IPL 2020 Player Auction: ಬರೋಬ್ಬರಿ 10 ಕೋಟಿ ಕೊಟ್ಟು ಆಫ್ರಿಕಾದ ಸ್ಟಾರ್ ಆಟಗಾರರನ್ನು ಖರೀದಿಸಿದ ಆರ್​ಸಿಬಿ

Indian Premier League (IPL) 2020 Player Auction: ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ರಿಸ್ ಮೊರೀಸ್ ಅವರನ್ನು ಆರ್​ಸಿಬಿ ಬರೋಬ್ಬರಿ 10 ಕೋಟಿ ಕೊಟ್ಟು ಖರೀದಿ ಮಾಡಿದೆ. ಇವರನ್ನು ಪಡೆದುಕೊಳ್ಳಲು ಕೆಕೆಆರ್, ಡೆಲ್ಲಿ ಸೇರಿದಂತೆ ಪ್ರಮುಖ ಫ್ರಾಂಚೈಸಿ ಆರ್​ಸಿಬಿಗೆ ಸವಾಲೊಡ್ಡಿತು. ಆದರೆ, ಅಂತಿಮವಾಗಿ ಮೊರೀಸ್ ಬೆಂಗಳೂರು ಪಾಲಾಗಿದ್ದಾರೆ.

Vinay Bhat | news18-kannada
Updated:December 19, 2019, 4:41 PM IST
IPL 2020 Player Auction: ಬರೋಬ್ಬರಿ 10 ಕೋಟಿ ಕೊಟ್ಟು ಆಫ್ರಿಕಾದ ಸ್ಟಾರ್ ಆಟಗಾರರನ್ನು ಖರೀದಿಸಿದ ಆರ್​ಸಿಬಿ
ಆರ್​ಸಿಬಿ ತಂಡ
  • Share this:
ಐಪಿಎಲ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ಸಾಗುತ್ತಿದೆ. ಹರಾಜಿಗೆ ನೋಂದಾಯಿಸಿಕೊಂಡಿರುವ ಒಟ್ಟು 322 ಆಟಗಾರರ ಪೈಕಿ 186 ಭಾರತೀಯ ಆಟಗಾರರು, 143 ವಿದೇಶಿ ಆಟಗಾರರು, ಮೂವರು ಐಸಿಸಿ ಸಹಾಯಕ ರಾಷ್ಟ್ರಗಳ ಆಟಗಾರರು ಇದ್ದಾರೆ.

ಈ 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದಾಗಿದೆ. ಈ ಪೈಕಿ ಸದ್ಯ ಆರ್​ಸಿಬಿ ಇಬ್ಬರು ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಮೊದಲಿಗೆ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಆ್ಯರೋನ್ ಫಿಂಚ್ ಅವರನ್ನು 4 ಕೋಟಿ 40 ಲಕ್ಷಕ್ಕೆ ಆರ್​ಸಿಬಿ ಖರೀದಿ ಮಾಡಿದೆ.

 


ಫಿಂಚ್ ಖರೀದಿಗೆ ಹೆಚ್ಚಿನ ಫ್ರಾಂಚೈಸಿ ಮುಂದೆಬಂದಿತಾದರು ಅಂತಿಮವಾಗಿ ಆರ್​ಸಿಬಿ ಪಾಲಾಗಿದ್ದಾರೆ. ಫಿಂಚ್ 75 ಐಪಿಎಲ್ ಪಂದ್ಯಗಳನ್ನು ಆಡಿದ್ದು, 1737 ರನ್ ಕಲೆಹಾಕಿದ್ದಾರೆ. ಇದರಲ್ಲಿ 13 ಅರ್ಧಶತಕ ಸಿಡಿಸಿ 88 ಗರಿಷ್ಠ ಸ್ಕೋರ್ ಆಗಿದೆ. ಇವರ ಸ್ಟ್ರೈಕ್​ರೇಟ್​​ 130.

ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ರಿಸ್ ಮೊರೀಸ್ ಅವರನ್ನು ಆರ್​ಸಿಬಿ ಬರೋಬ್ಬರಿ 10 ಕೋಟಿ ಕೊಟ್ಟು ಖರೀದಿ ಮಾಡಿದೆ. ಇವರನ್ನು ಪಡೆದುಕೊಳ್ಳಲು ಕೆಕೆಆರ್, ಡೆಲ್ಲಿ ಸೇರಿದಂತೆ ಪ್ರಮುಖ ಫ್ರಾಂಚೈಸಿ ಆರ್​ಸಿಬಿಗೆ ಸವಾಲೊಡ್ಡಿತು. ಆದರೆ, ಅಂತಿಮವಾಗಿ ಮೊರೀಸ್ ಬೆಂಗಳೂರು ಪಾಲಾಗಿದ್ದಾರೆ.

 ಉಳಿದಂತೆ ಈವರೆಗೆ ನಡೆದ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಆಟಗಾರ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್​. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಸೇರಿಸಿಕೊಂಡಿದ್ದಾರೆ.

IPL 2020 Player Auction Live: 10 ಕೋಟಿಗೆ ಆರ್​ಸಿಬಿ ಪಾಲಾದ ಕ್ರಿಸ್ ಮೊರೀಸ್!

ಕ್ರಿಸ್ ಲಿನ್ 2 ಕೋಟಿಗೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ. ಈಯಾನ್ ಮಾರ್ಗನ್ 5 ಕೋಟಿ 25 ಲಕ್ಷಕ್ಕೆ ಕೆಕೆಆರ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕರ್ನಾಟಕದ ರಾಬಿನ್ ಉತ್ತಪ್ಪ 3 ಕೋಟಿಗೆ ರಾಜಸ್ಥಾನ್ ರಾಯಲ್ಸ್​ ತಂಡದ ಪಾಲಾಗಿದ್ದಾರೆ.

ಹನುಮಾ ವಿಹಾರಿ ಹಾಗೂ ಚೇತೇಶ್ವರ್ ಪೂಜಾರ ಸೇಲ್ ಆಗದೆ ಉಳಿದಿದ್ದಾರೆ. ಸ್ಟಾರ್ ಆಟಗಾರ ಜೇಸನ್ ರಾಯ್ 1.50 ಕೋಟಿಗೆ ಡೆಲ್ಲಿ ತಂಡ ಸೇರಿಸಿಕೊಂಡಿದೆ. ಆಸೀಸ್​ನ ಮತ್ತೊಬ್ಬ ಸ್ಟಾರ್ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕ್ರಿಸ್ ವೋಕ್ಸ್​ 1.50 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ.  ಯೂಸುಫ್ ಪಠಾಣ್ ಹಾಗೂ ಕಾಲಿನ್ ಗ್ರ್ಯಾಂಡ್​​ಹೋಮ್​ ಸೇಲ್ ಆಗದೆ ಉಳಿದಿದ್ದಾರೆ.
First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading