ಬಿಗ್​ಬ್ಯಾಷ್​ನಲ್ಲಿ ಹೊಸ ಆರ್​​ಸಿಬಿ ಆಟಗಾರನ ಸಿಡಿಲಬ್ಬರದ ಬ್ಯಾಟಿಂಗ್; ಸ್ಫೋಟಕ ಆಟ ಹೇಗಿತ್ತು ಗೊತ್ತಾ?

ಇವರ ಬಿರುಸಿನ ಆಟದ ನೆರವಿನಿಂದ ಸಿಡ್ನಿ ತಂಡ 19.3 ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು 180 ರನ್ ಚಚ್ಚಿ 7 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

Vinay Bhat | news18-kannada
Updated:January 5, 2020, 9:24 PM IST
ಬಿಗ್​ಬ್ಯಾಷ್​ನಲ್ಲಿ ಹೊಸ ಆರ್​​ಸಿಬಿ ಆಟಗಾರನ ಸಿಡಿಲಬ್ಬರದ ಬ್ಯಾಟಿಂಗ್; ಸ್ಫೋಟಕ ಆಟ ಹೇಗಿತ್ತು ಗೊತ್ತಾ?
ಜೋಷ್ ಪಿಲಿಪ್
  • Share this:
ಕಳೆದ ಡಿಸೆಂಬರ್​ನಲ್ಲಿ ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾದ ಜೋಷ್ ಪಿಲಿಪ್ ಬಿಗ್​ಬ್ಯಾಷ್​ ಟಿ-20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಸುದ್ದಿಯಲ್ಲಿದ್ದಾರೆ.

ಬಿಗ್​ಬ್ಯಾಷ್​ನಲ್ಲಿ ಸಿಡ್ನಿ ಸಿಕ್ಸರ್ಸ್​ ತಂಡದ ಪರ ಆಡುತ್ತಿರುವ ಪಿಲಿಪ್ ಅವರು ಅಡೊಲೇಡ್ ಸ್ಟ್ರೈಕರ್ಸ್​ ತಂಡ ವಿರುದ್ಧ ಕೇವಲ 52 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 83 ರನ್ ಚಚ್ಚಿದ್ದಾರೆ.

Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!

ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ತಂಡ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಜಾನಥನ್ ವೆಲ್ಸ್ 28 ಎಸೆತಗಳಲ್ಲಿ ಅಜೇಯ 40 ಹಾಗೂ ಅಲೆಕ್ಸ್​ ಕ್ಯಾರಿ 29 ರನ್ ಗಳಿಸಿದರು.

 177 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಸಿಡ್ನಿ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಜೋಷ್ ಪಿಲಿಪ್ ಹಾಗೂ ಜಸ್ಟಿನ್ ಅವೆಂಡನೊ ಅಮೋಘ ಆಟವಾಡಿದರು. ಪಿಲಿಪ್ ಅಜೇಯ 83 ರನ್ ಬಾರಿಸಿದರೆ, ಜಸ್ಟಿನ್ 47 ರನ್ ಗಳಿಸಿದರು.

ಇವರ ಬಿರುಸಿನ ಆಟದ ನೆರವಿನಿಂದ ಸಿಡ್ನಿ ತಂಡ 19.3 ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು 180 ರನ್ ಚಚ್ಚಿ 7 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

IPL 2020: ಐಪಿಎಲ್​​ನಿಂದ ದೂರ ಸರಿದರೂ ಈ ಆಟಗಾರನ ದಾಖಲೆ ಮುರಿಯುವುದು ಕಷ್ಟಸಾಧ್ಯ!

ಡಿ. 19 ರಂದು ನಡೆದ ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ವಿಕೆಟ್- ಕೀಪರ್, ಆರಂಭಿಕ ಬ್ಯಾಟ್ಸ್​ಮನ್​​ ಜೋಷ್ ಪಿಲಿಪ್ ಅವರನ್ನು ಮೂಲಬೆಲೆ 20 ಲಕ್ಷ ಕೊಟ್ಟು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

ಸದ್ಯ ಬಿಗ್​​ಬ್ಯಾಷ್​ನಲ್ಲಿ ಸ್ಫೋಟಕ ಆಟವಾಡುತ್ತಿರುವ 22 ವರ್ಷದ ಪಿಲಿಪ್ ಆರ್​ಸಿಬಿ ತಂಡದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

First published:January 5, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ