ಕ್ರೀಡೆ

  • associate partner

IPL 2020 Auction: ಆರ್​ಸಿಬಿ ಈ ಆಟಗಾರನನ್ನು ಖರೀದಿಸಲು 15 ಕೋಟಿ ನೀಡಲು ಮುಂದಾಗಿತ್ತು; ಆದರೆ…

Latest IPL 2020 Auction Updates: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಒಟ್ಟು ಎಂಟು ಹೊಸ ಪ್ಲೇಯರ್​​ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.

Vinay Bhat | news18-kannada
Updated:December 20, 2019, 12:17 PM IST
IPL 2020 Auction: ಆರ್​ಸಿಬಿ ಈ ಆಟಗಾರನನ್ನು ಖರೀದಿಸಲು 15 ಕೋಟಿ ನೀಡಲು ಮುಂದಾಗಿತ್ತು; ಆದರೆ…
ಆರ್​ಸಿಬಿ, ಐಪಿಎಲ್ 2020
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಿನ್ನೆ ಕೋಲ್ಕತ್ತಾದಲ್ಲಿ ಅಂತ್ಯಕಂಡಿದೆ. ಎಲ್ಲ ಫ್ರಾಂಚೈಸಿಗಳು ಹಣದ ಹೊಳೆಯನ್ನೇ ಹರಿಸಿದ್ದು, ಪ್ರಮುಖ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಹರಾಜಿಗೆ ಲಭ್ಯವಿದ್ದ 332 ಆಟಗಾರರ ಪೈಕಿ 8 ತಂಡಗಳು ಸೇರಿ 140.3 ಕೋಟಿ ಖರ್ಚು ಮಾಡಿ ಖಾಲಿಯಿದ್ದ 73 ಪ್ಲೇಯರ್​​ಗಳನ್ನು ಖರೀದಿ ಮಾಡಿದೆ.

ಮೊದಲ ಸುತ್ತಿನಲ್ಲೇ ಪ್ಯಾಟ್‌ ಕಮಿನ್ಸ್‌ ದಾಖಲೆಯ 15 ಕೋಟಿ 50 ಲಕ್ಷ ರೂ ಬೆಲೆಗೆ ಕೋಲ್ಕತ್ತಾ ನೈಟ್ ರೈಡರ್ಸ್​ ಪಾಲಾದರು. ನಂತರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

IPL RCB Team 2020 Players List: ಆರ್​ಸಿಬಿ ತಂಡ ಸೇರಿದ ಹೊಸ 8 ಆಟಗಾರರು; ಒಬ್ಬ ಕನ್ನಡಿಗ!

ಬಳಿಕ ಆರ್​ಸಿಬಿ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರನಾದರು. ಶೆಲ್ಡನ್ ಕಾಟ್ರೆಲ್ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ 8.50 ಕೋಟಿಗೆ ಹಾಗೂ ನೇಥನ್ ಕಲ್ಟನ್ ನೈಲ್ 8 ಕೋಟಿಗೆ ಮುಂಬೈ ಇಂಡಿಯನ್ಸ್​ ಪಾಲಾದರು.

ಈ ಬಾರಿಯ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆದ ಪ್ಯಾಟ್ ಕಮಿನ್ಸ್​ ಅವರನ್ನು ಪಡೆದುಕೊಳ್ಳಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಕೂಡ ಕೋಲ್ಕತ್ತಾ ಜೊತೆ ಕಠಿಣ ಪೈಪೋಟಿ ನಡೆಸಿತು. ಅದು ಬರೋಬ್ಬರಿ 15 ಕೋಟಿ 25 ಲಕ್ಷ ವರೆಗೆ ಎಂದರೆ ನಂಬಲೇಬೇಕು.

 2020 IPL Players List: 73 ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ; ಇಲ್ಲಿದೆ ಕಂಪ್ಲೀಟ್ ಲಿಸ್ಟ್​

2 ಕೋಟಿಯಿಂದ ಶುರುವಾದ ಬಿಡ್ಡಿಂಗ್ 15.25 ಕೋಟಿ ವರೆಗೆ ಸಾಗಿತು. ಆದರೆ, ಕೆಕೆಆರ್ ಇನ್ನೂ 25 ಲಕ್ಷ ಹೆಚ್ಚು ಸೇರಿಸಿ 15 ಕೋಟಿ 50 ಲಕ್ಷಕ್ಕೆ ಆಸೀಸ್ ವೇಗಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆರ್​ಸಿಬಿ ಪರ್ಸ್​​ನಲ್ಲಿ ಹೆಚ್ಚುನ ಹಣ ಇಲ್ಲದ ಕಾರಣ 15 ಕೋಟಿ 25 ಲಕ್ಷಕ್ಕಿಂತ ಅಧಿಕ ಬಿಡ್ ಮಾಡಲು ಮುಂದಾಗಲಿಲ್ಲ.ಆದರೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಒಟ್ಟು ಎಂಟು ಹೊಸ ಪ್ಲೇಯರ್​​ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಹರಾಜಿಗೂ ಮುನ್ನ ಆರ್​ಸಿಬಿ ತನ್ನಲ್ಲೆ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿ.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಆ್ಯರೋನ್ ಫಿಂಚ್, ಕ್ರಿಸ್ ಮೊರೀಸ್, ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಇಸ್ರು ಉದಾನ, ಜೋಶ್ ಪಿಲಿಪ್, ಶಹ್ಬಾಜ್ ಅಹ್ಮದ್ ಹಾಗೂ ಪವನ್ ದೇಶಪಾಂಡೆ.
Published by: Vinay Bhat
First published: December 20, 2019, 12:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading