ಕ್ರೀಡೆ

  • associate partner
HOME » NEWS » Sports » CRICKET IPL 2020 RAJASTHAN ROYALS WANT AB DE VILLIERS VIRAT KOHLI RCB OFFER MR NAGS IN RETURN VB

ಕೊಹ್ಲಿ-ಎಬಿಡಿಯನ್ನು ಖರೀದಿಸಲು ಮುಂದಾದ ರಾಜಸ್ಥಾನ್; ಆರ್​ಸಿಬಿ ನೀಡಿದ ಉತ್ತರವೇನು ಗೊತ್ತಾ?

ಇತ್ತ ರಾಜಸ್ಥಾನ್ ತಂಡ 9 ವರ್ಷಗಳ ಬಳಿಕ ಅಜಿಂಕ್ಯ ರಹಾನೆಯನ್ನು ಕೈಬಿಟ್ಟಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದಾರೆ. ಇವೆಲ್ಲದರ ನಡುವೆ ರಾಜಸ್ಥಾನ್ ತಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಇಬ್ಬರು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ.

Vinay Bhat | news18-kannada
Updated:November 15, 2019, 10:47 AM IST
ಕೊಹ್ಲಿ-ಎಬಿಡಿಯನ್ನು ಖರೀದಿಸಲು ಮುಂದಾದ ರಾಜಸ್ಥಾನ್; ಆರ್​ಸಿಬಿ ನೀಡಿದ ಉತ್ತರವೇನು ಗೊತ್ತಾ?
ಹಾಗಾದ್ರೆ ಚುಟುಕು ಕ್ರಿಕೆಟ್ನ ಮಿಲಿಯನ್ ಡಾಲರ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದ್ವಿಶತಕ ಸಿಡಿಸಿಸುವ ಸಾಮರ್ಥ್ಯವಿರುವ ನಾಲ್ವರು ಆಟಗಾರರನ್ನು ನೋಡುವುದಾದರೆ…
  • Share this:
ಬೆಂಗಳೂರು (ನ. 15): 13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನೊಂದು ತಿಂಗಳು ಬಾಕಿ ಇದೆಯಷ್ಟೆ. ಹೀಗಿರುವಾಗ ಎಲ್ಲಾ ಫ್ರಾಂಚೈಸಿಗಳು ಬದಲಿ ಆಟಗಾರರನ್ನು ತೆಗೆದುಕೊಳ್ಳುವುದು ಹಾಗೂ ರಿಲೀಸ್ ಮಾಡುವ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದೆ.

ಈಗಾಗಲೇ ಅಚ್ಚರಿ ಎಂಬಂತೆ ಸ್ಟಾರ್ ಆಟಗಾರರನ್ನು ಕೆಲವು ತಂಡ ಕೈಬಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿದ್ದ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್​ ಮುಂಬೈ ಇಂಡಿಯನ್ಸ್​ ಪಾಲಾದರೆ, ಅಪಾಯಕಾರಿ ಆಲ್ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ.

ಇತ್ತ ರಾಜಸ್ಥಾನ್ ತಂಡ 9 ವರ್ಷಗಳ ಬಳಿಕ ಅಜಿಂಕ್ಯ ರಹಾನೆಯನ್ನು ಕೈಬಿಟ್ಟಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ಪಾಲಾಗಿದ್ದಾರೆ. ಇವೆಲ್ಲದರ ನಡುವೆ ರಾಜಸ್ಥಾನ್ ತಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಇಬ್ಬರು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ.

India vs Bangladesh Live: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ; ಸೊನ್ನೆ ಸುತ್ತಿದ ಕ್ಯಾಪ್ಟನ್ ಕೊಹ್ಲಿ

 ಆರ್​ಸಿಬಿ ತಂಡದ ಇಬ್ಬರು ಪ್ರಮುಖ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ ಅವರನ್ನು ನಮಗೆ ನೀಡುತ್ತೀರಾ? ಎಂದು ರಾಜಸ್ಥಾನ್ ರಾಯಲ್ಸ್​ ತಂಡ ಟ್ವಿಟ್ಟರ್ ಮೂಲಕ ಆರ್​ಸಿಬಿ ಬಳಿ ಕೇಳಿದೆ.

ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ಬೆಂಗಳೂರು ತಂಡ, ಆರ್​ಸಿಬಿ ಇನ್​​ಸೈಡರ್ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಮಿಸ್ಟರ್ ನ್ಯಾಗ್ಸ್​ರನ್ನು ನಿಮಗೆ ನೀಡುತ್ತೇವೆ. ಅವರಿಗೆ ಮತ್ತೆ ಹಿಂತುರುಗಿ ನಮ್ಮ ತಂಡ ಸೇರಿಕೊಳ್ಳುವ ಹಾದಿ ತಿಳಿದಿದೆ ಎಂದು ಟ್ವೀಟ್ ಮಾಡಿದೆ.

IPL: 2018ರ ಐಪಿಎಲ್ ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?

 ಸದ್ಯ ಆರ್​ಸಿಬಿ ಹಾಗೂ ರಾಜಸ್ಥಾನ್ ನಡುವಣ ಫನ್ನಿ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. 13ನೇ ಆವೃತ್ತಿಯ ಐಪಿಎಲ್​ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಆರ್​ಸಿಬಿ ತನ್ನಲ್ಲೆ ಉಳಿಸಿಕೊಂಡ ಹಾಗೂ ಕೈಬಿಡುವ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಂದು ನೀಡಲಿದೆ.

First published: November 15, 2019, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading