MS Dhoni Video: 7 ತಿಂಗಳ ಬಳಿಕ ಮೈದಾನಕ್ಕಿಳಿದ ಧೋನಿ; ಚೇಪಕ್​ನಲ್ಲಿMSD ಅಭ್ಯಾಸ ಹೀಗಿದೆ ನೋಡಿ!

IPL 2020: 38 ವರ್ಷದ ಧೋನಿ ಅವರು ಕೊನೆಯ ಬಾರಿಗೆ 2019ರ ವಿಶ್ವಕಪ್‌ನಲ್ಲಿ ಕ್ರಿಕೆಟ್ ಬ್ಯಾಟ್ ಬೀಸಿದ್ದರು. ಆದರೆ, ನಿಧಾನಗತಿ ಬ್ಯಾಟಿಂಗ್ ಶೈಲಿಯಿಂದ ಅವರು ಟೀಕೆಗೆ ಗುರಿಯಾಗಿದ್ದರು.

ಐಪಿಎಲ್ನ ಎಲ್ಲ ಫ್ರಾಂಚೈಸಿಗಳು ತರಬೇತಿ ಶಿಬಿರವನ್ನು ಅರ್ಧದಲ್ಲೆ ಮುಟುಕುಗೊಳಿಸಿವೆ. ಅಭ್ಯಾಸಕ್ಕೆಂದು ಚೆನ್ನೈಗೆ ಬಂದಿದ್ದ ಮಹೇಂದ್ರ ಸಿಂಗ್ ಧೋನಿ ಕೂಡ ತವರೂರು ರಾಂಚಿಗೆ ಮರಳಿದ್ದಾರೆ.

ಐಪಿಎಲ್ನ ಎಲ್ಲ ಫ್ರಾಂಚೈಸಿಗಳು ತರಬೇತಿ ಶಿಬಿರವನ್ನು ಅರ್ಧದಲ್ಲೆ ಮುಟುಕುಗೊಳಿಸಿವೆ. ಅಭ್ಯಾಸಕ್ಕೆಂದು ಚೆನ್ನೈಗೆ ಬಂದಿದ್ದ ಮಹೇಂದ್ರ ಸಿಂಗ್ ಧೋನಿ ಕೂಡ ತವರೂರು ರಾಂಚಿಗೆ ಮರಳಿದ್ದಾರೆ.

 • Share this:
  ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತಯಾರಿ ನಡೆಸಲು ಈಗಾಗಲೇ ಚೆನ್ನೈಗೆ ಆಗಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ಪ್ರಾಂಚೈಸಿ ಧೋನಿ ಅವರಿಗೆ ಅದ್ಧೂರಿ ಸ್ವಾಗತ ನೀಡಿದೆ.

  ಇದರ ಬೆನ್ನಲ್ಲೆ ಧೋನಿ ಅವರು ಬರೋಬ್ಬರಿ ಏಳು ತಿಂಗಳ ಬಳಿಕ ಮೈದಾನಕ್ಕಿಳಿದಿದ್ದು, ಚೇಪಕ್​ನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಕೂಡ ಶುರುಮಾಡಿದ್ದಾರೆ. ಧೋನಿ ನೆಟ್​ನಲ್ಲಿ ಪ್ರ್ಯಾಕ್ಟೀಸ್ ನಡೆಸುವುದನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

     IPL 2020: ಹಾವಿನ ದ್ವೇಷ 12 ವರುಷ...ಆರ್​ಸಿಬಿಯಲ್ಲಿ ಸರ್ವ ಕನ್ನಡಮಯ

  ಮೂಲಗಳ ಪ್ರಕಾರ ಸುರೇಶ್​ ರೈನಾ ಹಾಗೂ ಅಂಬಟಿ ರಾಯಡು ಕೂಡ ಇಂದಿನಿಂದ ಅಭ್ಯಾಸ ಆರಂಭಿಸಲಿದ್ದಾರೆ. ಮಾರ್ಚ್​​ 29ರಿಂದ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡ ಕಾದಾಟ ನಡೆಸಲಿವೆ.

     IND vs SA: ರೋಹಿತ್ ಗಾಯಾಳು, ಕೊಹ್ಲಿಗೆ ವಿಶ್ರಾಂತಿ; ದ.ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ನಾಯಕ ಇವರೇ?

  38 ವರ್ಷದ ಧೋನಿ ಅವರು ಕೊನೆಯ ಬಾರಿಗೆ 2019ರ ವಿಶ್ವಕಪ್‌ನಲ್ಲಿ ಕ್ರಿಕೆಟ್ ಬ್ಯಾಟ್ ಬೀಸಿದ್ದರು. ಆದರೆ, ನಿಧಾನಗತಿ ಬ್ಯಾಟಿಂಗ್ ಶೈಲಿಯಿಂದ ಅವರು ಟೀಕೆಗೆ ಗುರಿಯಾಗಿದ್ದರು.

  ಎಂಎಸ್ ಧೋನಿಗೆ ಈ ಬಾರಿಯ ಐಪಿಎಲ್ ಬಹಳ ಮುಖ್ಯವಾಗಿದೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ ಅಕ್ಟೋಬರ್​ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದರು.

      

  First published: