂಚಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಹೈದರಾಬಾದ್ ಕೊಲ್ಲಾ ಸುಮಂತ್ ಅವರ ಅಜೇಯ 111 ರನ್​ಗಳ ನೆರವಿನಿಂದ 228 ರನ್ ಬಾರಿಸಿತು.

IND vs SL: ಮೊದಲ ಟಿ-20 ಪಂದ್ಯ ನಡೆಯದಿದ್ದರೂ ಸೃಷ್ಟಿಯಾಯಿತು ಹೊಸ ವಿವಾದ!

64 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಶುರುಮಾಡಿದ ಕೇರಳ 218 ರನ್ ಕಲೆಹಾಕಿತು. ಈ ಮೂಲಕ ಹೈದರಾಬಾದ್​​ಗೆ 155 ರನ್​ಗಳ ಟಾರ್ಗೆಟ್ ನೀಡಿತು. ಸುಲಭ ಗುರಿ ಬೆನ್ನಟ್ಟಿದ ಹೈದರಾಬಾದ್ 46 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

Published by:Vinay Bhat
First published: