IPL 2020 Player Auction Live: ಕೊನೆಗೂ ಸ್ಟೈನ್ ಖರೀದಿಸಿದ ಆರ್​ಸಿಬಿ

Live Indian Premier League (IPL) 2020 Player Auction: ಐಪಿಎಲ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. 332 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದಾಗಿದೆ. ಮೊದಲು ಬ್ಯಾಟ್ಸ್‌ಮನ್‌ಗಳ ಹರಾಜು ಪ್ರಕ್ರಿಯೆ, ಬಳಿಕ ಆಲ್ರೌಂಡರ್‌ಗಳು, ವಿಕೆಟ್‌ ಕೀಪರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳ ಹರಾಜು ನಡೆಯಲಿದೆ.

Vinay Bhat | news18-kannada
Updated:December 19, 2019, 8:47 PM IST
IPL 2020 Player Auction Live: ಕೊನೆಗೂ ಸ್ಟೈನ್ ಖರೀದಿಸಿದ ಆರ್​ಸಿಬಿ
ಐಪಿಎಲ್ ಹರಾಜು 2020
  • Share this:
ಕೋಲ್ಕತ್ತಾ (ಡಿ. 19): ಐಪಿಎಲ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ಸಾಗುತ್ತಿದೆ. ಹರಾಜಿಗೆ ನೋಂದಾಯಿಸಿಕೊಂಡಿರುವ ಒಟ್ಟು 322 ಆಟಗಾರರ ಪೈಕಿ 186 ಭಾರತೀಯ ಆಟಗಾರರು, 143 ವಿದೇಶಿ ಆಟಗಾರರು, ಮೂವರು ಐಸಿಸಿ ಸಹಾಯಕ ರಾಷ್ಟ್ರಗಳ ಆಟಗಾರರು ಇದ್ದಾರೆ.

ಈ 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದಾಗಿದೆ. 7 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿಪಡಿಸಿಕೊಂಡರೆ, 10 ಆಟಗಾರರು 1.5 ಕೋಟಿ, 23 ಆಟಗಾರರು 1 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ.

ಡೇಲ್ ಸ್ಟೈನ್ ಅವರನ್ನು ಕೊನೆಗೂ 2 ಕೋಟಿಗೆ ಖರೀದಿ ಮಾಡಿದ ಆರ್​​ಸಿಬಿ. ಶಹ್ಬಾಜ್ ಅಹ್ಮದ್ 20 ಲಕ್ಷಕ್ಕೆ ಆರ್​ಸಿಬಿ ಪಾಲು.

ಎರಡನೇ ಸುತ್ತಿನಲ್ಲಿ ಮೋಹಿತ್ ಶರ್ಮಾ ಅವರನ್ನು ಡೆಲ್ಲಿ 50 ಲಕ್ಷಕ್ಕೆ ತನ್ನ ತಂಡ ಸೇರಿಸಿಕೊಂಡಿದೆ. ಪವನ್ ದೇಶಪಾಂಡೆ 20 ಲಕ್ಷಕ್ಕೆ ಆರ್​ಸಿಬಿ ಪಾಲು. ಪ್ರಬಿಸ್​ಇಮ್ರಾಂ ಸಿಂಗ್ 55 ಲಕ್ಷಕ್ಕೆ ಪಂಜಾಬ್ ತಂಡಕ್ಕೆ. ಸಾಯಿಕಿಶೋರ್ 20 ಲಕ್ಷಕ್ಕೆ ಚೆನ್ನೈ ಪಾಲು. ಬೆನ್ ಕಟ್ಟಿಂಗ್ ಅನ್​ಸೋಲ್ಡ್​. ಮಾರ್ಕಸ್ ಸ್ಟಾಯ್ನಿಸ್ 4 ಕೋಟಿ 80 ಲಕ್ಷಕ್ಕೆ ಡೆಲ್ಲಿ ಪಾಲಾಗಿದ್ದಾರೆ.

ಕ್ರಿಸ್ ಜಾರ್ಡನ್ 3 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ವೇಗಿ ಕೇನ್ ರಿಚರ್ಡಸನ್ ಅವರು 4 ಕೋಟಿಗೆ ಆರ್​ಸಿಬಿ ಪಾಲಾಗಿದ್ದಾರೆ. ಅಬ್ದುಲ್ ಸಮದ್ 20 ಲಕ್ಷ ಕೊಟ್ಟು ಹೈದರಾಬಾದ್ ತಂಡ ಖರೀದಿ ಮಾಡಿದೆ. ವೆಸ್ಟ್​ ಇಂಡೀಸ್​ನ ಕೆಸ್ರಿಕ್ ವಿಲಿಯಮ್ಸ್ ಅನ್​ಸೋಲ್ಡ್ ಆಗಿದ್ದಾರೆ. ಅನಿರುದ್ಧ್ ಜೋಷಿ 20 ಲಕ್ಷಕ್ಕೆ ಆರ್​ಆರ್​ ಪಾಲು. ಸಂಜಯ್ ಯಾದವ್ ಅವರನ್ನು 20 ಲಕ್ಷಕ್ಕೆ ಹೈದರಾಬಾದ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕಾಲಿನ್ ಗ್ರ್ಯಾಂಡ್​ಹೋಮ್ ಅನ್​ಸೋಲ್ಡ್​.

ಆಲ್ರೌಂಡರ್ ಸಂದೀಪ್ ಬವನಕರ್ 20 ಲಕ್ಷಕ್ಕೆ ಪಂಜಾಬ್ ಖರೀದಿ ಮಾಡಿದೆ. ಕ್ರಿಸ್ ಗ್ರಿನ್ 20 ಲಕ್ಷಕ್ಕೆ ಚೆನ್ನೈ ಪಾಲಾಗಿದ್ದಾರೆ. ಜೋಶ್ ಫಿಲಿಪ್ ಅವರನ್ನು 20 ಲಕ್ಷಕ್ಕೆ ಆರ್​ಸಿಬಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಮೊಯಿಸಿನ್ ಖಾನ್ 20 ಲಕ್ಷಕ್ಕೆ ಮುಂಬೈ ಪಾಲು. ಟಾಮ್ ಬಾಂಥಮ್ 1 ಕೋಟಿಗೆ ಕೆಕೆಆರ್ ಖರೀದಿ ಮಾಡಿದೆ.

ಮಿಚೆಲ್ ಮಾರ್ಶ್​​ ಅವರನ್ನು 2 ಕೋಟಿಗೆ ಸನ್​ರೈಸರ್ಸ್​ ತಂಡ ಖರೀದಿ ಮಾಡಿದೆ. ಆಲ್ರೌಂಡರ್ ಜೇಮ್ಸ್​ ನೀಶಮ್ 50 ಲಕ್ಷಕ್ಕೆ ಪಂಜಾಬ್ ತಂಡ ಸೇರಿಸಿಕೊಂಡಿದೆ. ಜೋಶ್ ಹ್ಯಾಜ್ಲೆವುಡ್ ಅವರನ್ನು ಚೆನ್ನೈ ತಂಡ 2 ಕೋಟಿಗೆ ಖರೀದಿ ಮಾಡಿದೆ.ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್​ಮನ್​ ಶಿಮ್ರೋನ್ ಹೆಟ್ಮೇರ್ 7 ಕೋಟಿ 75 ಲಕ್ಷಕ್ಕೆ ಡೆಲ್ಲಿ ಪಾಲಾಗಿದ್ದಾರೆ. ಮನೋಜ್ ತಿವಾರಿ, ಕಾಲಿನ್ ಇನ್​ಗ್ರಾಂ, ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್​ಮನ್​ ಮಾರ್ಟಿನ್ ಗಪ್ಟಿಲ್ ಅನ್​ಸೋಲ್ಡ್.

ಸ್ಪಿನ್ ಬೌಲರ್ ಕೆಸಿ ಕರಿಯಪ್ಪ ಅವರನ್ನು ಯಾವುದೇ ತಂಡ ಖರೀದಿಸಲು ಮುಂದೆ ಬಂದಿಲ್ಲ. ಎಂ. ಸಿದ್ಧಾರ್ಥ್​​ 20 ಲಕ್ಷಕ್ಕೆ ಕೆಕೆಆರ್ ಪಾಲಾಗಿದ್ದಾರೆ. ರವಿ ಬಿಶ್ನೊಯಿ ಅವರನ್ನು 2 ಕೋಟಿಗೆ ಪಂಜಾಬ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. 14 ವರ್ಷ ಅಫ್ಘಾನ್ ಸ್ನಿನ್ನರ್ ನೂರ್ ಅಹ್ಮದ್ ಅಲ್​ಸೋಲ್ಡ್ ಆಗಿದ್ದಾರೆ.

ವೇಗದ ಬೌಲರ್ ಪೈಕಿ ಆಕಾಶ್ ಸಿಂಗ್ 20 ಲಕ್ಷಕ್ಕೆ ಹಾಗೂ ಕಾರ್ತಿಕ್ ತ್ಯಾಗಿ  1 ಕೋಟಿ 30 ಲಕ್ಷಕ್ಕೆ ಆರ್​ಆರ್​ ತಂಡದ ಪಾಲಾಗಿದ್ದಾರೆ. ​​ ತಂಡ ತನ್ನ ತಕ್ಕೆಗೆ ಸೇರಿಸಿಕೊಂಡಿದೆ.

ವಿಕೆಟ್ ಕೀಪರ್ ಅನುಜ್ ರಾವತ್ ಅವರನ್ನು 80 ಲಕ್ಷಕ್ಕೆ ರಾಜಸ್ಥಾನ್ ತಂಡ ಖರೀದಿ ಮಾಡಿದೆ. ಆಲ್ರೌಂಡರ್ ಪೈಕಿ ಶಾರುಖ್ ಖಾನ್ ಅನ್​ಸೋಲ್ಡ್ ಆದರೆ, ದೀಪಕ್ ಹೂಡ್ 50 ಲಕ್ಷಕ್ಕೆ ಪಂಜಾಬ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಸೀಸನ್​ನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದ ವರುಣ್ ಚಕ್ರವರ್ತಿ ಈ ಬಾರಿ 4 ಕೋಟಿಗೆ ಕೆಕೆಆರ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಯಶಸ್ವಿ ಜೈಸ್ವಾಲ್ 2 ಕೋಟಿ 40 ಲಕ್ಷಕ್ಕೆ ಆರ್​ಆರ್​​​ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಬ್ಯಾಟ್ಸ್​ಮನ್​ ಮಂಜೋತ್ ಕಲ್ರ ಮೂಲಬೆಲೆ 20 ಲಕ್ಷ ಸೇಲ್ ಆಗದೆ ಉಳಿದಿದ್ದಾರೆ. ರಾಹುಲ್ ತ್ರಿಪಾಠಿ 60 ಲಕ್ಷಕ್ಕೆ ಕೆಕೆಆರ್ ಪಾಲಾಗಿದ್ದಾರೆ. ವಿರಾಟ್ ಸಿಂಗ್ ಅವರನ್ನು 1 ಕೋಟಿ 90 ಲಕ್ಷಕ್ಕೆ ಹೈದರಾಬಾದ್ ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಪ್ರಿಯಾಮ್ ಗಾರ್ಗ್ 1 ಕೋಟಿ 90 ಲಕ್ಷಕ್ಕೆ ಸನ್​ರೈಸರ್ಸ್​​ ತಂಡ ಸೇರಿಕೊಂಡಿದ್ದಾರೆ.

ಬೌಲರ್​​ಗಳ ಪೈಕಿ ವೆಸ್ಟ್​ ಇಂಡೀಸ್​ನ ಶೆಲ್ಡನ್ ಕಾಟ್ರೆಲ್ 8 ಕೋಟಿ 50 ಲಕ್ಷಕ್ಕೆ ಪಂಜಾಬ್ ಫ್ರಾಂಚೈಸಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಮೊಹಿತ್ ಶರ್ಮಾ ಅನ್​ಸೋಲ್ಡ್ ಆದರೆ, ಸ್ಟಾರ್ ವೇಗಿ ಡೇಲ್ ಸ್ಟೈನ್​ ಸೇಲ್ ಆಗದೆ ಉಳಿದಿದ್ದಾರೆ. ಜೈದೇವ್ ಉನಾದ್ಕಟ್ 3 ಕೋಟಿಗೆ ರಾಜಸ್ಥಾನ್ ಖರೀದಿ ಮಾಡಿದ್ದಾರೆ. ನೇಥನ್ ಕಲ್ಟರ್ ನೈಲ್ 8 ಕೋಟಿಗೆ ಮುಂಬೈ ಪಾಲಾಗಿದ್ದಾರೆ. ಟಿಮ್ ಸೌಥಿ ಸೇಲ್ ಆಗದೆ ಉಳಿದಿದ್ದಾರೆ. ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಜಂಪಾ ಅವರನ್ನು ಯಾವೊಂದು ಫ್ರಾಂಚೈಸಿ ಖರೀದಿಸಿಲ್ಲ. 

ವಿಕೆಟ್ ಕೀಪರ್ ಅಲೆಕ್ಸ್​ ಕ್ಯಾರಿ 2 ಕೋಟಿಯ 40 ಲಕ್ಷಕ್ಕೆ ಡೆಲ್ಲಿ ಪಾಲಾಗಿದ್ದಾರೆ. ಹೆನ್ರಿಚ್ ಕ್ಲಾಸೆನ್ ಅವರು ಸೇಲ್ ಆಗದೆ ಉಳಿದರು. ಶಾಯ್ ಹೋಪ್ ಕೂಡ ಹರಾಜಾಗದೆ ಉಳಿದಿದ್ದಾರೆ.

ಆಸೀಸ್ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್​​ ಅವರಿಗೆ ಆರ್​ಸಿಬಿ ಹಾಗೂ ಕೆಕೆಆರ್​​ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಕಮಿನ್ಸ್​ 15 ಕೋಟಿ 50 ಲಕ್ಷಕ್ಕೆ ಕೆಕೆಆರ್​​ ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಸ್ಯಾಮ್ ಕುರ್ರನ್ 5 ಕೋಟಿ 50 ಲಕ್ಷಕ್ಕೆ ಚೆನ್ನೈ ತಂಡದ ಪಾಲಾಗಿದ್ದಾರೆ.

ಕ್ರಿಸ್ ಮೊರೀಸ್​ ಖರೀದಿಸಲು ಹೆಚ್ಚಿನ ಫ್ರಾಂಚೈಸಿ ಮುಂದೆಬಂತಾದರು ಅಂತಿಮವಾಗಿ 10 ಕೋಟಿಗೆ ಆರ್​ಸಿಬಿ ಪಾಲಾಗಿದ್ದಾರೆ. ಸ್ಟುವರ್ಟ್​ ಬಿನ್ನಿ ಸೇಲ್ ಆಗದೆ ಉಳಿದಿದ್ದಾರೆ. 

ಕ್ರಿಸ್ ಲಿನ್ 2 ಕೋಟಿಗೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ. ಈಯಾನ್ ಮಾರ್ಗನ್ 5 ಕೋಟಿ 25 ಲಕ್ಷಕ್ಕೆ ಕೆಕೆಆರ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕರ್ನಾಟಕದ ರಾಬಿನ್ ಉತ್ತಪ್ಪ 3 ಕೋಟಿಗೆ ರಾಜಸ್ಥಾನ್ ರಾಯಲ್ಸ್​ ತಂಡದ ಪಾಲಾಗಿದ್ದಾರೆ.

ಹನುಮಾ ವಿಹಾರಿ ಹಾಗೂ ಚೇತೇಶ್ವರ್ ಪೂಜಾರ ಸೇಲ್ ಆಗದೆ ಉಳಿದಿದ್ದಾರೆ. ಸ್ಟಾರ್ ಆಟಗಾರ ಜೇಸನ್ ರಾಯ್ 1.50 ಕೋಟಿಗೆ ಡೆಲ್ಲಿ ತಂಡ ಸೇರಿಸಿಕೊಂಡಿದೆ. ಆ್ಯರೋನ್ ಫಿಂಚ್​ ಪಡೆದುಕೊಳ್ಳಲು ಹೆಚ್ಚಿನ ತಂಡ ಕಸರತ್ತು ನಡೆಸಿತು. ಅಂತಿಮವಾಗಿ ಫಿಂಚ್ 4.40 ಕೋಟಿಗೆ ಆರ್​ಸಿಬಿ ತಂಡದ ಪಾಲಾಗಿದ್ದಾರೆ.

ಆಸೀಸ್​ನ ಮತ್ತೊಬ್ಬ ಸ್ಟಾರ್ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕ್ರಿಸ್ ವೋಕ್ಸ್​ 1.50 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ.  ಯೂಸುಫ್ ಪಠಾಣ್ ಹಾಗೂ ಕಾಲಿನ್ ಗ್ರ್ಯಾಂಡ್​​ಹೋಮ್​ ಸೇಲ್ ಆಗದೆ ಉಳಿದಿದ್ದಾರೆ.
First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ