IPL : ತಂಡ ಇವರನ್ನು ರಿಲೀಸ್ ಮಾಡಿದ ಬೆನ್ನಲ್ಲೇ ನಾನು ಐಪಿಎಲ್ ಆಡಲ್ಲ ಎಂದ ಸ್ಟಾರ್ ಆಟಗಾರ!

2019ರ ಐಪಿಎಲ್​ನಲ್ಲಿ 26 ವರ್ಷ ಪ್ರಾಯದ ಲೈಮ್ ಲೆವಿಂಗ್​ಸ್ಟನ್​ಗೆ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಆಡಿದ್ದು ಕೇವಲ ನಾಲ್ಕು ಪಂದ್ಯವನ್ನಷ್ಟೆ. ಆದರೆ ಇವರ ಸ್ಟ್ರೈಕ್​ರೇಟ್ 147.91 ಆಗಿತ್ತು.

Vinay Bhat | news18-kannada
Updated:November 19, 2019, 3:53 PM IST
IPL : ತಂಡ ಇವರನ್ನು ರಿಲೀಸ್ ಮಾಡಿದ ಬೆನ್ನಲ್ಲೇ ನಾನು ಐಪಿಎಲ್ ಆಡಲ್ಲ ಎಂದ ಸ್ಟಾರ್ ಆಟಗಾರ!
ಲೈಮ್ ಲೆವಿಂಗ್​ಸ್ಟನ್
  • Share this:
ಬೆಂಗಳೂರು (ನ. 19): ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್​ನಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದೆಷ್ಟೊ ಕ್ರಿಕೆಟಿಗರು ಸ್ಟಾರ್ ಆಗಿಬಿಡುತ್ತಾರೆ. ಇಂಥಹ ಟಿ-20 ಹಬ್ಬದಲ್ಲಿ ನಾನು ಆಡಲ್ಲ ಎಂದು ಇಂಗ್ಲೆಂಡ್​ನ ಆಲ್ರೌಂಡರ್ ಆಟಗಾರ ಲೈಮ್ ಲೆವಿಂಗ್​ಸ್ಟನ್ ಹೇಳಿದ್ದಾರೆ.

ಕಳೆದ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ಪರ ಆಡಿದ್ದ ಲೆವಿಂಗ್​ಸ್ಟನ್​ನ​ನ್ನುಈ ಬಾರಿ ಹರಾಜಿಗೂ ಮುನ್ನವೇ ತಂಡದಿಂದ ಕೈಬಿಡಲಾಗಿದೆ. ಇದಾದ ಬೆನ್ನಲ್ಲೆ ಲೆವಿಂಗ್​ಸ್ಟನ್, ನಾನು ಈ ಬಾರಿಯ ಐಪಿಎಲ್​ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ.

ಡಿಸೆಂಬರ್​ 19 ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ, ಲೈಮ್​ ಅವರು ತಾನು 2020 ಐಪಿಎಲ್​ಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

Mayanti Langer: ಗಂಡನ ಜೊತೆ ಮಯಾಂತಿ ಚಿಲ್ಲಿಂಗ್; ಇಲ್ಲಿವೆ ಹಾಟ್ ಫೋಟೋಗಳು

ಈಗಷ್ಟೆ ಇಂಗ್ಲೆಂಡ್ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಲೈಮ್ ಟೆಸ್ಟ್​ ಕ್ರಿಕೆಟ್​​ನತ್ತ ಹೆಚ್ಚಿನ ಗಮನ ಹರಿಸಲು ನಿರ್ಧಾರಿಸಿದ್ದಾರಂತೆ. ಐಪಿಎಲ್​ ಸಂದರ್ಭದಲ್ಲಿ ಕೌಂಟಿ ಕ್ರಿಕೆಟ್​ ಆಡಲು ಪ್ಲಾನ್ ಮಾಡಿಕೊಂಡಿದ್ದಾರಂತೆ.

"ರಾಜಸ್ಥಾನ್ ರಾಯಲ್ಸ್​ ಜೊತೆಗೆ ಕಳೆದ ಬಾರಿಯ ಐಪಿಎಲ್​ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ಈ ಬಾರಿ ಐಪಿಎಲ್​ಗೆ ನಾನು ಲಭ್ಯವಿಲ್ಲ. ರೆಡ್ ಬಾಲ್ ಕ್ರಿಕೆಟ್​ನತ್ತ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ಆದರೆ, ನನ್ನ ಪ್ರೋತ್ಸಾಹ ಆರ್​ಆರ್​ ತಂಡಕ್ಕೆ ಸದಾ ಇರುತ್ತದೆ. ನೀವು ಟ್ರೋಪಿ ಎತ್ತಿ ಹಿಡಿಯುವದನ್ನು ನಾನು ಎದುರು ನೋಡುತ್ತೇನೆ" ಎಂದು ಲ್ಯಾಮ್ ಹೇಳಿದ್ದಾರೆ.

 


2019ರ ಐಪಿಎಲ್​ನಲ್ಲಿ 26 ವರ್ಷ ಪ್ರಾಯದ ಲೈಮ್ ಲೆವಿಂಗ್​ಸ್ಟನ್​ಗೆ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಆಡಿದ್ದು ಕೇವಲ ನಾಲ್ಕು ಪಂದ್ಯವನ್ನಷ್ಟೆ. ಆದರೆ ಇವರ ಸ್ಟ್ರೈಕ್​ರೇಟ್ 147.91 ಆಗಿತ್ತು. ರಾಜಸ್ಥಾನ್ ರಾಯಲ್ಸ್​ ಬಳಿ ಸದ್ಯ 28.90 ಕೋಟಿ ಹಣ ಬಾಕಿಉಳಿದಿದೆ.

IPL 2020: ಈ 3 ಆಟಗಾರರಿಗಾಗಿ ಆರ್​​ಸಿಬಿ ಹಾಗೂ ಸಿಎಸ್​ಕೆ ಮಧ್ಯೆ ನಡೆಯಲಿದೆ ಬಿಗ್ ಫೈಟ್!

 ಆರ್​ಆರ್​ ತಂಡ ಬಿಡುಗಡೆ ಮಾಡಿದ ಆಟಗಾರರು: ಅಸ್ಟನ್ ಟರ್ನರ್, ಒಶಾನೆ ಥೋಮಸ್, ಶುಭಂ ರಂಜನ್, ಪ್ರಶಾಂತ್ ಚೋಪ್ರಾ, ಇಶ್ ಸೋಧಿ, ಆರ್ಯಮನ್ ಬಿರ್ಲ, ಜಯದೇವ್ ಉನಾದ್ಕಟ್, ರಾಹುಲ್ ತ್ರಿಪಾಠಿ, ಸ್ಟುವರ್ಟ್​ ಬಿನ್ನಿ, ಲ್ಯಾಮ್ ಲಿವಿಂಗ್​ಸ್ಟಾನ್, ಸುದೇಶನ್ ಮಿಧುನ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಜೀಫ್ರಾ ಆರ್ಚೆರ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ರಿಯಾನ್ ಪರಾಗ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಮಹಿಪಾಲ್ ಮುಮ್ರೂರ್, ವರುಣ್ ಆರುಣ್, ಮನನ್ ವೋಹ್ರಾ, ಮಯಾಂಕ್ ಮಾರ್ಕಂಡೆ, ರಾಹುಲ್ ತೇವಾಟಿಯ, ಅಂಕಿತ್ ರಜ್ಪೂತ್.

First published: November 19, 2019, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading