IPL 2020: ಪಂಜಾಬ್ ತಂಡದಿಂದ ಅಶ್ವಿನ್ ಔಟ್?; ಕಿಂಗ್ಸ್​​ಗೆ ಈ ಸ್ಟಾರ್ ಆಟಗಾರ ಕ್ಯಾಪ್ಟನ್!

2018ರ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಅಶ್ವಿನ್​ರನ್ನು 7.8 ಕೋಟಿಗೆ ಖರೀದಿ ಮಾಡಿತ್ತು. ಪಂಜಾಬ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್ 25 ವಿಕೆಟ್ ಪಡೆದಿದ್ದಾರೆ.

Vinay Bhat | news18-kannada
Updated:August 25, 2019, 1:03 PM IST
IPL 2020: ಪಂಜಾಬ್ ತಂಡದಿಂದ ಅಶ್ವಿನ್ ಔಟ್?; ಕಿಂಗ್ಸ್​​ಗೆ ಈ ಸ್ಟಾರ್ ಆಟಗಾರ ಕ್ಯಾಪ್ಟನ್!
ಆರ್ ಅಶ್ವಿನ್ ಹಾಗೂ ಕೆ ಎಲ್ ರಾಹುಲ್
  • Share this:
ಬೆಂಗಳೂರು (ಆ. 25): ರವಿಚಂದ್ರನ್ ಅಶ್ವಿನ್​ಗೆ ಕೆಟ್ಟ ಸಮಯ ಭಾರೀ ಆಘಾತ ನೀಡುತ್ತಿದೆ. ಈಗಾಗಲೇ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ನಿಂದ ವಂಚಿತರಾಗಿರುವ ಅಶ್ವಿನ್​ಗೆ ಮತ್ತೊಂದು ಶಾಕ್ ಎದುರಾಗಿದೆ.

ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿರುವ ಅಶ್ವಿನ್​ರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲು ಫ್ರಾಂಚೈಸಿ ತೀರ್ಮಾನಿಸಿದೆ. ಅಲ್ಲದೆ ತಂಡದಿಂದಲೇ ಕೈಬಿಡುವ ನಿರ್ಧಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಅಶ್ವಿನ್ ನಾಯಕತ್ವದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಕ್ರಮವಾಗಿ ಆರು ಹಾಗೂ ಏಳನೇ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಇದನ್ನ ಮನಗಂಡು ಪಂಜಾಬ್ ಈ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

IPL 2020: R Ashwin likely to be replaced as KXIP captain, might lose his place in the side too
ಆರ್ ಅಶ್ವಿನ್


ಅಶ್ವಿ‌ನ್‌ ಅವರನ್ನು ಬೇರೆ ತಂಡಕ್ಕೆ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದು, ವಾರದೊಳಗೆ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಮಾಹಿತಿಯ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡ 32 ವರ್ಷದ ಅಶ್ವಿನ್ ಅವರನ್ನು ಖರೀದಿಸಲು ಮುಂದೆ ಬಂದಿದೆ ಎನ್ನಲಾಗಿದೆ. ಅಲ್ಲದೇ ರಾಜಸ್ಥಾನ ರಾಯಲ್ಸ್​ ಕೂಡಾ ಅಶ್ವಿನ್​ರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಎದುರು ನೋಡುತ್ತಿದೆಯಂತೆ.

ಭಾರತ-ವೆಸ್ಟ್​ ಇಂಡೀಸ್ ಮೊದಲ ಟೆಸ್ಟ್​ನಲ್ಲಿ ಸೃಷ್ಟಿಯಾಯಿತು ಕೆಟ್ಟ ದಾಖಲೆ!

2018ರ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಅಶ್ವಿನ್​ರನ್ನು 7.8 ಕೋಟಿಗೆ ಖರೀದಿ ಮಾಡಿತ್ತು. ಪಂಜಾಬ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್ 25 ವಿಕೆಟ್ ಪಡೆದಿದ್ದಾರೆ.ಇನ್ನು 2020ರ ಐಪಿಎಲ್​ನಲ್ಲಿ ಪಂಜಾಬ್ ತಂಡವನ್ನು ಕನ್ನಡಿಗ ಕೆ ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಪಂಜಾಬ್ ಪರ ಆರಂಭಿಕ ಆಟಗಾರನಾಗಿ ಯಶಸ್ವಿ ಕಂಡಿರುವ ರಾಹುಲ್​ಗೆ ನಾಯಕತ್ವದ ಜವಾಬ್ದಾರಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

First published:August 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ