IPL 2020: ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಬೇಕಿದ್ದ ಬೌಲರ್​​ 3 ತಿಂಗಳು ಬ್ಯಾನ್!

ಗ್ರೀನ್​ ಅವರ ಬೌಲಿಂಗ್​ ನಿಯಮ ಬಾಹಿರವಾಗಿರುವುದು ಸಾಬೀತಾಗಿದ್ದು, ಅವರನ್ನು 90 ದಿನಗಳ ಕಾಲ ಯಾವುದೇ ಕ್ರಿಕೆಟ್​ನಲ್ಲಿ ಆಡದಂತೆ ನಿಷೇಧಿಸಲಾಗಿದೆ.

news18-kannada
Updated:January 9, 2020, 8:08 AM IST
IPL 2020: ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಬೇಕಿದ್ದ ಬೌಲರ್​​ 3 ತಿಂಗಳು ಬ್ಯಾನ್!
ಕೆಕೆಆರ್ ತಂಡ
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಾಲಾಗಿದ್ದ ಆಸ್ಟ್ರೇಲಿಯಾದ ಯುವ ಆಫ್ ಸ್ಪಿನ್ನರ್ ಕ್ರಿಸ್‌ ಗ್ರೀನ್, ಅನುಮಾನಾಸ್ಪದ ಬೌಲಿಂಗ್ ಆರೋಪದ ಕಾರಣ 3 ತಿಂಗಳ ಕಾಲ ನಿಷೇಧಿಸಲ್ಪಟ್ಟಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಗ್ರೀನ್‌ಗೆ ನಿಷೇಧ ಶಿಕ್ಷೆ ವಿಧಿಸಿದೆ.

ಡಿ. 19 ರಂದು ನಡೆದ ಐಪಿಎಲ್ ಹರಾಜಿನಲ್ಲಿ ಕ್ರಿಸ್‌ ಗ್ರೀನ್‌ ಅವರನ್ನು 20 ಲಕ್ಷ ರೂ. ಗಳ ಮೂಲ ಬೆಲೆಗೆ ಕೆಕೆಆರ್‌ ತಂಡ ಖರೀದಿಸಿತ್ತು.

ಸಿಡ್ನಿ ಥಂಡರ್ಸ್‌ ತಂಡದ 26 ವರ್ಷದ ಆಫ್‌ ಸ್ಪಿನ್ನರ್‌ ಗ್ರೀನ್‌ ಅವರ ಬೌಲಿಂಗ್‌ ಶಂಕಾಸ್ಪದವಾಗಿರುವ ಕಾರಣ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಬೌಲಿಂಗ್‌ ಮಾಡದಂತೆ ನಿಷೇಧಕ್ಕೊಳಗಾಗಿದ್ದಾರೆ.

ಹಸಿದ ಮಗುವ ನೋಡಿ ಕರಗಿತು ಕ್ರಿಕೆಟಿಗನ ಮನ: ಮೈದಾನದಲ್ಲೇ ಆಹಾರ ಹಂಚಿಕೊಂಡು ತಿಂದ ಭಾರತದ ಆಟಗಾರ

IPL 2020: Kolkata Knight Riders’ Chris Green banned from bowling for 3 months by Cricket Australia
ಕ್ರಿಸ್ ಗ್ರೀನ್


ಜನವರಿ 2 ರಂದು ನಡೆದಿದ್ದ ಮೆಲ್ಬೋರ್ನ್​ ಸ್ಟಾರ್ಸ್​ ವಿರುದ್ಧದ ಪಂದ್ಯದಲ್ಲಿ ನಿಯಮಬಾಹಿರವಾಗಿ ಬೌಲಿಂಗ್​ ಮಾಡಿದ್ದಾರೆ ಎಂದು ಅಂಪೈರ್​ಗಳು ವರದಿ ನೀಡಿದ್ದರು. ಹೀಗಾಗಿ ರಾಷ್ಟ್ರೀಯ ಕ್ರಿಕೆಟ್​ ಕೇಂದ್ರದಲ್ಲಿ ಜನವರಿ 5 ರಂದು ಪರೀಕ್ಷೆ ನಡೆಸಲಾಯಿತು.

ಸದ್ಯ ಗ್ರೀನ್​ ಅವರ ಬೌಲಿಂಗ್​ ನಿಯಮ ಬಾಹಿರವಾಗಿರುವುದು ಸಾಬೀತಾಗಿದ್ದು, ಅವರನ್ನು 90 ದಿನಗಳ ಕಾಲ ಯಾವುದೇ ಕ್ರಿಕೆಟ್​ನಲ್ಲಿ ಆಡದಂತೆ ನಿಷೇಧಿಸಲಾಗಿದೆ.ಕೊಹ್ಲಿ-ಸ್ಮಿತ್​ಗೆ ಟಕ್ಕರ್ ಕೊಡಲು ಯುವ ಆಟಗಾರ ಎಂಟ್ರಿ: ಕೇವಲ 14 ಪಂದ್ಯಗಳನ್ನಾಡಿ 3ನೇ ರ‍್ಯಾಂಕ್ ಪಡೆದ ಕ್ರಿಕೆಟಿಗ

ಇದರೊಂದಿಗೆ ಕ್ರಿಸ್‌ ಗ್ರೀನ್‌, ಮಾರ್ಚ್‌ 29ರಂದು ಆರಂಭವಾಗಲಿರುವ 57 ದಿನಗಳ ಕಾಲ ನಡೆಯುವ ಸುದೀರ್ಘಾವಧಿಯ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಐಪಿಎಲ್‌ ಗವರ್ನಿಂಗ್ ಕೌನ್ಸಿಲ್‌ನಿಂದ ಅನುಮೋದನೆ ಲಭಿಸಬೇಕು.

First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ